ಬಳ್ಳಾರಿ:ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ನಕಲಿ ದಾಖಲಾತಿ ಸೃಷ್ಟಿಸಿದ ಆರೋಪ ಹಿನ್ನೆಲೆಯಲ್ಲಿ ಮಾಜಿ ಸಚಿವ, ಶಾಸಕ ಪಿಟಿ ಪರಮೇಶ್ವರ​ ನಾಯ್ಕ್ ಹಾಗೂ ಪುತ್ರ ಭರತ್​ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.
ಪಿಟಿ ಭರತ್ ಹರಪನಹಳ್ಳಿ ತಾಲೂಕು ಲಕ್ಷ್ಮಿಪುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದಾರೆ. 2016ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ ಭರತ್​ ವಯಸ್ಸು 21 ವರ್ಷಕ್ಕಿಂತ ಕಡಿಮೆ‌ ಇತ್ತು. ಆಗ ಪಿಟಿ ಪರಮೇಶ್ವರ ನಾಯ್ಕ್​ ಅವರು ಕಾರ್ಮಿಕ ಸಚಿವರಾಗಿದ್ದರು. ಇದನ್ನು ದುರುಪಯೋಗಪಡಿಸಿಕೊಂಡು ತಮ್ಮ ಪ್ರಭಾವ ಬೀರಿ ಭರತ್​ಗೆ 21 ವರ್ಷವಾಗಿದೆ ಎಂದು ನಕಲಿ ದಾಖಲೆ ಸೃಷ್ಟಿದ್ದರು ಎಂದು ಆರೊಪ ಕೇಳಿಬಂದಿದೆ.
ಇದನ್ನೂ ಓದಿ:VIDEO| ವಿಜಯವಾಣಿ ಫೋನ್​ ಇನ್​ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಸಾಧಕರು ನೀಡಿದ ಸಲಹೆಗಳೇನು?
ಹರಪನಹಳ್ಳಿ ವಕೀಲ ರೇವನೌಡ 2016ರಲ್ಲೇ ಈ ಸಂಬಂಧ ದೂರು ನೀಡಿದ್ದರು. ವಿಚಾರಣೆ ಸಂದರ್ಭದಲ್ಲಿ ಸಂಗ್ರಹವಾದ ದಾಖಲೆಗಳನ್ನು ಎಫ್ಎಸ್ಎಲ್ ಮಡಿವಾಳ ತಜ್ಞರಿಗೆ ಕಳಿಸಲಾಗಿತ್ತು. ಈಗ ವರದಿ ಬಂದ ಹಿನ್ನೆಲೆಯಲ್ಲಿ ಭರತ್ ಹಾಗೂ ಪಿಟಿ ಪರಮೇಶ್ವರ ನಾಯ್ಕ್​ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿದ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ದವೂ ಪ್ರಕರಣ ದಾಖಲಾಗಿದೆ. ಪರಮೇಶ್ವರ ನಾಯ್ಕ್ ಎ1, ಭರತ್ ಎ2 ಹಾಗೂ ಮುಖ್ಯೋಪಾಧ್ಯಾಯ ರಾಜಾ ಸೋಮಶೇಖರ ಎ3 ಆರೋಪಿಯಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಕೋವಿಡ್​-19 ಪಿಡುಗಿನ ವೇಳೆ ಸೈಬರ್​ಕ್ರೈಂ ಹೆಚ್ಚಳ; ಯುಎನ್​ ಬಿಡುಗಡೆ ಮಾಡಿದೆ ಎದೆನಡುಗಿಸುವ ಅಂಕಿಅಂಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eight =
Remember me
