ಬೆಂಗಳೂರು:ನಕಲಿ ಖಾತೆ ರಾಜಧಾನಿ ಬೆಂಗಳೂರಿನ ಪೊಲೀಸರನ್ನೂ ಕಾಡಿದ್ದು, ಫೇಕ್ ಅಕೌಂಟ್​​ನಿಂದ ಮಾಡಿದ್ದ ಟ್ವೀಟ್ ಕೂಡ ವೈರಲ್ ಆಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸರ ಅಧಿಕೃತ ಖಾತೆಯಿಂದ ಸ್ಪಷ್ಟನೆ ಕೂಡ ನೀಡಲಾಗಿದೆ.
ಇದನ್ನೂ ಓದಿ:ಸಂಬಂಧಿಯಿಂದಲೇ ಭೀಕರ ಕೃತ್ಯ: ಅಣ್ಣನ ಹೆಂಡತಿ ಹಾಗೂ ಮಗನನ್ನು ಹೊಡೆದು ಕಡಿದು ಕೊಂದ
ಕಿಡಿಗೇಡಿಗಳು ಬೆಂಗಳೂರು ನಗರ ಪೊಲೀಸರ ಹೆಸರಿನಲ್ಲಿ ಟ್ವಿಟರ್ ನಕಲಿ ಖಾತೆ ತೆರೆದು ಆರ್‌ಸಿಬಿ ತಂಡದ ಕ್ಯಾಪ್ಟನ್ ಕೊಹ್ಲಿ ಪರ ಟ್ವೀಟ್​ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ನಗರ ಪೊಲೀಸರು ಆ ಟ್ವೀಟ್ ಮಾತ್ರವಲ್ಲ, ಖಾತೆಯೇ ನಕಲಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!
ಕೊಹ್ಲಿಯನ್ನು ಅಣಕಿಸುವ ರೀತಿಯಲ್ಲಿ ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದರು ಎನ್ನಲಾಗಿತ್ತು. ಇದಕ್ಕೆ ಪ್ರತಿಯಾಗಿ ನಗರ ಪೊಲೀಸರು ಮುಂಬೈ ಟೀಮ್‌ನ ರೋಷಿತ್ ಶರ್ಮ ಅವರಿಗೆ ಟಾಂಗ್ ಕೊಟ್ಟಿದ್ದ ರೀತಿಯಲ್ಲಿದ್ದ ನಕಲಿ ಟ್ವೀಟ್ ಮಾಡಿ ವೈರಲ್ ಮಾಡಿದ್ದರು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅದು ನಕಲಿ ಟ್ವೀಟ್ ಎಂದು ಸ್ಪಷ್ಟನೆ ನೀಡಿದ್ದಾರೆ.
A twitter handle by the name 'blrcitypolicee' has been impersonating Bengaluru City Police. The tweets from this account are being misconstrued as from our official handle.@BlrCityPolicewith a 'Grey Checkmark' is our official handle.Identity theft, virtually or otherwise, can…pic.twitter.com/qm4T9YyE2D— ಬೆಂಗಳೂರು ನಗರ ಪೊಲೀಸ್‌ BengaluruCityPolice (@BlrCityPolice)April 28, 2023
A twitter handle by the name 'blrcitypolicee' has been impersonating Bengaluru City Police. The tweets from this account are being misconstrued as from our official handle.@BlrCityPolicewith a 'Grey Checkmark' is our official handle.Identity theft, virtually or otherwise, can…pic.twitter.com/qm4T9YyE2D
ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
