ಬೆಂಗಳೂರು:ಅನಧಿಕೃತ ಪಡಿತರ ಕಾರ್ಡ್​ಗೆ ರೇಷನ್ ವಿತರಣೆ, ತೂಕದಲ್ಲಿ ಮೋಸ, ಹಣ ವಸೂಲಿ, ಸರ್ಕಾರದ ಆದೇಶ ಉಲ್ಲಂಘನೆ ಮತ್ತಿತರರ ಕಾರಣಕ್ಕಾಗಿ ಆಹಾರ ಇಲಾಖೆ ರಾಜ್ಯಾದ್ಯಂತ 45 ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತುಗೊಳಿಸಿ 15 ಪ್ರಕರಣ ದಾಖಲಿಸಿದ್ದು, 65 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಕರೊನಾ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರ ಒಟ್ಟಿಗೆ ವಿತರಿಸಲು ಸರ್ಕಾರ ಸೂಚಿಸಿದ್ದು, ಮೊಬೈಲ್ ಒಟಿಪಿ ಅಥವಾ ಚೆಕ್​ಲೀಸ್ಟ್ ಮೂಲಕ ಉಚಿತ ಪಡಿತರ ನೀಡಬೇಕೆಂದು ಆಹಾರ ಇಲಾಖೆ ಆದೇಶಿಸಿದೆ. ಆದರೆ ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಬಯೋಮೆಟ್ರಿಕ್ ಹೆಸರಿನಲ್ಲಿ 20 ರೂ. ಶುಲ್ಕ, 1-2 ಕೆಜಿ ಕಡಿಮೆ ಪಡಿತರ ವಿತರಣೆ, ಕಾರ್ಡ್​ದಾರರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿ 45 ನ್ಯಾಯ ಬೆಲೆ ಅಂಗಡಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ. ಜತೆಗೆ ದಾವಣಗೆರೆಯಲ್ಲಿ 4, ಶಿವಮೊಗ್ಗದಲ್ಲಿ 3, ಬೆಂಗಳೂರು ಹಾಗೂ ಕೊಡಗಿನಲ್ಲಿ ತಲಾ 2, ಬೆಳಗಾವಿ, ಬಳ್ಳಾರಿ, ಹಾಸನ ಹಾಗೂ ರಾಮನಗರದಲ್ಲಿ ತಲಾ 1 ಕೇಸ್ ದಾಖಲಾಗಿದೆ.
ಕಠಿಣ ಕ್ರಮಕೈಗೊಳ್ಳಿ:ಬಡ ಕುಟುಂಬಗಳಿಗೆ ನ್ಯಾಯಯುತವಾಗಿ ಪಡಿತರ ವಿತರಿಸಬೇಕಾದ ಕೆಲ ನ್ಯಾಯಬೆಲೆ ಅಂಗಡಿಗಳು ಗ್ರಾಹಕರಿಂದ ಹಣ ಸುಲಿಯುವುದಕ್ಕಾಗಿ ದಿನಕ್ಕೊಂದು ನೆಪ ಹೇಳುತ್ತಿವೆ. ಈ ಬಗ್ಗೆ ನಾವು ಮಾಲೀಕರ ಬಳಿ ಪ್ರಶ್ನಿಸಿದರೆ ಕಾರ್ಡ್ ರದ್ದು ಮಾಡುತ್ತಾರೆ ಎಂಬ ಭಯದಿಂದ ಸುಮ್ಮನಾಗುತ್ತೇವೆ. ಕರೊನಾ ಪರಿಸ್ಥಿತಿಯಲ್ಲಿಯೂ ಮಾಲೀಕರು ಕಾರ್ಡ್​ದಾರರಿಂದ ಸುಲಿಗೆ ಮಾಡುತ್ತಿರುವುದು ಸರಿಯಲ್ಲ. ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತು ಮಾಡುವ ಬದಲು ರದ್ದುಗೊಳಿಸಬೇಕೆಂದು ಕಾರ್ಡ್​ದಾರರೊಬ್ಬರು ಮನವಿ ಮಾಡಿದ್ದಾರೆ.
ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿರುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತು ಮಾಡುವ ಬದಲು ಶಾಶ್ವತವಾಗಿ ರದ್ದುಗೊಳಿಸುತ್ತೇವೆ. ಪ್ರಾರಂಭದಲ್ಲಿ ಗೋಧಿ ಸರಬರಾಜು ಆಗದಿರುವ ಹಿನ್ನೆಲೆಯಲ್ಲಿ ಕೆಲ ಕಡೆ ರೇಷನ್ ವಿತರಣೆಯಲ್ಲಿ ತುಸು ವಿಳಂಬವಾಗಿತ್ತು. ಆದರೆ, ಇದೀಗ ರಾಜ್ಯಾದ್ಯಂತ ಶೇ.65 ಪಡಿತರ ಹಂಚಿಕೆಯಾಗಿದೆ.
| ಕೆ.ಗೋಪಾಲಯ್ಯ ಆಹಾರ ಸಚಿವ
ಆರೋಗ್ಯ ಸೇತು ಆಪ್ ಡೌನ್​ಲೋಡ್ ಕಡ್ಡಾಯ
ಬೆಂಗಳೂರು: ಕರೊನಾ ವೈರಸ್ ಸೋಂಕಿತರು ಹಾಗೂ ಶಂಕಿತರ ಚಲನವಲನವನ್ನು ಜಿಪಿಎಸ್ ತಂತ್ರಜ್ಞಾನ ಸಹಾಯದಿಂದ ಸೆರೆ ಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ‘ಆರೋಗ್ಯ ಸೇತು-ಕೋವಿಡ್ 19’ ಟ್ರಾ್ಯಕರ್ ಮೊಬೈಲ್ ಆಪ್ ಎಲ್ಲರೂ ಕಡ್ಡಾಯವಾಗಿ ಡೌನ್​ಲೋಡ್ ಮಾಡಿಕೊಂಡು ಅದರ ಉಪಯೋಗ ಪಡೆಯಬೇಕೆಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಆಪ್​ನಲ್ಲಿ ಕನ್ನಡ, ಹಿಂದಿ, ಇಂಗ್ಲೀಷ್ ಸೇರಿ 11 ಭಾಷೆಗಳ ಆಯ್ಕೆ ನೀಡಲಾಗಿದೆ. ಕರೊನಾ ಸೋಂಕು ಹರಡುವ ಬಗೆ, ಅನುಸರಿಸಬೇಕಾದ ಮುಂಜಾಗ್ರತಾ ಕ್ರಮ, ಚಿಕಿತ್ಸಾ ವಿಧಾನ, ಸಹಾಯವಾಣಿ ಸೇರಿ ಹಲವು ಮಾಹಿತಿ ಲಭ್ಯವಿದೆ. ಸ್ವಯಂ ಮೌಲ್ಯಮಾಪನ ಪರೀಕ್ಷೆಗೂ ಅವಕಾಶವಿದೆ. ಕರೊನಾ ಸೋಂಕಿತ ವ್ಯಕ್ತಿ ಹತ್ತಿರ ಬಂದರೆ ಈ ಆಪ್ ಅಲರ್ಟ್ ಮೂಲಕ ಎಚ್ಚರಿಸುತ್ತದೆ. ಈಗಾಗಲೇ 50 ಲಕ್ಷಕ್ಕೂ ಅಧಿಕ ಮಂದಿ ಆಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ.
ಬಳಕೆ ಹೇಗೆ?: ಈ ಅಟಜಢಚ ಖಛಿಠ್ಠಿಟ ಇಣ್ಖಐಈ 19 ಆಪ್ ಐಒಎಸ್ ಮತ್ತು ಆಂಡ್ರಾಯ್್ಡ ಸ್ಮಾರ್ಟ್​ಫೋನ್​ನಲ್ಲಿ ಬಳಸಬಹುದಾಗಿದ್ದು, ಡೌನ್​ಲೋಡ್ ಮಾಡಿಕೊಂಡು ಬಳಿಕ ಬ್ಲೂಟೂತ್ ಮತ್ತು ಲೊಕೇಷನ್ ಆನ್ ಮಾಡಿರಬೇಕು. ಅದರಲ್ಲಿ ಸೆಟ್ ಲೊಕೇಷನ್ ಎಂದಿರುವುದನ್ನು ಆಲ್ವೇಸ್ (ಅಔಗಅಖ) ಎಂದು ಕೊಡಬೇಕು. ಎಲ್ಲರೂ ಕಡ್ಡಾಯವಾಗಿ ಡೌನ್​ಲೋಡ್ ಮಾಡಿಕೊಂಡು ಬಳಸಬೇಕು ಎಂದು ಸಿಎಸ್ ಟಿ.ಎಂ. ವಿಜಯಭಾಸ್ಕರ್ ತಿಳಿಸಿದ್ದಾರೆ.
| ಬೇಲೂರು ಹರೀಶ
ಕರೊನಾ ವಿರುದ್ಧ ಹೋರಾಡಲು ಪ್ರಧಾನಿ ಬಳಿ 25000 ಕೋಟಿ ರೂ. ಪರಿಹಾರ ಕೇಳಿದ ಸಿಎಂ ಮಮತಾ ಬ್ಯಾನರ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 15 =
Remember me
