ಗಿರೀಶ್ ಗರಗಬೆಂಗಳೂರು: ‘ಫೇಮ್ ಇಂಡಿಯಾ- 2’ರ ಯೋಜನೆಯಡಿ ರಾಜ್ಯದ ನಾಲ್ಕು ನಿಗಮಗಳ ಪೈಕಿ, ಮೂರು ನಿಗಮಗಳಿಗೆ ಎಲೆಕ್ಟ್ರಿಕ್ ಬಸ್ ಖರೀದಿಗೆ ಹರಸಾಹಸ ಪಡಲಾಗುತ್ತಿದೆ. ಹೀಗಾಗಿ ಅವಧಿ ಮುಗಿದಿದ್ದರೂ ಬಸ್ ಪೂರೈಸುವ ಗುತ್ತಿಗೆದಾರರಿಗಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ.
ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬಸ್ ಬಳಕೆಗೆ ಉತ್ತೇಜನ ನೀಡುತ್ತಿದೆ. ಅದಕ್ಕಾಗಿಯೇ ‘ಫೇಮ್ ಇಂಡಿಯಾ’ ಹೆಸರಿನಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬಸ್ ಖರೀದಿ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯಲು ಸಬ್ಸಿಡಿ ನೀಡುತ್ತಿದೆ. ಅದರಂತೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಿಎಂಟಿಸಿ, ಕೆಎಸ್​ಆರ್​ಟಿಸಿ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 400 ಬಸ್​ಗಳನ್ನು ಪಡೆಯಲು ಕೇಂದ್ರ ಅನುಮತಿ ನೀಡಿದೆ.
ನಿಯಮದಂತೆ ಫೆಬ್ರವರಿಯೊಳಗೆ ಈ ಬಸ್​ಗಳ ಖರೀದಿ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಗುತ್ತಿಗೆದಾರರು ಸಿಗದಿರುವುದು ಮತ್ತು ಕರೊನಾ ಸೋಂಕಿನ ಕಾರಣದಿಂದಾಗಿ ಈವರೆಗೆ ಬಸ್ ಪಡೆಯುವ ಕೆಲಸವಾಗಿಲ್ಲ. ಹೀಗಾಗಿ ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. 400 ಬಸ್​ಗಳು: ನಿಗದಿಯಂತೆ ಬಿಎಂಟಿಸಿಗೆ 300 ಬಸ್ ಮತ್ತು ಕೆಎಸ್​ಆರ್​ಟಿಸಿ, ವಾಯುವ್ಯ ಸಾರಿಗೆ ನಿಗಮಕ್ಕೆ ತಲಾ 50 ಬಸ್ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್​ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಎಲೆಕ್ಟ್ರಿಕ್ ಬಸ್​ಗಳನ್ನು ಪೂರೈಸಿ ನಿರ್ವಹಣೆ ಮಾಡುವವರಿಗಾಗಿ ನವೆಂಬರ್​ನಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು.
ಆದರೆ, 3 ನಿಗಮಗಳ ಪೈಕಿ ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್ ಪೂರೈಸಲು ಟಾಟಾ ಮತ್ತು ಒಲೆಟ್ರಾ ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು. ಆದರೆ, ಟಾಟಾ ಸಂಸ್ಥೆಯಿಂದ ಸಮರ್ಪಕ ದಾಖಲೆ ಸಲ್ಲಿಕೆಯಾಗಿರಲಿಲ್ಲ ಮತ್ತು ಒಲೆಟ್ರಾ ಸಂಸ್ಥೆ ಹೆಚ್ಚಿನ ಮೊತ್ತ ಕೋಟ್ ಮಾಡಿದ್ದರಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ. ಹೀಗಾಗಿ ಫೆಬ್ರವರಿಯಲ್ಲಿ ಬಿಎಂಟಿಸಿಗೆ ಪ್ರತ್ಯೇಕವಾಗಿ ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಸಲಾಯಿತು. ಆದರೆ, ಈವರೆಗೆ ಯಾವೊಬ್ಬ ಗುತ್ತಿಗೆದಾರರೂ ಬಿಡ್ ಸಲ್ಲಿಸಿಲ್ಲ.
