ಬೆಂಗಳೂರು:ಬಿಬಿಎಂಪಿ ಚೀಫ್ ಇಂಜಿನಿಯರ್ ಅಂತ ಹೇಳ್ಕೊಂಡು ಓಡಾಡ್ತಿದ್ದ ವ್ಯಕ್ತಿಯನ್ನು ಸಿಎಂ ಕಚೇರಿ ಬಳಿ ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಮೂಲದ ಪರಮೇಶ್ ಬಂಧಿತ. ಇಂದು(ಶನಿವಾರ) ಸಿಎಂ ಕಚೇರಿಗೆ ಆರೋಪಿ ಏಕಾಏಕಿ ನುಗ್ಗಿ, ತಾನು ಬಿಬಿಎಂಪಿ ಚೀಫ್ ಇಂಜಿನಿಯರ್ ಎಂದು ಜೋರಾಗಿ ಹೇಳಿದ್ದಾನೆ. ಸಿಎಂ ಆಪ್ತ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಆತನನ್ನು ಒಳಗೆ ಕರೆದು ವಿಚಾರಿಸಿದ್ದಾರೆ. ಆಗ ತನ್ನನ್ನು ಸಿಎಂ ಪರ್ಸನಲ್‌ ಸೆಕ್ರೆಟರಿ ಪೋಸ್ಟ್​ಗೆ ನೇಮಿಸಲಾಗಿದೆ ಎಂದು ಹೇಳಿದ್ದಾನೆ. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಈತ ಹಲವರಿಗೆ ವಂಚಿಸಿರುವುದು ಗೊತ್ತಾಗಿದೆ.
ವಿಚಾರಣೆ ವೇಳೆ ಆರೋಪಿ ಪರಮೇಶ್​ನ ಮೊಬೈಲ್​ನಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಾಗಿವೆ. ಬಿಬಿಎಂಪಿ ಚೀಫ್ ಇಂಜಿನಿಯರ್ ಅಂದ್ಕೊಂಡೇ ಸಾಕಷ್ಟು ಸರ್ಕಾರಿ ಅಧಿಕಾರಿಗಳಿಗೆ ಮೋಸ ಮಾಡಿರುವುದು ಗೊತ್ತಾಗಿದೆ.
ಅದರಲ್ಲೂ ಸರ್ಕಾರಿ ಇಲಾಖೆಯಲ್ಲಿರುವ ಮಹಿಳಾ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸಿರುವುದು ಬೆಳಕಿಗೆ ಬಂದದಿದೆ. ರಾಜಕಾರಣಿಗಳ ಜೊತೆ ತಾನು ತೆಗೆಸಿಕೊಂಡ ಫೋಟೋಗಳನ್ನೇ ಬಂಡವಾಳ ಮಾಡಿಕೊಂಡ ಆರೋಪಿ, ನನಗೆ ಎಲ್ಲ ರಾಜಕಾರಣಿಗಳ ಪರಿಚಯ ಇದೆ. ನಿಮಗೆ ವರ್ಗಾವಣೆ ಮಾಡಿಸಬೇಕು ಅಂದ್ರೂ ಆ ಕೆಲಸ ಮಾಡಿಕೊಡುವೆ, ಟೆಂಡರ್ ಕೊಡಿಸ್ತೀನಿ ಅಂತ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ್ದಾನೆ ಎನ್ನಲಾಗಿದೆ.
ಕನ್ನಡ ಕಿರುತೆರೆಯಿಂದ 2 ವರ್ಷ ಅನಿರುದ್ಧ್​ ಬ್ಯಾನ್​? ಯಾವುದೇ ಧಾರಾವಾಹಿ, ಶೋಗೆ ಆಯ್ಕೆ ಮಾಡದಂತೆ ವಾಹಿನಿಗಳಿಗೆ ಪತ್ರ ಬರೆದ ಸಂಘ

ಇದು ಮಾತ್ರೆಯಲ್ಲ, ಮದುವೆ ಆಮಂತ್ರಣ ಪತ್ರಿಕೆ! ಸಖತ್​ ವೈರಲ್​ ಆಗ್ತಿದೆ ಫಾರ್ಮಾಸಿಸ್ಟ್- ನರ್ಸ್​ ಜೋಡಿಯ ವೆಡ್ಡಿಂಗ್​ ಕಾರ್ಡ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + seventeen =
Remember me
