ಮೈಸೂರು:ನಕಲಿ ಯೂನಿರ್ವಸಿಟಿ ಹೆಸರಲ್ಲಿ ಡಾಕ್ಟರೇಟ್ ಪದವಿ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಡಾಕ್ಟರೇಟ್​ ಪದವಿ ಪಡೆಯಲು ಬಂದಿದ್ದ ಶಾಸಕರೊಬ್ಬನ್ನು ವಾಪಸ್​ ಕಳುಹಿಸಿದ ಘಟನೆ ನಗರದಲ್ಲಿ ಸಂಭವಿಸಿದೆ.
ನಗರದ ಖಾಸಗಿ ಹೋಟೆಲ್​ನಲ್ಲಿ ಇಂಟರ್​ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿರ್ವಸಿಟಿ ಹೆಸರಿನಲ್ಲಿ ಡಾಕ್ಟರೇಟ್​ ಪದವಿ ಪ್ರದಾನ ಕಾರ್ಯಕ್ರಮ ಶನಿವಾರ ಬೆಳಗ್ಗೆ ನಡೆಯುತ್ತಿತ್ತು. ಇದು ನಕಲಿ ಡಾಕ್ಟರೇಟ್​ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಕ್ರಮಕ್ಕೆ ದಾಳಿ ನಡೆಸಿದ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ತಂಡ, ಕಾರ್ಯಕ್ರಮ ಆಯೋಜಿಸಿದ್ದ ಮೂವರನ್ನು ವಶಕ್ಕೆ ಪಡೆಯಿತು. ದಾಳಿ ವೇಳೆ ಹಲವರು ಕಾಲ್ಕಿತ್ತರು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗಿಯಾಗಿದ್ದ ಹರಿಹರ ಶಾಸಕ ರಾಮಪ್ಪ ಅವರ ಮನವೊಲಿಸಿದ ಡಿಸಿಪಿ, ಇದು ನಕಲಿ ಯೂನಿರ್ವಸಿಟಿ ಎಂದೇಳಿ ಪ್ರಶಸ್ತಿ ಪಡೆಯದಂತೆ ತಡೆದರು. ಶಾಸಕರಿಗೆ ನಕಲಿ ಯೂನಿರ್ವಸಿಟಿಯವರು ‘ಇಂಟರ್​ನ್ಯಾಷನಲ್​ ಗ್ಲೋಬಲ್​ ಪೀಸ್​ ಯೂನಿರ್ವಸಿಟಿ ಶಾಂತಿ ಪುರಸ್ಕಾರ’ ಎಂಬ ನಕಲಿ ಪ್ರಶಸ್ತಿ ನೀಡಲು ಮುಂದಾಗಿದ್ದರು.ಇದನ್ನೂ ಓದಿರಿಹಾಲು ತರಲು ಹೋಗುತ್ತಿದ್ದವನ ಎದುರಿಗೆ ಬಂತು ಮೃತ್ಯು!
ನಕಲಿ ಡಾಕ್ಟರೇಟ್​ ಪದವಿ ಪ್ರದಾನ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿಂದ ಹಣ ಪಡೆದ ದುಷ್ಕರ್ಮಿಗಳು ನಕಲಿ ಯೂನಿರ್ವಸಿಟಿಯ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದ್ದರು. ಕರ್ನಾಟಕ ಮಾತ್ರವಲ್ಲ, ದೇಶದ ಇತರ ಭಾಗಗಳಲ್ಲೂ ಡಾಕ್ಟರೇಟ್ ಹೆಸರಲ್ಲಿ ಪಂಗನಾಮ ಹಾಕಲು ಈ ನಕಲಿ ಯೂನಿರ್ವಸಿಟಿ ಮುಂದಾಗಿತ್ತು ಎಂದು ಗೊತ್ತಾಗಿದೆ. ನಕಲಿ ಡಾಕ್ಟರೇಟ್ ಹಂಚಲು ತಂದಿದ್ದ 150 ಸರ್ಟಿಫಿಕೇಟ್ ಹಾಗೂ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು, ತಮಿಳುನಾಡು ಮೂಲದ ನಂಬಿಯಾರ್ ಹಾಗೂ ಶ್ರೀನಿವಾಸ್ ಎಂಬುವವರನ್ನು ಬಂಧಿಸಿದೆ.
ಕಳೆದ ಎಂಟು ವರ್ಷದಿಂದ ಹಣ ಪಡೆದು ನಕಲಿ ಡಾಕ್ಟರೇಟ್​ ಪದವಿ ನೀಡಲಾಗುತ್ತಿತ್ತು. ನಕಲಿ ಪದವಿ ಕೊಡಲು ತಲಾ 25 ಸಾವಿರದಿಂದ 1 ಲಕ್ಷ ರೂ. ವಸೂಲಿ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.
ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ಅಪಘಾತದಲ್ಲಿ ಪಾರಾದರೂ ಬೆನ್ನಟ್ಟಿದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
