ಬೆಂಗಳೂರು:ಗೃಹಲಕ್ಷ್ಮೀ ಯೋಜನೆ ಇನ್ನು ಅಧಿಕೃತವಾಗಿ ಜಾರಿಯಾಗಿಲ್ಲ. ಅಷ್ಟರಲ್ಲೇ ಈ ಯೋಜನೆ ಹೆಸರಿನಲ್ಲಿ ಹಲವು ನಕಲಿ ಆ್ಯಪ್​ಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಸಾರ್ವಜನಿಕರು ತುಂಬಾ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಒಂದು ವೇಳೆ ಗೊತ್ತಿಲ್ಲದೆ, ಈ ಆ್ಯಪ್​ಗಳನ್ನು ಡೌನ್‌ಲೋಡ್ ಮಾಡಿದರೆ ನಿಮ್ಮ ಬ್ಯಾಂಕ್​ ಖಾತೆಗೆ ಸೈಬರ್​ ಖದೀಮರು ಕನ್ನ ಹಾಕಲಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಬ್ಯಾಂಕ್​ ಖಾತೆಯ ವಿವರವನ್ನು ಮುಖ್ಯವಾಗಿ ಕೊಡಬೇಕಾಗಿದೆ. ಹೀಗಾಗಿ ನಕಲಿ ಆ್ಯಪ್​ ಸೃಷ್ಟಿ ಮಾಡಿರುವ ಸೈಬರ್​ ಕಿರಾತಕರಿಗೆ ಬ್ಯಾಂಕ್​ ಖಾತೆಗಳೇ ಮೊದಲ ಟಾರ್ಗೆಟ್ ಆಗಿವೆ.
ಇದನ್ನೂ ಓದಿ:ಕದ್ದ ವಾಹನಕ್ಕೂ ನೋಂದಣಿ! ಗುಜರಿ ಲಾರಿ, ಬಸ್ಸುಗಳಿಗೆ ಹೊಸ ರಿಜಿಸ್ಟ್ರೇಷನ್ | ಆರ್​ಟಿಒ ಸಿಬ್ಬಂದಿ ಶಾಮೀಲು
ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವ ಭರದಲ್ಲಿ ನಕಲಿ ಆ್ಯಪ್​ಗಳನ್ನು ಡೌನ್‌ಲೋಡ್ ಮಾಡಿದರೆ ನಿಮಗೆ ಸಂಕಷ್ಟ ಖಚಿತ. ನಿಮ್ಮ ಬ್ಯಾಂಕ್ ಅಕೌಂಟ್​ಗೆ ನಿಮಗೇ ಗೊತ್ತಿಲ್ಲದೆ ಎಂಟ್ರಿ ಕೊಡುವ ಖದೀಮರು ಹಣ ಎಗರಿಸುವ ಸಾಧ್ಯತೆ ತುಂಬಾ ದಟ್ಟವಾಗಿದೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅಪ್ಲೀಕೇಶನ್‌ಗೆ ಸರ್ಕಾರ ಅಸ್ತು ಎಂದಿದೆ. ಇದರ ಬೆನ್ನಲೆ ಪ್ಲೇ ಸ್ಟೋರ್​ನಲ್ಲಿ ನಕಲಿ ಆ್ಯಪ್​ಗಳ ಹಾವಳಿ ಹೆಚ್ಚಾಗಿದೆ. ಗೃಹಲಕ್ಷ್ಮಿ ಹೆಸರಿನ ಐದಾರು ನಕಲಿ ಆ್ಯಪ್​ಗಳು ಸೃಷ್ಟಿಯಾಗಿವೆ. ನೋಡೋಕೇ ಥೇಟ್ ಸರ್ಕಾರ ಸಿದ್ಧಪಡಿಸಿರುವ ಆ್ಯಪ್ ರೀತಿಯಲ್ಲೇ ನಕಲಿ ಆ್ಯಪ್‌ಗಳು ಇವೆ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಇದನ್ನೂ ಓದಿ:ಸ್ವಯಂಪ್ರೇರಿತ ರಕ್ತದಾನಿಗಳಿಗೆ ಸನ್ಮಾನ -ಯುವಕರು ರಕ್ತದಾನಕ್ಕೆ ಮುಂದಾಗಲಿ- ಸುಭಾಶ್ಚಂದ್ರ
ಅಂದಹಾಗೆ ಗೃಹಲಕ್ಷ್ಮೀ ಯೋಜನೆಯು ಮನೆ ಯಜಮಾನಿಗೆ 2,000 ಸಹಾಯ ಧನ ನೀಡುವ ಯೋಜನೆ ಆಗಿದೆ. ವಂಚನೆಯನ್ನು ತಪ್ಪಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸುಲಭಗೊಳಿಸಲು ಸರ್ಕಾರ ಆ್ಯಪ್​ ಸಿದ್ಧಪಡಿಸಿದೆ. ಆದರೆ, ಈವರೆಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿಲ್ಲ. ಯಾವುದೇ ಸರ್ಕಾರಿ ವೆಬ್‌ಸೈಟ್‌ನಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)
ನೋಟಿನ ಕಂತೆಗಳೊಂದಿಗೆ ಪತ್ನಿ, ಮಕ್ಕಳ ಸೆಲ್ಫಿ! ಫೋಟೋ ವೈರಲ್, ಅಧಿಕಾರಿಗೆ ಎದುರಾಯ್ತು ಸಂಕಷ್ಟ

ಮೊದಲ ಡೇಟಿಂಗ್​ನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದೀರಾ? ತಮನ್ನಾಗಿಂತ ವಿಜಯ್​ ಕೊಟ್ಟ ಉತ್ತರ ವೈರಲ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 16 =
Remember me
