| ತಾಳೂರು ಎಸ್.ಎರ್ರಿಸ್ವಾಮಿ ಬಳ್ಳಾರಿ
ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶದ ಗಣಿ ಗುಡ್ಡಗಳನ್ನು ಅಗೆದು ಅಪಾರ ಪ್ರಮಾಣದ ಅದಿರು ಮಾರಾಟ ಮಾಡಿ ಕೋಟ್ಯಂತರ ರೂ. ಲಾಭ ಮಾಡಿಕೊಳ್ಳುವ ಸಂಸ್ಥೆಗಳು ಸಿಎಸ್​ಆರ್ (ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ) ಅನುದಾನ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರುತ್ತಿರುವ ಅಂಶ ಬೆಳಕಿಗೆ ಬಂದಿದೆ. ಸಿಎಸ್​ಆರ್ ಹಣವನ್ನು ಸ್ಥಳೀಯರ ಹಿತಕ್ಕಾಗಿ ಕಡ್ಡಾಯವಾಗಿ ಬಳಸಬೇಕಿದೆ. ಈ ಪ್ರಕಾರ ಎನ್​ಎಂಡಿಸಿ ಕಳೆದ ನಾಲ್ಕು ವರ್ಷದಲ್ಲಿ 135.5 ಕೋಟಿ ರೂ.ಗಳನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಬೇಕಿತ್ತು. ಆದರೆ, 49.91 ಕೋಟಿ ರೂ. ವೆಚ್ಚ ಮಾಡುವ ಮೂಲಕ ಬೇಜವಾಬ್ದಾರಿ ತೋರಿದೆ.
ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಮಿನರೆಲ್ ಡೆವಲಪ್​ವೆುಂಟ್ ಕಾಪೋರೇಷನ್ (ಎನ್​ಎಂಡಿಸಿ) ಸಂಡೂರು ತಾಲೂಕಿನ ಕುಮಾರಸ್ವಾಮಿ ಐರನ್ ಮೈನಿಂಗ್ ಪ್ರದೇಶದಲ್ಲಿ 680 ಹೆಕ್ಟೇರ್ ಹಾಗೂ ದೋಣಿಮಲೈ ಐರನ್ ಮೈನಿಂಗ್ ಬಳಿ 574 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದೆ. ಗಣಿಗಾರಿಕೆಯಿಂದ ಎನ್​ಎಂಡಿಸಿ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಲಾಭ ಪಡೆಯುತ್ತಿದೆ. ಆದರೆ, ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿದೆ.
ಎನ್​ಎಂಡಿಸಿ ಎರಡು ಮೈನಿಂಗ್ ಪ್ರದೇಶದಿಂದ 2021 ರಲ್ಲಿ 1,128 ಕೋಟಿ ರೂ., 2022 ರಲ್ಲಿ 2,158 ಕೋಟಿ ರೂ., 2023 ರಲ್ಲಿ 2,214 ಕೋಟಿ ರೂ. ಹಾಗೂ 2024 ರಲ್ಲಿ 914 ಕೋಟಿ ರೂ. ಸೇರಿ ಒಟ್ಟಾರೆ 6,776 ಕೋಟಿ ರೂ. ಲಾಭ ಪಡೆದಿದೆ. ಈ ಮೊತ್ತದಲ್ಲಿ ಸಿಎಸ್​ಆರ್ ನಿಧಿಯಡಿ ಶೇ. 2 ಹಣವನ್ನು ಸ್ಥಳೀಯ ಪ್ರದೇಶಾಭಿವೃದ್ಧಿಗೆ ಬಳಸಬೇಕಿದೆ.
ನೆಪಕ್ಕೆ ಕಾಮಗಾರಿ ನಿರ್ವಹಣೆ!:ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಶಿಕ್ಷಣ, ಕುಡಿಯುವ ನೀರು, ಆರೋಗ್ಯ, ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ಪರಿಸರ, ಸಾಂಸ್ಕ್ರತಿಕ, ಪರಂಪರೆ ರಕ್ಷಣೆ ಇತ್ಯಾದಿ ಕಾರ್ಯಕ್ಕೆ 49.91 ಕೋಟಿ ರೂ. ಬಳಸಿಕೊಳ್ಳಲಾಗಿದೆ. ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಸೂಚನೆಯಂತೆ ಗಣಿಬಾಧಿತ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಕೆಲಸಗಳನ್ನು ನಿರ್ವಹಿಸಬೇಕೆಂಬ ಹೊಣೆಗಾರಿಕೆ ತೋರಿಲ್ಲ. ಗಣಿಬಾಧಿತ ಪ್ರದೇಶದಲ್ಲೇ ರಸ್ತೆ ಹಾಳಾಗಿವೆ. ಹಲವು ಗ್ರಾಮದ ಶಾಲಾ ಕಟ್ಟಡಗಳು ಶಿಥಿಲಾವ್ಯವಸ್ಥೆಯಲ್ಲಿವೆ. ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯಗಳಿಲ್ಲ.
ಮೂರು ವರ್ಷದೊಳಗೆ ಕಂಪನಿಗಳ ಸಿಎಸ್​ಆರ್ ನಿಧಿ ಅಭಿವೃದ್ಧಿಗೆ ಸದ್ಬಳಕೆ ಆಗದಿದ್ದರೆ ಬಾಕಿ ಮೊತ್ತವನ್ನು ಪಿಎಂ ಫಂಡ್​ಗೆ ಕಳುಹಿಸಲಾಗುವುದು. ಬೇರೆ ಕಾರಣಕ್ಕೆ ಅನುದಾನ ಬಳಸಿಕೊಳ್ಳಲು ನಿಯಮಗಳಲ್ಲಿ ಅವಕಾಶ ಇಲ್ಲ.
| ಜಿತೇಂದ್ರ ಕುಮಾರ ಎನ್​ಎಂಡಿಸಿ ಸಿಎಸ್​ಆರ್ ವಿಭಾಗದ ಎಜಿಎಂ
ಸ್ಥಳೀಯವಾಗಿ ಜನರು ಅಭಿವೃದ್ಧಿ ಹೊಂದಿದರೆ ಕಂಪನಿ ಗಳನ್ನೇ ಪ್ರಶ್ನಿಸಲು ಕಲಿಯಬಹುದು ಎಂಬ ಉದ್ದೇಶದಿಂದ ಸಿಎಸ್​ಆರ್ ನಿಧಿ ಬಳಕೆಗೆ ಬೇಜವ್ದಾರಿ ತೋರಲಾಗುತ್ತಿದೆ. ಕಂಪನಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಬೇಕು.
| ಶ್ರೀಶೈಲ ಆಲದಹಳ್ಳಿ ಜನಸಂಗ್ರಾಮ ಪರಿಷತ್ ಸದಸ್ಯ, ಸಂಡೂರು
ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಡಿ ನಾಯಕಿ ಮಮತಾ ಮೊಹಾಂತಾ ರಾಜೀನಾಮೆ! ಬಿಜೆಪಿ ಸೇರ್ಪಡೆ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
