ಬೆಳಗಾವಿ:ಮಕ್ಕಳ ಮಾರಾಟ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳಿಗೆ ಸಿಕ್ಕಿದ ಸುಳಿವನ್ನು ಬೆನ್ನತ್ತಿ ಹೋದಾಗ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಕಿತ್ತೂರು ಪಟ್ಟಣದಲ್ಲಿ ವೈದ್ಯ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಭ್ರೂಣ ಹತ್ಯೆ ಮಾಡಿರುವ ವಿಷಯ ಬಯಲಾಗಿದೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಇಂಥಾ ವೃತ್ತಿಯನ್ನೇ ನಕಲು ಮಾಡಿ ನೀಚ ಕೃತ್ಯ ಮಾಡಿರುವ ಆಸಾಮಿ ಅಬ್ದುಲ್ ಗಫಾರ್ ಲಾಡಖಾನ್ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನು ಓದಿ:ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ ಐಸ್​ಕ್ರೀಂನಲ್ಲಿ ಸಿಕ್ತು ಜರಿ ಹುಳು; ಗ್ರಾಹಕ ಮಾಡಿದ್ದೇನು ಗೊತ್ತಾ?
ಜಿಲ್ಲಾಧಿಕಾರಿ ನಿತೀಶ್​ ಪಾಟೀಲ್ ಅವರ ಸೂಚನೆ ಮೇರೆಗೆ ಪೊಲೀಸರು, ಆರೋಗ್ಯ ಇಲಾಖೆ, ಎಫ್​ಎಸ್​​ಎಲ್​​​ ತಂಡ ಭಾನುವಾರದಂದು (ಜೂನ್ 16) ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಬಳಿ ಇರುವ ನಕಲಿ ವೈದ್ಯನ ಫಾರ್ಮ್ ಹೌಸ್ ಪರಿಶೀಲನೆ ನಡೆಸಿತು. ತಪಾಸಣೆ ವೇಳೆ ಅಬ್ದುಲ್ ಗಫಾರ್ ಲಾಡಖಾನ್ ತೋಟದಲ್ಲಿ ಮೂರು ಭ್ರೂಣಗಳು ಪತ್ತೆಯಾಗಿವೆ.
ಈ ಭ್ರೂಣಗಳನ್ನು ತಂದು ಹೂಳುತ್ತಿದ್ದ ಅಬ್ದುಲ್ ಗಫಾರ್ ಲಡಾಖಾನ್ ಸಹಾಯಕ ರೋಹಿತ್ ಕುಪ್ಪನಗೌಡನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಬ್ದುಲ್ ಬಳಿ ರೋಹಿತ್ ಹಲವು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಆತನನ್ನು ಬಂಧಿಸಿ ತೀವ್ರ ಕಾರ್ಯಾಚರಣೆ ನಡೆಸಿದ್ದು ಮತ್ತಷ್ಟು ವಿಷಯಗಳು ಬಯಲಿಗೆ ಬಂದಿವೆ. ಈ ಪ್ರಕರಣ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಡಿಎಚ್ಒ ಡಾ. ಮಹೇಶ್ ಕೋಣಿ, ಎಸ್ ಪಿ ಪ್ರಭಾವತಿ ಪಕ್ಕೀರಪೂರ, ಬೈಲಹೊಂಗಲ ಡಿವೈಎಸ್​​​ಪಿ ರವಿ ನಾಯಕ್, ಮೂರು ಸಿಪಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ನೀಟ್​ ವಿವಾದ; ಸುಪ್ರೀಂಕೋರ್ಟ್​ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹಿಸಿದ ಕಪಿಲ್ ಸಿಬಲ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + seventeen =
Remember me
