ಬೆಂಗಳೂರು:ಚುನಾವಣಾ ಆಯೋಗ ಭಯ ಭೀತಿ ಇಲ್ಲದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಅಥವಾ ರಾಜೀನಾಮೆ ನೀಡಿ ಎನ್ನುವ ಸಂದೇಶವನ್ನು ನೀಡುವ ಪೋಸ್ಟ್ ಕಾರ್ಡ್ ಅಭಿಯಾನ ನಡೆಯಿತು.
ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರನ್ನು ಒಳಗಂಡ ತಂಡಗಳು ಈ ಪೋಸ್ಟ್ ಕಾರ್ಡ್ ಅಭಿಯಾನ ನಡೆಸಿ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದವು. ಭಾರತದ ಚುನಾವಣಾ ಆಯೋಗಕ್ಕೆ ತನ್ನ ಜವಾಬ್ದಾರಿ ನೆನಪಿಸಲು ಹಲವಾರು ಜನಪರ ಸಂಘಟನೆಗಳು ಈ ಅಭಿಯಾನವನ್ನು ಕೈಗೊಂಡವು.
-ಮತದಾನ ಪ್ರಮಾಣದ ಅಂಕಿ-ಅಂಶಗಳಲ್ಲದೆ ಕೇವಲ ಶೇಕಡವಾರುಗಳನ್ನು ಹಂಚಿಕೊಳ್ಳಲಾಗಿದೆ, ಇದು ಮತ ಎಣಿಕೆಯನ್ನು ತಿರುಚುವುದರ ಬಗ್ಗೆ ಕಳವಳ ಮೂಡಿಸಿದೆ-2019ದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ, 373 ಲೋಕಸಭಾ ಕ್ಷೇತ್ರಗಳಲ್ಲಿ ಪೋಲ್ ಆದ ಮತಗಳು ಹಾಗೂ ಎಣಿಕೆ ಮಾಡಿದ ಮತಗಳ ಸಂಖ್ಯೆ ಹೊಂದಾಣಿಕೆಯಿರಲಿಲ್ಲವೆಂದು ವರದಿಗಳು ಸೂಚಿಸಿವೆ. ಕಾಂಚೀಪುರಂ ಕ್ಷೇತ್ರದಲ್ಲಿ 18,000ಕ್ಕೂ ಹೆಚ್ಚುವರಿ ಮತಗಳನ್ನು ಎಣಿಸಲಾಯಿತು. ಅದೇ ರೀತಿ ಶ್ರೀಪೆರಂಬಲೂರ್ ಕ್ಷೇತ್ರದಲ್ಲಿ ಪೋಲಾದ ಮತಗಳಿಗಿಂತ 14,512 ಹೆಚ್ಚು ಮತಗಳನ್ನು ಎಣಿಸಲಾಯಿತು. ಆದರೂ ಕೂಡ ಈ ವರೆಗೂ ಚುನಾವಣಾ ಆಯಾಗವು ಈ ಕುರಿತು ಯಾವುದೇ ರೀತಿಯ ಸ್ಪಷ್ಟನೆಯನ್ನು ನೀಡಿರುವುದಿಲ್ಲ.-2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪೋಲಾದ ಮತಗಳ ಸಂಖ್ಯೆಯನ್ನು ಆಯೋಗವು ಈ ವರೆಗೂ ಬಿಡುಗಡೆ ಮಾಡಿಲ್ಲ.-ದ್ವೇಷ ಭಾಷಣಗಳನ್ನು ನಿಯಂತ್ರಿಸುವುದರಲ್ಲಿ ವಿಫಲರಾಗಿದ್ದಾರೆ. ನರೇಂದ್ರ ಮೋದಿಯವರು ಕಳೆದ ಕೆಲವು ದಿನಗಳಲ್ಲಿ ಸಮಾಜದ ಹಲವಾರು ಸಮುದಾಯಗಳ ನಡುವೆ ದ್ವೇಷವನ್ನು ಎತ್ತಿಕಟ್ಟುವ ಹಾಗೂ ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಉದ್ದೇಶದೊಂದಿಗೆ ಹಲವಾರು ಭಾಷಣಗಳನ್ನು ಮಾಡಿದರೂ ಮೋದಿಯವರಿಗೆ ಆಯೋಗವು ನೋಟೀಸ್ ನೀಡಿಲ್ಲ.-ಭಾರತೀಯ ಜನತಾ ಪಕ್ಷವು ನಮ್ಮ ರಾಜ್ಯದಲ್ಲಿ ದ್ವೇಷ ಹಬ್ಬಿಸುವ ಉದ್ದೇಶದೊಂದಿಗೆ ವಿಡಿಯೋಗಳನ್ನು , ಟ್ವೀಟ್‌ಗಳನ್ನು ಪ್ರಕಟಿಸಿದರೂ ಕ್ರಮವಿಲ್ಲ.-ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಕೇವಲ ವಿಪಕ್ಷಗಳ ವಿರುದ್ಧ ಕ್ರಮ, ಬಿಜೆಪಿಯ ವಿರುದ್ಧ ಕ್ರಮವಿಲ್ಲ. ಕಾಂಗ್ರೆಸ್ಸಿನ ರಂದೀಪ್ ಸುರ್ಜೆವಾಲಾ, ಭಾರತ ರಾಷ್ಟ್ರ ಸಮಿತಿಯ ಕೆ.ಸಿ. ಚಂದ್ರಶೇಖರ ರಾವ್ ಮುಂತಾದವರನ್ನು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡುವುದರಿಂದ ನಿಷೇಧಿಸಲಾಯಿತು. ಆದರೆ, ಬಿಜೆಪಿಯವರ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ.-ಅಸಂವಿಧಾನಿಕ ಜಾಹಿರಾತುಗಳನ್ನು ನಿಯಂತ್ರಿವುದರಲ್ಲಿ ವಿಫಲವಾಗಿದೆ.-ಅಭ್ಯರ್ಥಿಗಳು ನಾಮಪತ್ರ ಹಿಂಪಡೆದು ಕಣದಿಂದ ಹಿಂದೆ ಸರಿಯುವುದರ ಹಾಗೂ ಅವರೆಲ್ಲರೂ ಎದುರಿಸುವ ಬೆದರಿಕೆಗಳನ್ನು ಪರಿಹರಿಸಲು ವಿಫಲವಾಗಿದೆ.
ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟಿಎಸ್, ಬಹುತ್ವ ಕರ್ನಾಟಕ, ನಾವೆದ್ದು ನಿಲ್ಲದಿದ್ದರೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ದ್ವೇಷ ಭಾಷಣ ವಿರುದ್ಧ ಜನಾಂದೋಲನ, ಆಲ್ ಇಂಡಿಯಾ ಲಾಯೆರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್, ಎದ್ದೇಳು ಕರ್ನಾಟಕ, ಕಲೆಕ್ಟಿವ್ ಬೆಂಗಳೂರು, ಶ್ರಮಿಕ್ ಮುಕ್ತಿ ದಲ್, ಯಂಗ್ ಲೀಡರ್ಸ್ ಆ್ ಆಕ್ಟಿವ್ ಸಿಟಿಝೆನ್ಷಿಪ್, ಭಾರತ್ ಬಚಾವ್ ಆಂದೋಲನ, ನ್ಯೂ ಟ್ರೇಡ್ ಯೂನಿಯನ್ ಇನಿಶಿಯೇಟಿವ್, ಇಂಡಿಯನ್ ಮುಸ್ಲಿಮ್ಸ್ ಫಾರ್ ಸೆಕ್ಯುಲರ್ ಡೆಮಾಕ್ರಸಿ, ಸಿಟಿಜನ್ಸ್ ಫಾರ್ ದಿ ಕಾನ್ಸ್ಟಿಟ್ಯೂಷನ್, ದಿ ಬಾಂಬೆ ಕ್ಯಾಥೊಲಿಕ್ ಸಭಾ, ಸೆಂಟರ್ ಫಾರ್ ಪ್ರೋಮೊಟಿಂಗ್ ಡೆಮಾಕ್ರಸಿ, ಪಾನಿ ಹಕ್ ಸಮಿತಿ, ನ್ಯಾಷನಲ್ ಅಲಯನ್ಸ್ ಫಾರ್ ಪೀಪಲ್ಸ್ ಮೂಮೆಂಟ್ಸ್, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆ್ ಸಿವಿಲ್ ರೈಟ್ಸ್ ಮತ್ತಿತರ ಸಂಘಟನೆಗಳು ಈ ಅಭಿಯಾನದಲ್ಲಿ ಭಾಗಿಯಾಗಿದ್ದವು.
ಮನವಿ ಸಲ್ಲಿಸಿದ ನಂತರ ನಾಗರಿಕ ಸಂಸ್ಥೆಗಳ ತಂಡವು  ಪೋಸ್ಟ್ ಮಾಸ್ಟರ್ ಜನರಲ್ ಅವರ ಕಚೇರಿಯ ಬಳಿ ಇರುವ ಅಂಚೆ ಪೆಟ್ಟಿಗೆಯಲ್ಲಿ ‘ಗ್ರೋ ಎ ಸ್ಪೈನ್ ಆರ್ ರಿಸೈನ್’ ಎನ್ನುವ ಸಂದೇಶದೊಂದಿಗೆ ಭಾರತದ ಚುನಾವಣಾ ಆಯೋಗಕ್ಕೆ ಪೋಸ್ಟ್ ಕಾರ್ಡ್-ಗಳನ್ನು ಕಳುಹಿಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 13 =
Remember me
