ಬೆಂಗಳೂರು:ನೂರಾರು ಕುಟುಂಬಗಳನ್ನು ಮನೆಯೊಳಗೆ ಒಗ್ಗೂಡಿಸಿರುವ ಲಾಕ್​ಡೌನ್​ನಿಂದ ದಾಂಪತ್ಯ ಕಲಹ ಕೂಡ ಹೆಚ್ಚಾಗಿದೆ! ಕೌಟುಂಬಿಕ ಸಮಸ್ಯೆ ಬಗೆಹರಿಸುವಲ್ಲಿ ಸಕ್ರಿಯವಾಗಿರುವ ವನಿತಾ ಸಹಾಯವಾಣಿ ಕೇಂದ್ರಕ್ಕೆ ಬರುವ ಕರೆಗಳ ಸಂಖ್ಯೆ ಕೆಲವು ದಿನಗಳಿಂದ ಹೆಚ್ಚಳವಾಗಿದ್ದು, ಬಹುತೇಕ ಪ್ರಕರಣಗಳು ಕೌಟುಂಬಿಕ ದೌರ್ಜನ್ಯಕ್ಕೆ ಸೀಮಿತವಾಗಿವೆ. ಲಾಕ್​ಡೌನ್ ಮುನ್ನ ಸಲಹಾ ಕೇಂದ್ರಕ್ಕೆ ಪ್ರತಿನಿತ್ಯ 5 ರಿಂದ 10 ಪ್ರಕರಣ ಬರುತ್ತಿತ್ತು. ಇದೀಗ ಕನಿಷ್ಠ 26 ರಿಂದ 30 ದೂರು ಬರುತ್ತಿವೆ. ಶೇ.70 ಪ್ರಕರಣ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕರೆಗಳಾಗಿವೆ. ಉಳಿದ ