ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ವಾಸಿಸುವ ಜನರೇ ನಕಲಿ ವೈದ್ಯ (Fake Doctor) ರ ಬಗ್ಗೆ ಎಚ್ಚರವಿರಲಿ. ನಗರದಲ್ಲಿ ನಕಲಿ ಕ್ಲಿನಿಕ್​ (Fake Clinics)ಗಳ ಹಾವಳಿ ಇನ್ನು ನಿಂತಿಲ್ಲ ಎಂಬುವನ್ನು ಮರೆಯಬೇಡಿ. ಒಂದು ವೇಳೆ ನಕಲಿ ಕ್ಲಿನಿಕ್​ಗೆ ಹೋದ್ರೆ ನಿಮ್ಮ ಜೀವ ಯಮಲೋಕಕ್ಕೆ ಪಾರ್ಸಲ್ ಆಗುವುದು ಗ್ಯಾರೆಂಟಿ. ಹೀಗಾಗಿ ನಕಲಿ ವೈದ್ಯರ ಬಗ್ಗೆ ತುಂಬಾ ಎಚ್ಚರದಿಂದಿರಿ. ರಾಜಧಾನಿ(Bengaluru)ಯಲ್ಲಿ ನಕಲಿ ಡಾಕ್ಟರ್ (Doctor) ಒಬ್ಬ ಮಾಡಿದ ಅವಾಂತರ ಅಷ್ಟಿಷ್ಟಲ್ಲ. ಯುವತಿಯೊಬ್ಬಳಿಗೆ ಇಂಜೆಕ್ಷನ್ ಕೊಟ್ಟು ನರಕ ತೋರಿಸಿದ್ದಾನೆ. ಇಂಜೆಕ್ಷನ್ (Injection) ಪಡೆದ ಯುವತಿ ಇದೀಗ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ.
ಅಷ್ಟಕ್ಕೂ ಆಗಿದ್ದೇನು ಅಂದರೆ, ಜ್ವರ (Fever) ಅಂತಾ ಇಂಜೆಕ್ಷನ್ ತೆಗೆದುಕೊಂಡ ಯುವತಿ (Young Girl) ಜೀವಕ್ಕೆ ಇದೀಗ ಅಪಾಯ ಎದುರಾಗಿದೆ. ನಕಲಿ ವೈದ್ಯನ ಎಡವಟ್ಟಿಗೆ ಕಳೆದ 3 ತಿಂಗಳಿಂದ ಯುವತಿ ನರಕಯಾತನೆ ಅನುಭವಿಸುತ್ತಿದ್ದಾಳೆ. ಆಕೆಯ ಹೆಸರು ಜ್ಯೋತಿ (29). ದಾಸರಹಳ್ಳಿ (Dasarahalli) ನಿವಾಸಿಯಾಗಿರುವ ಜ್ಯೋತಿ ಕಳೆದ ಸೆಪ್ಟೆಂಬರ್ 25ರಂದು ಜ್ವರ ಬಂದಿದೆ ಅಂತಾ ಹೆಗ್ಗನಹಳ್ಳಿಯ ಸಹನಾ ಪಾಲಿ ಕ್ಲಿನಿಕ್​ಗೆ ಚಿಕಿತ್ಸೆಗಾಗಿ ಹೋಗಿದ್ದಳು. ಈ ವೇಳೆ ಜ್ವರ ಇದೆ ಇಂಜೆಕ್ಷನ್ ತೆಗೆದುಕೊಳ್ಳಿ ಎಂದು ನಕಲಿ ವೈದ್ಯ ನಾಗರಾಜ್ ಹೇಳಿದ್ದ. ಅಲ್ಲದೆ, ಯುವತಿಗೆ ತಾನೇ ಇಂಜೆಕ್ಷನ್ ಸಹ ನೀಡಿದ್ದ.
ಇಂಜೆಕ್ಷನ್​ ಪಡೆದು ಬಂದಿದ್ದ ಜ್ಯೋತಿಗೆ ಎರಡೇ ದಿನದಲ್ಲಿ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಭಯಾನಕ ನೋವು ಶುರುವಾಯ್ತು. ನೋವಿದೆ, ಊತವಿದೆ ಅಂತಾ ಜ್ಯೋತಿ ಮತ್ತೆ ಅದೇ ಆಸ್ಪತ್ರೆಗೆ ಹೋದಳು. ವೈದ್ಯ ನಾಗರಾಜ್​ ಒಂದು ಮುಲಾಮು ನೀಡಿ ಹಚ್ಚಿಕೊಳ್ಳಿ ಎಂದಿದ್ದ. ಹಚ್ಚಿಕೊಂಡ ಬಳಿಕ ಇಂಜೆಕ್ಷನ್ ಕೊಟ್ಟಿದ್ದ ಜಾಗದಲ್ಲಿ ನೋವಿನ ಜೊತೆಗೆ ಊತ ಬರಲು ಶುರುವಾಗಿದೆ. ಈ ಬಗ್ಗೆ ಪ್ರಶ್ನಿಸಲು ಆಸ್ಪತ್ರೆಗೆ ಹೋದ್ರೆ ಪರಿಹಾರ ಕೊಡ್ತೇನೆ ಯಾರಿಗೂ ಈ ವಿಚಾರ ತಿಳಿಸಬೇಡಿ ಎಂದು ಧಮ್ಕಿ ಹಾಕಿದ್ದಾನೆ.
ಎಷ್ಟೇ ಪ್ರಯತ್ನಿಸಿದರೂ ನೋವು ಕಡಿಮೆ‌ಯಾಗದ ಕಾರಣ ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡಾ. ನಾಗರಾಜ್ ಕೊಟ್ಟಿದ್ದ ಇಂಜೆಕ್ಷನ್ ಜಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಡಿದೆ. ಆದರೂ ಕೂಡ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ವೈದ್ಯ ನಾಗರಾಜ್ ಇಂಜೆಕ್ಷನ್ ಕೊಟ್ಟಿರುವ ಜಾಗದಲ್ಲಿ ಆಪರೇಷನ್ ಮಾಡಿ 8 ಹೊಲಿಗೆ ಹಾಕಲಾಗಿದೆ. ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೀವು ಬರುತ್ತಿದೆ.
ಆಪರೇಷನ್ (Operation)​ ಜಾಗದಲ್ಲಿ ಕೀವು ತುಂಬಿಕೊಂಡು ಜ್ಯೋತಿ ಆರೋಗ್ಯಕ್ಕೆ ಕುತ್ತು ಎದುರಾಗಿದೆ. ಇದೀಗ ನಕಲಿ ವೈದ್ಯ ನಾಗರಾಜ್ ವಿರುದ್ಧ ರಾಜಗೋಪಾಲ್ ನಗರ ಪೋಲೀಸ್ (Bengaluru Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೈದ್ಯ ನಾಗರಾಜ್​ನನ್ನ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಅಶ್ಲೀಲ ವಿಡಿಯೋ ತೋರಿಸಿ, ಅಂಗಾಂಗ ಮುಟ್ಟಿ ದೌರ್ಜನ್ಯ: ಮಂಡ್ಯದಲ್ಲಿ ಮುಖ್ಯಶಿಕ್ಷಕನ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು

VIDEO| ಆಸೆಯಿಂದ ವಧುವಿನ ಕೆನ್ನೆಗೆ ಚುಂಬಿಸಲು ಹೋದ ವರನಿಗೆ ವೇದಿಕೆಯಲ್ಲೇ ಕಾದಿತ್ತು ಭಾರಿ ಶಾಕ್​!

ಜೈಲು ಪಾಲಾಗಲಿದ್ದಾರೆ ಅನುಭವ ಸಿನಿಮಾ ಖ್ಯಾತಿಯ ಅಭಿನಯಾ! ಹೈಕೋರ್ಟ್​ನಿಂದ 2 ವರ್ಷ ಶಿಕ್ಷೆ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
