ಬೆಂಗಳೂರು:ಆಕರ್ಷಕ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗುವ ಖಾಸಗಿ ಹೋಟೆಲ್​ಗಳು ಆ ಸೌಲಭ್ಯ ಒದಗಿಸುವುದು ಕಡ್ಡಾಯ. ವಿಫಲವಾದಲ್ಲಿ ದಂಡ ತೆರುವ ಪರಿಸ್ಥಿತಿ ಎದುರಿಸುವುದು ಗ್ಯಾರಂಟಿ. ಜಾಹೀರಾತಿನಲ್ಲಿ ಹೇಳಿರುವಂತೆ ಉಚಿತ ಹಾಗೂ ಸುರಕ್ಷಿತ ರ್ಪಾಂಗ್ ವ್ಯವಸ್ಥೆ ಕಲ್ಪಿಸದೆ ಗ್ರಾಹಕನ ಬೈಕ್ ಕಳುವಿಗೆ ಕಾರಣವಾದ ಹೋಟೆಲ್​ಗೆ ಗ್ರಾಹಕ ನ್ಯಾಯಾಲಯ 15 ಸಾವಿರ ರೂ. ದಂಡ ವಿಧಿಸಿದೆ.
ಹೋಟೆಲ್ ಬುಕ್ ಮಾಡುವ ಸಂದರ್ಭದಲ್ಲಿ ಉಚಿತ ಹಾಗೂ ಸುರಕ್ಷಿತ ರ್ಪಾಂಗ್ ವ್ಯವಸ್ಥೆ ಲಭ್ಯವಿದೆ ಎಂದು ನಮೂದಿಸಿರುವುದನ್ನು ಗಮನಿಸಿದ್ದ ದೂರುದಾರರು ಹೋಟೆಲ್ ರ್ಪಾಂಗ್ ಸ್ಥಳದಲ್ಲಿ ಬೈಕ್ ನಿಲುಗಡೆ ಮಾಡಿದ್ದಾರೆ. ಜಾಹೀರಾತಿನಲ್ಲಿ ಹೇಳಲಾಗಿದ್ದ ಸೌಲಭ್ಯ ಒದಗಿಸುವುದು ಹೋಟೆಲ್​ನ ಜವಾಬ್ದಾರಿ. ಹೀಗಿದ್ದರೂ ಬೈಕ್ ಕಳವಾಗಿರುವುದು ಹೋಟೆಲ್​ನ ಸೇವಾ ನ್ಯೂನತೆ ತೋರಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ದೂರುದಾರರಿಗಾದ ಮಾನಸಿಕ ಕಿರುಕುಳಕ್ಕೆ 10 ಸಾವಿರ ರೂ. ಹಾಗೂ ವ್ಯಾಜ್ಯದ ವೆಚ್ಚ 5 ಸಾವಿರ ರೂ. ಸೇರಿ ಒಟ್ಟು 15 ಸಾವಿರ ರೂ. ಪರಿಹಾರ ನೀಡುವಂತೆ ಹೋಟೆಲ್​ಗೆ ಆದೇಶಿಸಿದೆ.
