ಬೆಂಗಳೂರು:ಇಲ್ಲೊಬ್ಬ ವ್ಯಕ್ತಿ, ನೆಲಮಂಗಲದ ಬಳಿ, ವೈದ್ಯನ ಸೋಗು ಹಾಕಿಕೊಂಡು ಆಯುರ್ವೇದದ ಅಂಗಡಿ ಇಟ್ಟುಕೊಂಡಿದ್ದ. ಈತನ ಅಸಲಿಯತ್ತು ತಿಳಿಯದ ಅದೆಷ್ಟು ಮಂದಿ ಮೊಸ ಹೋಗಿದ್ದಾರೋ ಏನೋ. ಆದರೆ ಈ ಮಹಿಳೆ ಕಾಲು ನೋವಿನಿಂದ ಬಳಲಿ ಚಿಕಿತ್ಸೆಗೆ ಎಂದು ಬಂದಾಗ ಈತನ ಅಸಲಿಯತ್ತು ಬಯಲಾಗಿದೆ.
ರಾಜಸ್ಥಾನ ಮೂಲದ ಮೊಹಮ್ಮದ್ ಸಮೀನ್ ಎಂಬಾತನೇ ಈಗ ಬಂಧಿಸಲ್ಪಟ್ಟಿರುವುದು. ಇತ್ತೀಚೆಗೆ ಪಂಕಜ್ ಎಂಬುವವರ ತಾಯಿ ಕಾಲಿನ ನೋವಿನಿಂದ ಬಳಲುತ್ತಿದ್ರು. ಈ ಮೊಹಮ್ಮದ್​ ಸಮೀನ್​ನನ್ನು ಆರ್ಯುವೇದ ವೈದ್ಯನೆಂದು ನಂಬಿದ್ದ ಪಂಕಜ್, ತನ್ನ ತಾಯಿಯನ್ನು ಈತನ ಬಳಿಗೆ ಕರೆದುಕೊಂಡು ಬಂದಿದ್ದಾನೆ.
ಕಾಲಿನಲ್ಲಿ ಕೀವು ತುಂಬಿಕೊಂಡಿದೆ. ಅದನ್ನ ಚಿಕಿತ್ಸೆ ನೀಡಿ ಸರಿ ಮಾಡ್ತಿನಿ ಎಂದಿದು ಸಮೀನ್​ ಹೇಳಿದ್ದ. ಆದರಂತೆ ಒಂದು ಡ್ರಾಫ್‌ ಕೀವನ್ನ ತೆಗೆಯಲು ನಾಲ್ಕು ಸಾವಿರದಂತೆ 8 ಲಕ್ಷ ಹಣವನ್ನು ಪಂಕಜ್​ನಿಂದ ಪೀಕಿದ್ದ. ಅಸಲಿಗೆ ಈತ ಯಾವುದೇ ಚಿಕಿತ್ಸೆ ನೀಡಿರಲಿಲ್ಲ. ನಂತರ ಈತ 8 ಲಕ್ಷ ರೂ. ಜಣ ಪಡೆದು ಎಸ್ಕೇಫ್​ ಆಗಿದ್ದ. ಈ ವಿಷಯ ಪಂಕಜ್​ ಗಮನಕ್ಕೆ ಬರುತ್ತಿದ್ದಂತೆ, ಪಂಕಜ್​​, ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ನೀಡಿದ್ದ.
ಈ ದೂರಿನ ಅನ್ವಯ ನಕಲಿ ಆಯುರ್ವೇದ ವೈದ್ಯ ಮೊಹಮ್ಮದ್ ಸಮೀನ್​ನನ್ನು ಬಂಧಿಸಲಾಗಿದೆ. ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿತನಿಂದ 4 ಕಾರು 3 ಬೈಕ್ 3.50 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 16 =
Remember me
