ಬೆಂಗಳೂರು:ಜನರನ್ನು ಯಾಮಾರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಮಹಿಳಾ ಕ್ರೈಂ ರಿಪೋರ್ಟರ್​ ಜಯನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಭವಾನಿ ಬಂಧಿತೆ. ಈಕೆ, ‘ನಾನು ಮಾಧ್ಯಮವೊಂದರಲ್ಲಿ ಕ್ರೈಂ ರಿಪೋರ್ಟರ್​ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಪೊಲೀಸ್​ ಅಧಿಕಾರಿಗಳ ಪರಿಚಯವಿದೆ’ ಎಂದು ರುಕ್ಮಿಣಿ ಎಂಬುವವರಿಗೆ ನಂಬಿಸಿ ಅವರ ಹಣಕಾಸು ವ್ಯವಹಾರಕ್ಕೆ ನೆರವಾಗುವುದಾಗಿ ಹೇಳಿ 2 ಲಕ್ಷ ರೂ. ಕಮಿಷನ್​ ಪಡೆದು ವಂಚಿಸಿದ್ದಾಳೆ. ಈ ಬಗ್ಗೆ ಹಣ ಕಳೆದುಕೊಂಡ ಮಹಿಳೆಯು ಭವಾನಿ ಮತ್ತು ಪೊಲೀಸ್​ ಅಧಿಕಾರಿ ಎಂದು ಹೇಳಿಕೊಂಡಿದ್ದ ಶವಿ ಎಂಬುವವರ ವಿರುದ್ಧ ದೂರು ನೀಡಿದ್ದರು.
ಇದನ್ನೂ ಓದಿರಿಹೆಂಡ್ತಿಯನ್ನು ಭೀಕರವಾಗಿ ಹತ್ಯೆಗೈದ, ಯಾರೋ ಅತ್ಯಾಚಾರವೆಸಗಿ ಕೊಂದಂತೆ ಮೃತದೇಹದ ಬಟ್ಟೆ ಹರಿದ…
ಏನಿದು ಪ್ರಕರಣ?:ಬೃಂದಾವನ ನಗರ ನಿವಾಸಿ ರುಕ್ಮಿಣಿ ಎಂಬುವವರು ತನ್ನ ಮನೆ ಮಾರಿ ಬಂದ 25 ಲಕ್ಷ ಹಣವನ್ನು ಪರಿಚಯಸ್ಥರಿಗೆ ಸಾಲ ನೀಡಿದ್ದರು. ದಿನಕಳೆದಂತೆ ರುಕ್ಮಿಣಿಗೆ ಸಾಲ ವಾಪಸ್ ಬಂದಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ 25 ಲಕ್ಷ ರೂ. ವಸೂಲಿ ಕಷ್ಟವಾಗಿತ್ತು. ಹಣ ಕೊಡದೆ ಸತಾಯಿಸುತ್ತಿದ್ದರು. ರುಕ್ಮಿಣಿ ಅವರ ಮನೆ ಪಕ್ಕದಲ್ಲೇ ವಾಸವಿದ್ದ ಭವಾನಿಗೆ ಈ ವಿಷಯ ಗೊತ್ತಾಗಿ ಆಕೆ, ‘ನನಗೆ ಪೊಲೀಸರು ಗೊತ್ತು. ಅವರಿಂದಲೇ ಕರೆ ಮಾಡಿಸಿ ಹಣ ವಾಪಸ್ ಕೊಡಿಸುವೆ’ ಎಂದು ನಂಬಿಸಿದ್ದಳು. ಅಲ್ಲದೆ ‘ನಿನಗೆ ಬರಬೇಕಿರುವ 25 ಲಕ್ಷ ರೂ.ಅನ್ನು ಸಾಲಗಾರರಿಂದ ಕೊಡಿಸಲು ನನಗೆ 2 ಲಕ್ಷ ರೂ. ಅನ್ನು ಮುಂಗಡವಾಗಿ ಕಮಿಷನ್​ ಕೊಡಬೇಕು’ ಎಂದು ಕಂಡಿಷನ್ ಕೂಡ ಹಾಕಿದ್ದಳು. ಹೇಗೋ ಬಂದಷ್ಟು ಹಣ ಬಂದರೆ ಸಾಕಪ್ಪ ಎಂಬ ಸ್ಥಿತಿಯಲ್ಲಿದ್ದ ರುಕ್ಮಿಣಿ, ತನ್ನ ಸೊಸೆಯ ಅಭರಣವನ್ನು ಗಿರವಿ ಇಟ್ಟು ಭವಾನಿಗೆ 2 ಲಕ್ಷ ರೂ. ಕೊಟ್ಟಿದ್ದರು.
ಇದಾದ ಬಳಿಕ ಭವಾನಿ, ರುಕ್ಮಿಣಿ ಅವರನ್ನು ದಕ್ಷಿಣ ವಿಭಾಗದ ಪೊಲೀಸ್​ ಆಯುಕ್ತರ ಕಚೇರಿ ಬಳಿಗೆ ಕರೆದೊಯ್ದು ಶಶಿ ಎಂಬಾತನ್ನು ತೋರಿಸಿ ಪೊಲೀಸ್​ ಅಧಿಕಾರಿ ಎಂದು ಪರಿಚಯಿಸಿದ್ದಳು. ಅವನಿಗೂ ಹಣ ಕೊಡಿಸಿದ್ದಳು. ನಂತರ ರುಕ್ಮಿಣಿಗೆ ಬರಬೇಕಿದ್ದ ಸಾಲವನ್ನು ಭವಾನಿ ವಸೂಲಿ ಮಾಡಿಸಿ ಕೊಡಲಿಲ್ಲ. ಕೊನೆಗೆ 2 ಲಕ್ಷ ರೂ. ಕಮಿಷನ್​ ಹಣವನ್ನೂ ರುಕ್ಮಿಣಿಗೆ ಹಿಂತಿರುಗಿಸಲಿಲ್ಲ. ಕೊನೆಗೆ ಜಯನಗರ ಪೊಲೀಸ್​ ಠಾಣೆ ಮೆಟ್ಟಿಲೇರಿದ ರುಕ್ಮಿಣಿಗೆ ಗೊತ್ತಾಯ್ತು ಭವಾನಿ ಪತ್ರಕರ್ತೆ ಅಲ್ಲ, ಸುಳ್ಳು ಹೇಳಿದ್ದಾಳೆಂದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಕಲಿ ವರದಿಗಾರ್ತಿಯನ್ನು ಗುರುವಾರ ಬಂಧಿಸಿದ್ದಾರೆ.
ಬೆಂಗಳೂರಲ್ಲಿ ವಿದೇಶಿಗರಿದ್ದ 35 ಮನೆಗಳ ಮೇಲೆ ರಾತ್ರೋರಾತ್ರಿ ಸಿಸಿಬಿ ರೇಡ್​… ಬೆಚ್ಚಿ ಬೀಳಿಸುತ್ತೆ ಅಲ್ಲಿನ ಅಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
