ಹಾಸನ:ಖೋಟಾ ನೋಟು ಸಹಿತ ಮಹಿಳೆಯೊಬ್ಬಳು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಹಾಸನದ ಸಕಲೇಶಪುರ ನಗರದಲ್ಲಿ ಬುಧವಾರ ನಡೆದಿದೆ.
ಮಹಿಳೆಯ ಹೆಸರಿನ್ನೂ ತಿಳಿದುಬಂದಿಲ್ಲ. ಪೊಲೀಸರನ್ನು ಕಂಡೊಡನೇ ಆರೋಪಿ ಮಹಿಳೆ ಹೋಟೆಲ್ ಒಳಗೆ ಓಡಿ ಬಾತ್​ರೂಂ ಸೇರಿಕೊಂಡಿದ್ದಳು. ಅನುಮಾನಗೊಂಡ ಪೊಲೀಸರು ಆಕೆಯ ಬೆನ್ನಟ್ಟಿ ಹೋಗಿ ಹಿಡಿದು, ಪರಿಶೀಲಿಸಿದಾಗ ಆಕೆಯ ಬಳಿ ಖೋಟಾ ನೋಟುಗಳ ಬಂಡಲ್​ ಪತ್ತೆಯಾಗಿವೆ.
ಇದನ್ನೂ ಓದಿ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಡಿಸಿ ಸೂಚನೆ
ಖೋಟಾ ನೋಟು ಬಂಡಲ್ ನೀಡಲು ನಕಾರ ವ್ಯಕ್ತಪಡಿಸಿದ ಮಹಿಳೆ, ಗಾಬರಿಗೆ ಕೆಲ ಹಿಡಿ ನೋಟುಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾಳೆ. ಸದ್ಯ ಮಹಿಳೆ ಹಾಗೂ ಓರ್ವ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರ ವಿಚಾರಣೆ ನಡೆಸುತ್ತಿದ್ದಾರೆ.
ಸಕಲೇಶಪುರದ ದೋಣಿಗಾಲ್ ಬಳಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಬಾಡಿಗೆ ಕಾರಿನಲ್ಲಿ ಬಂದಿದ್ದಳು. ಖೋಟಾ ನೋಟು ವಾಪಾಸ್ ಕಿತ್ತುಕೊಳ್ಳಲು ಕೆಲಕಾಲ ಮಹಿಳೆ ಪೊಲಿಸ್ ಜತೆ ಜಟಾಪಟಿಗೆ ಇಳಿದಿದ್ದಳು.(ದಿಗ್ವಿಜಯ ನ್ಯೂಸ್​)

ಪಟಾಕಿ ಗೋದಾಮಲ್ಲಿ ಸ್ಫೋಟ, ನಾಲ್ಕು ಸಾವು; ಪಟಾಕಿ ಕಾರ್ಖಾನೆಯಲ್ಲೂ ಬೆಂಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 20 =
Remember me
