ಬೆಂಗಳೂರು:ನಗರದಲ್ಲಿ ನಕಲಿ ಡಿಡಿ ಡೀಲ್​ ಗ್ಯಾಂಗ್​ ಖಾಕಿ ಬಲೆಗೆ ಬಿದ್ದಿದ್ದು, ದಂಪತಿ ಸೇರಿ ನಾಲ್ವರನ್ನು ಬಂಧಿಸಿರುವ ಪೊಲೀಸರು ಬರೋಬ್ಬರಿ 7.18 ಕೋಟಿ ಮೌಲ್ಯದ ಡಿಡಿಗಳನ್ನು ಜಪ್ತಿ ಮಾಡಿದ್ದಾರೆ.
ಬೇಗೂರಿನ ಇಂದ್ರಜಿತ್​ ನಾಯಕ್​ ಮತ್ತು ಈತನ ಪತ್ನಿ ಮಂಜುಳಾ ಒಳಗೊಂಡ ಗ್ಯಾಂಗ್​ ನಕಲಿ ಡಿಡಿ ಡೀಲ್​ ಮಾಡುತ್ತಿದ್ದರು. ಮನೆಯಲ್ಲೇ ನಕಲಿ ಡಿಡಿ ತಯಾರಿಸುತ್ತಿದ್ದ ಗ್ಯಾಂಗ್​ನಲ್ಲಿ ಕಾರಾಗೃಹ ಇಲಾಖೆಯಲ್ಲಿ ಈ ಹಿಂದೆ ಎಸ್​ಡಿಎ ಆಗಿದ್ದವನೂ ಸೇರಿಕೊಂಡಿದ್ದ ಎಂಬುದು ಮತ್ತೊಂದು ಪ್ರಮುಖ ಅಂಶ. ಈತ ಕರ್ತವ್ಯಲೋಪ ಎಸಗಿ ಕೆಲಸ ಕಳೆದುಕೊಂಡಿದ್ದ. ಈ ಗ್ಯಾಂಗ್​​ ಹೇಗೆಲ್ಲ ದಂಧೆ ಮಾಡ್ತಿತ್ತು ಎಂಬುದರ ಇಂಚಿಂಚೂ ಮಾಹಿತಿ ಇಲ್ಲಿದೆ.ಇದನ್ನೂ ಓದಿರಿಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!
ಗಿರವಿ ಅಂಗಡಿ ಮಾಲೀಕರಿಗೆ ಡಿಸ್ಕೌಂಟ್​ ಹೆಸರಲ್ಲಿ ನಕಲಿ ಡಿಡಿ ಕೊಟ್ಟು ವಂಚಿಸುತ್ತಿದ್ದ ಆರೋಪದ ಮೇರೆಗೆ ಇಂದ್ರಜಿತ್​ ನಾಯಕ್​ (34), ಈತನ ಪತ್ನಿ ಮಂಜುಳಾ (33), ಸ್ನೇಹಿತ ಮುನಿರಾಜು (42) ಮತ್ತು ಆನಂದ್​ (43) ಎಂಬುವವರನ್ನ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬರೋಬ್ಬರಿ 7.18 ಕೋಟಿ ರೂ. ಮೌಲ್ಯದ 25 ನಕಲಿ ಡಿಡಿಗಳ ಜತೆಗೆ 9 ಸಾವಿರ ರೂ. ನಗದು, ನಕಲಿ ಡಿಡಿ ತಯಾರಿಕೆಗೆ ಬಳಸಿದ್ದ ಪ್ರಿಂಟರ್​, 6 ಸೀಲುಗಳು, ನಕಲಿ ಡಿಡಿ ಸಿದ್ಧಪಡಿಸಲು ಉಪಯೋಗಿಸಿದ್ದ ಲ್ಯಾಪ್​ಟಾಪ್​, 349 ರೂ. ಮೊತ್ತದ 1 ನೈಜ ಡಿಡಿ, ರಬ್ಬರ್​ ಸ್ಟಾಂಪ್​ ತಯಾರಿಸಲು ಬಳಸುವ ಫ್ಲಾಷ್​ ಮಿಷನ್​ ಸೇರಿ ಇತರೆ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮನೆಯಲ್ಲೇ ನಕಲಿ ಡಿಡಿ ರೆಡಿ:ಇಂದ್ರಜಿತ್​ ನಾಯಕ್​ಗೆ ಸ್ನೇಹಿತ ಮುನಿರಾಜು 349 ರೂ. ಮೊತ್ತದ ಬ್ಯಾಂಕ್​ ಆಫ್​​ ಇಂಡಿಯಾದ ನೈಜ ಡಿಡಿ ಕೊಟ್ಟು, ಈ ಡಿಡಿಯಂತೆಯೇ ನಕಲಿ ಡಿಡಿಗಳನ್ನು ಸಿದ್ಧಪಡಿಸುವಂತೆ ಸೂಚಿಸಿದ್ದ. ಇಂತಹ ನಕಲಿ ಡಿಡಿಗಳನ್ನು ಡಿಸ್ಕೌಂಟ್​ ವ್ಯವಹಾರ ನಡೆಸುವವರಿಗೆ ಕೊಟ್ಟು ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂದಿದ್ದ. ಹಣದ ಆಮಿಷಕ್ಕೊಳಗಾದ ಇಂದ್ರಜಿತ್​ ಸ್ನೇಹಿತ ನೀಡಿದ ಒರಿಜಿನಲ್​ ಡಿಡಿಯನ್ನು ಮನೆಗೆ ತಂದು ಪತ್ನಿ ಮಂಜುಳಾ ಜತೆ ಸೇರಿ ಮನೆಯಲ್ಲೇ ಡಿಡಿ ಸ್ಕ್ಯಾನ್​ ಮಾಡಿ, ಅದನ್ನು ಎಡಿಟ್​ ಮಾಡಿ ಹಲವು ನಕಲಿ ಡಿಡಿಗಳನ್ನು ತಯಾರಿಸಿದ್ದ. ನಂತರ ಪರಿಚಿತ ಆನಂದ್​ನನ್ನು ಭೇಟಿಯಾದ ಇಂದ್ರಜಿತ್​, ಡಿಡಿಗಳಿಗೆ ಹಾಕಲು ಬೇಕಾಗುವ ಸೀಲ್​ಗಳು ಮತ್ತು ವಿವಿಧ ರಬ್ಬರ್​ ಸ್ಟ್ಯಾಂಪ್​ಗಳನ್ನು ಮಾಡಿಸಿಕೊಂಡು ಬಂದು ಆ ಸೀಲುಗಳನ್ನು ನಕಲಿ ಡಿಡಿಗಳ ಮೇಲೆ ಮುದ್ರಿಸಿದ್ದ. ಕಂಪ್ಯೂಟರ್​ ಕೆಲಸಕ್ಕೆ ಇಬ್ಬರು ಅಸಿಸ್ಟೆಂಟ್​ಗಳನ್ನು ಇಟ್ಟಿದ್ದರು.