ಪ್ರಕರಣವೇನು?:ಸಾಫ್ಟ್​ವೇರ್ ಕಂಪನಿಯೊಂದರ ಉದ್ಯೋಗಿಯಾಗಿರುವ ಸಾಗರ್ ಅರೋರಾ, 2018ರ ಆ.21ರಂದು ಆನ್​ಲೈನ್ ವೆಬ್​ಸೈಟ್ ಮೂಲಕ ಸಿಂಗಸಂದ್ರದ ಖಾಸಗಿ ಹೋಟೆಲ್​ನಲ್ಲಿ 2,141 ರೂ. ಪಾವತಿಸಿ ರೂಂ ಬುಕ್ ಮಾಡಿದ್ದರು. ಹೋಟೆಲ್​ನಲ್ಲಿ ರ್ಪಾಂಗ್ ವ್ಯವಸ್ಥೆ ಲಭ್ಯವಿರುವುದಾಗಿ ಹೇಳಲಾಗಿತ್ತು. ಅದೇ ದಿನ ಸಂಜೆ 6.45ಕ್ಕೆ ಹೋಟೆಲ್​ಗೆ ತೆರಳಿದ್ದ ಸಾಗರ್, ರ್ಪಾಂಗ್ ಸ್ಥಳದಲ್ಲಿ ತಮ್ಮ ರಾಯಲ್ ಎನ್​ಫೀಲ್ಡ್ ಬೈಕ್ ನಿಲ್ಲಿಸಿ ರಾತ್ರಿ ತಂಗಿದ್ದರು. ಮರುದಿನ ಬೆಳಗ್ಗೆ ರೂಂ ಖಾಲಿ ಮಾಡಿ ತೆರಳುವಾಗ ಬೈಕ್ ಕಳವಾಗಿರುವುದು ಗೊತ್ತಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಬೆಳಗ್ಗೆ 4.45ಕ್ಕೆ ಅಪರಿಚಿತ ವ್ಯಕ್ತಿಗಳು ಬೈಕ್ ಕದ್ದೊಯ್ದಿರುವುದು ಬೆಳಕಿಗೆ ಬಂದಿತ್ತು. ಸಾಗರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬೈಕ್ ಕಳವು ಪ್ರಕರಣದ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದ ಹೋಟೆಲ್ ಆಡಳಿತ ಮಂಡಳಿ, 3 ದಿನಗಳ ಬಳಿಕ ಬೈಕ್ ಕಳವು ಪ್ರಕರಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲವೆಂದು ಕೈಚೆಲ್ಲಿತ್ತು.
ಈ ಮಧ್ಯೆ ಇನ್ಶೂರೆನ್ಸ್ ಕಂಪನಿ ಸಾಗರ್​ಗೆ 94,185 ರೂ. ಪಾವತಿಸಿತ್ತು. ಬೈಕ್​ಗೆ 1,35,000 ರೂ. ಪಾವತಿಸಿದ್ದು, ಬಾಕಿ ಹಣ ಪಾವತಿಸಲು ಹೋಟೆಲ್​ಗೆ ಆದೇಶಿಸಬೇಕು ಹಾಗೂ ಹೋಟೆಲ್​ನ ಬೇಜವಾಬ್ದಾರಿತನದಿಂದ ಬೈಕ್ ಕಳವಾಗಿದ್ದು, ಹೆಚ್ಚಿನ ಹಣ ಖರ್ಚು ಮಾಡಿ ಕ್ಯಾಬ್​ನಲ್ಲಿ ಓಡಾಡುವಂತಾಗಿತ್ತು. ತಾವು ಅನುಭವಿಸಿದ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಪರಿಹಾರ ಕೊಡಿಸಬೇಕೆಂದು ಕೋರಿ ಸಾಗರ್ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
ಕೋರ್ಟ್ ಹೇಳಿದ್ದೇನು?
ದೂರುದಾರರು 2016ರಲ್ಲಿ 1,35,000 ರೂ. ಪಾವತಿಸಿ ಬೈಕ್ ಖರೀದಿಸಿದ್ದು, ಇನ್ಶೂರೆನ್ಸ್ ಕಂಪನಿ 94,185 ರೂ. ಪಾವತಿಸಿದೆ. ಈಗಾಗಲೇ ಎರಡೂವರೆ ವರ್ಷ ಬೈಕ್ ಉಪಯೋಗಿಸಿದ್ದು, ಅದರ ಸವಕಳಿ ಮೌಲ್ಯವನ್ನೂ ಪರಿಗಣಿಸಬೇಕಾಗುತ್ತದೆ. ಆದ್ದರಿಂದ, ಇನ್ಶೂರೆನ್ಸ್ ಹಣದ ಹೊರತಾಗಿ ಬೈಕ್​ನ ಬಾಕಿ ಮೊತ್ತ ಪಾವತಿಗೆ ಸಂಬಂಧಿಸಿದಂತೆ ದೂರುದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಹೋಟೆಲ್​ನ ನಿರ್ಲಕ್ಷ್ಯದಿಂದ ದೂರುದಾರರಿಗೆ ಅನನುಕೂಲ ಉಂಟಾಗಿದ್ದು, 15 ಸಾವಿರ ರೂ. ಪರಿಹಾರ ನೀಡುವುದು ಸೂಕ್ತವಾಗಿದೆ ಎಂದು ಗ್ರಾಹಕ ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
| ಜಗನ್ ರಮೇಶ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
