ಹಾವೇರಿ:ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ನೇಮಕಗೊಂಡಿರುವುದು ಪುರಾವೆ ಸಮೇತ ದೃಢಪಟ್ಟ ಹಿನ್ನೆಲೆಯಲ್ಲಿ ಹಾವೇರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ ನಿಂಗಪ್ಪ ಬರೇಗಾರ ಎಂಬುವವರನ್ನು ಸೇವೆಯಿಂದ ವಜಾಗೊಳಿಸಿ ಎಂದು ತೋಟಗಾರಿಕೆ ಇಲಾಖೆಯ ನೇಮಕಾತಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ:ಶ್ರೀ ಶನೈಶ್ಚರ ಸ್ವಾಮಿಗೆ ವಿಶೇಷ ಪೂಜೆ
ಬಸವರಾಜಪ್ಪ ತೋಟಗಾರಿಕೆ ಇಲಾಖೆಯಲ್ಲಿ 1981ರಿಂದ 1991ರವರೆಗೆ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸಿದ ಕುರಿತು ಸುಳ್ಳು ದಾಖಲೆಗಳನ್ನು ಸೃಷ್ಠಿಸಿಕೊಂಡು ಇಲಾಖೆಗೆ ನೀಡಿ 2009 ಮಾರ್ಚ್ 2ರಂದು ತೋಟಗಾರಿಕೆ ಸಹಾಯಕ ಅಧಿಕಾರಿ ಹುದ್ದೆಗೆ ಮುಂಬಡ್ತಿ ಪಡೆದುಕೊಂಡಿದ್ದರು. ಇವರನ್ನು ನಿಯಮ ಬಾಹಿರವಾಗಿ ಸಕ್ರಮಗೊಳಿಸಲಾಗಿದೆ. ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಇಲಾಖೆಗೆ ಕೆಲವರು ದೂರು ನೀಡಿದ್ದರು. ಈ ಕುರಿತು ಪರಿಶೀಲನೆ ನಡೆಸಿ, ವರದಿ ನೀಡಲು ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರಿಗೆ ನಿರ್ದೇಶನಾಲಯ ಸೂಚಿಸಿತ್ತು.
ಬಸವರಾಜಪ್ಪನ ದಾಖಲಾತಿ ಪರಿಶೀಲಿಸಿದಾಗ 1981ರಿಂದ 1991ರವರೆಗೆ ಅವಧಿಯಲ್ಲಿ ಆತ ದಿನಗೂಲಿ ನೌಕರ ಆಗಿರಲಿಲ್ಲ. ಬದಲಾಗಿ ಇನ್ನೂ ವಿದ್ಯಾಥಿರ್ಯಾಗಿದ್ದ. ಅಲ್ಲದೆ ಆತ 10 ದಿನಗೂಲಿ ನೌಕರನಾಗಿ ಕೆಲಸ ಮಾಡಿರುವುದು 17 ತಿಂಗಳು ಮಾತ್ರ ಎಂಬುದು ಶಾಲಾ ಮತ್ತು ಕಾಲೇಜು ದಾಖಲೆ ಮೂಲಕ ತಿಳಿದು ಬಂದಿದೆ. ಆದರೂ ಬಸವರಾಜಪ್ಪ ಇಲಾಖೆಗೆ ಸುಳ್ಳು ದಾಖಲೆ ನೀಡಿ ಮುಂಬಡ್ತಿ ಪಡೆದುಕೊಂಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಹಾಗೂ ನೇಮಕಾತಿ ಪ್ರಾಧಿಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಸಂದರ್ಶನದ ವೇಳೆ ನನ್ನ ಖಾಸಗಿ ಅಂಗಗಳಿಗೆ ಥಳಿಸಿದ್ದಾನೆ! ರಾಜ್​ ತರುಣ್​ ಸ್ನೇಹಿತನ ವಿರುದ್ಧ ಲಾವಣ್ಯ ದೂರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 + 10 =
Remember me
