ಬೆಂಗಳೂರು:ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿಯ ಮಂಜುನಾಥ್ ಬಂಧಿತ. ಆರೋಪಿಯು ಕೃತ್ಯಕ್ಕೆ ಬಳಸಿದ್ದ ಕಂಪ್ಯೂಟರ್, ಪ್ರಿಂಟರ್ ಹಾಗೂ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಾಸಗಿ ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿಕೊಂಡಿದ್ದ ಆರೋಪಿ 8ಕ್ಕೂ ಹೆಚ್ಚು ಜನರಿಗೆ ವಂಚಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೋಟೋಶಾಪ್​ನಿಂದ ತಯಾರು!:ಆನ್​ಲೈನ್​ನಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಬಗ್ಗೆ ಶೋಧಿಸಿ, ಲೋಗೋ ಹಾಗೂ ಮಾದರಿ ಅಂಕಪಟ್ಟಿಯನ್ನು ಸಂಗ್ರಹಿಸಿದ್ದ. ಫೋಟೋಶಾಪ್ ಸಾಫ್ಟ್​ವೇರ್ ಮೂಲಕ ಅಂಕಪಟ್ಟಿ ತಯಾರಿಸುತ್ತಿದ್ದ. ತಾನು ಕೆಲಸ ಮಾಡಿಕೊಂಡಿದ್ದ ಕಾಲೇಜಿನ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡು ಅವರ ಮೂಲಕ ಯುವಕರನ್ನು ಸೆಳೆಯುತ್ತಿದ್ದ. ಮಾನ್ಯತೆ ಇರುವ ವಿಶ್ವವಿದ್ಯಾಲಯದ ಅಂಕಪಟ್ಟಿ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂ. ಪಡೆದು ಯಾಮಾರಿಸುತ್ತಿದ್ದ.
ಕೋಲಾರ ಮೂಲದ ಮಹೇಶ್ ಎಂಬ ಯುವಕ, ಇತ್ತೀಚೆಗೆ ಉದ್ಯೋಗ ಅರಸಿ ಕಂಪನಿಯೊಂದಕ್ಕೆ ಹೋಗಿದ್ದ. ಈ ವೇಳೆ ಪದವಿ ವ್ಯಾಸಂಗ ಪೂರ್ಣಗೊಳಿಸಿರುವ ಬಗ್ಗೆ ಅಂಕಪಟ್ಟಿ ಕೇಳಿದ್ದರು. ಕೆಲಸದ ವಿಚಾರವನ್ನು ತನ್ನ ಸ್ನೇಹಿತನ ಮುಂದೆ ಹೇಳಿಕೊಂಡಿದ್ದ. ಆತ ತನಗೆ ಪರಿಚಯವಿದ್ದ ಮಂಜುನಾಥ್​ನನ್ನು ಭೇಟಿಯಾಗುವಂತೆ ಸೂಚಿಸಿದ್ದ.
2 ಲಕ್ಷ ರೂ.ಗೆ ಅಂಕಪಟ್ಟಿ:ಭೋವಿಪಾಳ್ಯದ ಪಾರ್ಕ್ ಬಳಿ ಮಂಜುನಾಥ್​ನನ್ನು ಭೇಟಿ ಮಾಡಿದ್ದ ಮಹೇಶ್, ಬಿ.ಎಸ್​ಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ವಿಚಾರವನ್ನು ತಿಳಿಸಿದ್ದ. ತನಗೆ ಕರ್ನಾಟಕ ವಿಶ್ವವಿದ್ಯಾಲಯದ ಅಧಿಕಾರಿಗಳ ಪರಿಚಯವಿದೆ. 2 ಲಕ್ಷ ರೂ. ಕೊಟ್ಟರೆ ಬೇಕಾದ ಅಂಕಪಟ್ಟಿ ಕೊಡಿಸುತ್ತೇನೆ ಎಂದು ಮಂಜುನಾಥ್ ಭರವಸೆ ನೀಡಿದ್ದ.
ಆತನ ಮಾತನ್ನು ನಂಬಿದ ಮಹೇಶ್, ಮುಂಗಡವಾಗಿ 60 ಸಾವಿರ ರೂ. ಕೊಟ್ಟಿದ್ದಾನೆ. ಬಳಿಕ ಬಿ.ಎಸ್​ಸಿ ಪದವಿ ವ್ಯಾಸಂಗದ 1ನೇ ಸೆಮಿಸ್ಟರ್ ಅಂಕಪಟ್ಟಿ ನೀಡಿದ್ದ. ಬಾಕಿ 5 ಸೆಮಿಸ್ಟರ್​ಗಳ ಅಂಕಪಟ್ಟಿಯನ್ನು ವಾರದೊಳಗೆ ಕೊಡುವುದಾಗಿ ಹೇಳಿದ್ದ. ಮಹೇಶ್ ಅಂಕಪಟ್ಟಿಯನ್ನು ತೆಗೆದುಕೊಂಡು ಕೆಲಸಕ್ಕಾಗಿ ಕಂಪನಿಗೆ ಹೋಗಿದ್ದನು. ಪರಿಶೀಲನೆ ವೇಳೆ ಅದು ನಕಲಿ ಎಂಬುದು ಗೊತ್ತಾಗಿ ದೂರು ಕೊಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
