ಬೆಂಗಳೂರು: ಆನ್​ಲೈನ್ ಮೂಲಕ ಸ್ನೇಹಿತನಿಗೆ ಕಳುಹಿಸಿದ್ದ ಹಣ ತಲುಪದ ಹಿನ್ನೆಲೆಯಲ್ಲಿ ಅಂತರ್ಜಾಲದಲ್ಲಿ ಸಿಕ್ಕಿದ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿ ವಿಚಾರಿಸಿದ ಖಾಸಗಿ ಕಂಪನಿ ಉದ್ಯೋಗಿಯ ಬ್ಯಾಂಕ್ ಖಾತೆಯಿಂದ ಸೈಬರ್ ಕಳ್ಳರು 99 ಸಾವಿರ ರೂ. ದೋಚಿದ್ದಾರೆ.
ಅರಕೆರೆ ನಿವಾಸಿ ನಾಗಭೂಷಣ್ ವಂಚನೆಗೊಳಗಾದವರು. ಜು.29ರಂದು ಗೂಗಲ್ ಪೇ ಮೂಲಕ ಸ್ನೇಹಿತನಿಗೆ 300 ರೂ. ಕಳುಹಿಸಿದ್ದರು. ಆದರೆ, ಆ ಹಣ ತಲುಪಿರಲಿಲ್ಲ. ವೆಬ್​ಸೈಟ್​ವೊಂದರಲ್ಲಿ ಗೂಗಲ್ ಪೇ ಕಸ್ಟಮರ್ ಕೇರ್ ಎಂದು ನಮೂದಿಸಿದ್ದ ನಂಬರ್ ಸಿಕ್ಕಿತ್ತು. ಆ ನಂಬರ್​ಗೆ ಕರೆ ಮಾಡಿ ಹಣ ತಲುಪಿಲ್ಲ ಎಂದು ಹೇಳಿದ್ದರು. ಕಸ್ಟಮರ್ ಕೇರ್ ಸಿಬ್ಬಂದಿಯಂತೆ ಮಾತನಾಡಿದ ಅಪರಿಚಿತರು, ಹಣ ಹಿಂದಿರುಗಿಸುತ್ತೇವೆ ಎಂದಿದ್ದರು.
ಇದನ್ನೂ ಓದಿ:ಮನೆಗೆ ನುಗ್ಗಿ ಮಹಿಳೆಯನ್ನು ಕಟ್ಟಿ ಹಾಕಿ ನಗ, ನಗದು ಹಣ ದೋಚಿದವರ ಸೆರೆ
ಅವರ ಮಾತನ್ನು ನಂಬಿದ ನಾಗಭೂಷಣ್, ಮೊಬೈಲ್​ನಲ್ಲಿ ಕ್ವಿಕ್ ಸಪೋರ್ಟ್ ಆಪ್ ಇನ್​ಸ್ಟಾಲ್ ಮಾಡಿಕೊಂಡಿದ್ದರು. ನಂತರ ಕರೆ ಮಾಡಿದ ಅಪರಿಚಿತರು ಬ್ಯಾಂಕ್ ಖಾತೆ ಮಾಹಿತಿ ಪಡೆದುಕೊಂಡಿದ್ದರು. ಇದಾದ ಕೆಲ ಸಮಯದಲ್ಲೇ ನಾಗಭೂಷಣ್ ಖಾತೆಯಿಂದ 99,018 ರೂ. ಕಡಿತ ವಾಗಿದೆ. ಆಗ್ನೇಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಡೇಟಿಂಗ್ ಕರೆಗಳಿಂದ ಕಂಪನಿಯೊಂದರ ಮಾಲೀಕ ಮತ್ತು ಆತನ ಪತ್ನಿ ಕಂಗಾಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 4 =
Remember me