ಕರೊನಾ ಅಡ್ಡಿ:ಕರೊನಾ ಸೋಂಕಿನಿಂದಾಗಿ ಮಾಡಲಾಗಿರುವ ಲಾಕ್​ಡೌನ್​ನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳು ನಷ್ಟದಲ್ಲಿವೆ. ಹೀಗಾಗಿ ಟೆಂಡರ್ ಪ್ರಕ್ರಿಯೆ ಏನಾಗಿದೆ ಎಂಬುದು ತಿಳಿಯುತ್ತಿಲ್ಲ. ಅದರ ನಡುವೆಯೇ ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಎಲೆಕ್ಟ್ರಿಕ್ ಬಸ್ ಪೂರೈಸುವ ಕುರಿತು ಟೆಂಡರ್ ಕರೆಯಲಾಗಿದೆ.
ಎರಡು ಗಡುವು ಮುಗಿದಿದೆ:ಈ ಹಿಂದೆ ಬಸ್ ಪೂರೈಸುವ ಗುತ್ತಿಗೆ ಸಂಸ್ಥೆಗೆ ಡಿ. 15ರೊಳಗೆ ಕಾರ್ಯಾದೇಶ ನೀಡಲು ಗಡುವು ನೀಡಲಾಗಿತ್ತು. ಆದರೆ, ಗುತ್ತಿಗೆದಾರರ ನಿರಾಸಕ್ತಿಯಿಂದಾಗಿ ಬಿಡ್ ಸಲ್ಲಿಕೆಯಾಗದೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. 2ನೇ ಗಡುವಿನಂತೆ ಫೆ. 15 ರೊಳಗೆ ಕಾರ್ಯಾದೇಶ ನೀಡಬೇಕಿತ್ತು. ಅದು ಸಹ ಈಗ ಸಾಧ್ಯವಾಗಿಲ್ಲ.
ಬಸ್ ಪೂರೈಸಲು ವರ್ಷದ ಅವಕಾಶ:ಸದ್ಯ ಚಾಲ್ತಿಯಲ್ಲಿರುವ ಟೆಂಡರ್​ನಲ್ಲಿ ಗುತ್ತಿಗೆದಾರರು ಬಿಡ್ ಸಲ್ಲಿಸಿ ಆಯ್ದೆ ಯಾದರೂ, ಬಸ್​ಗಳನ್ನು ಸೇರ್ಪಡೆ ಮಾಡಲು ಗುತ್ತಿಗೆ ಸಂಸ್ಥೆಗೆ 1 ವರ್ಷದ ಕಾಲಾವಕಾಶ ನೀಡಲಾಗುತ್ತಿದೆ. ಕಾರ್ಯಾದೇಶ ಪತ್ರ ಪಡೆದ 6 ತಿಂಗಳಲ್ಲಿ ಅರ್ಧದಷ್ಟು ಬಸ್​ಗಳನ್ನು ಪೂರೈಸಬೇಕು. ಅದಾದ 6 ತಿಂಗಳಲ್ಲಿ ಉಳಿದ ಬಸ್​ಗಳನ್ನು ನಿಗಮಗಳಿಗೆ ನೀಡಬೇಕು.
ಚಾಲಕ, ತಾಂತ್ರಿಕ ಸಿಬ್ಬಂದಿಗೆ ತರಬೇತಿ:ಎಲೆಕ್ಟ್ರಿಕ್ ಬಸ್​ಗಳನ್ನು ಪೂರೈಸುವ ಸಂಸ್ಥೆಯೇ ಚಾಲನೆ ಕುರಿತು ನಿಗಮಗಳ ಚಾಲಕರಿಗೆ ಮತ್ತು ಬಸ್​ಗಳ ನಿರ್ವಹಣೆ ಕುರಿತು ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡುವ ಬಗ್ಗೆ ಟೆಂಡರ್​ನಲ್ಲಿ ಷರತ್ತು ವಿಧಿಸಲಾಗಿದೆ.
ವಾಪಸ್ ಹೋಗಿತ್ತು:2019ರಲ್ಲಿ ಕೇಂದ್ರ ಸರ್ಕಾರ ‘ಫೇಮ್ ಇಂಡಿಯಾ- 1’ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಅದರಲ್ಲೂ ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್ ಖರೀದಿ ಸಂಬಂಧ 75 ಕೋಟಿ ರೂ. ಅನುದಾನ ನೀಡಿತ್ತು. 2019ರ ಮಾರ್ಚ್ 31ರೊಳಗೆ ಅನುದಾನ ಬಳಸಿ, ಎಲೆಕ್ಟ್ರಿಕ್ ಬಸ್​ಗಳನ್ನು ಪಡೆಯಲು ಸೂಚಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಅನುದಾನ ವಾಪಸ್ ಹೋಗಿತ್ತು.
ಲಾಕ್​ಡೌನ್ ನಿಯಮ ಉಲ್ಲಂಘಿಸಿದ ವಾಹನಗಳೆಷ್ಟು?- ಪೊಲೀಸರ ವಶದಲ್ಲಿರುವ ವಾಹನಗಳ ಲೆಕ್ಕಾಚಾರ ಇಲ್ಲಿದೆ

ಬೆಂಗಳೂರಿನಲ್ಲಿ ಶೇಕಡ 70 ಕುಸಿಯಿತು ತಾಳೆ ಎಣ್ಣೆ ವ್ಯಾಪಾರ!

VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

ಲಾಕ್​ಡೌನ್ ಅವಧಿಯಲ್ಲಿ ರಕ್ತದಾನ ಶಿಬಿರ ನಡೆಸುವುದಕ್ಕೆ ಇಲ್ಲ ಅಡ್ಡಿ: ನೀವೂ ರಕ್ತದಾನ ಮಾಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 11 =
Remember me