ಇದನ್ನೂ ಓದಿರಿತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…
ಇದನ್ನು ಗಿರವಿ ಅಂಗಡಿ ಮಾಲೀಕರಿಗೆ ಡಿಸ್ಕೌಂಟ್​ ಹೆಸರಲ್ಲಿ ಮಾರಾಟ ಮಾಡುತ್ತಿದ್ದರು. 1 ಲಕ್ಷದ ನಕಲಿ ಡಿಡಿಗೆ 50 ಸಾವಿರ ಅಥವಾ 60 ಸಾವಿರ ರೂ. ಪಡೆಯುತ್ತಿದ್ದರು. ಗಿರವಿ ಅಂಗಡಿ ಮಾಲೀಕರು 40 ಸಾವಿರ ರೂ. ಕಮಿಷನ್​ ಆಸೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದರು.
ಸಿಕ್ಕಿಬಿದ್ದದ್ದು ಹೇಗೆ?:ಗಿರವಿ ಅಂಗಡಿ ಇಟ್ಟುಕೊಂಡಿರುವ ಜಯರಾಮ್​ಗೆ ಸ್ವಾಮಿ ಎಂಬಾತನ ಮೂಲಕ ಇಂದ್ರಜಿತ್​ ನಾಯಕ್​ ಪರಿಚಯವಾಗಿದ್ದ. ಇಂದ್ರಜಿತ್​ ರಸ್ಟ್ರಿಸ್ರಿ ಬಿಲ್ಡರ್ಸ್​ ಆ್ಯಂಡ್​ ಡೆವಲಪರ್ಸ್​ ಪೆ.ಲಿ ಹೆಸರಿನಲ್ಲಿ 4.95 ಲಕ್ಷ ರೂ.ಗಳ ನಕಲಿ ಡಿಡಿಯನ್ನು ಡಿಸ್ಕೌಂಟ್​ ಮಾಡಿಕೊಡುವಂತೆ ಜಯರಾಮ್​ಗೆ ನೀಡಿ 1.50 ಲಕ್ಷ ರೂ. ಪಡೆದಿದ್ದ. ಜಯರಾಮ್​ ಈ ಡಿಡಿಯನ್ನು ಫೆಡರಲ್​ ಬ್ಯಾಂಕ್​ಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದಾಗ ನಕಲಿ ಡಿಡಿ ಎಂಬುದು ಗೊತ್ತಾಗಿದೆ. ಈ ಸಂಬಂಧ ಇಂದ್ರಜಿತ್​ ನಾಯಕ್​ ವಿರುದ್ಧ ಬೇಗೂರು ಪೊಲೀಸ್​ ಠಾಣೆಗೆ ಜಯರಾಮ್​ ದೂರು ನೀಡಿದ್ದರು. ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿ ಇಂದ್ರಜಿತ್​ನನ್ನು ಬಂಧಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಈ ಹಿಂದೆ ಹಲವು ಜನರಿಗೆ ಇದೇ ಮಾದರಿಯಲ್ಲಿ ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಇಂದ್ರಜಿತ್​ ದಂಪತಿ ವಿರುದ್ಧ ತಲಟ್ಟಪುರ ಸೇರಿ ವಿವಿಧೆಡೆ ಪ್ರಕರಣ ದಾಖಲಾಗಿವೆ.
ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

ನಮ್ಮತ್ರ ಹಣವಿಲ್ಲ, ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕುತ್ತಿಲ್ಲ: ದೇವೇಗೌಡ

ನೀರಿಗಾಗಿ ಕೂಡಲಸಂಗಮದಿಂದ ರಾಜಭವನಕ್ಕೆ ರೈತರ ಪಾದಯಾತ್ರೆ: ವೈಎಸ್​ವಿ ದತ್ತಾ ಘೋಷಣೆ

ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − twelve =
Remember me
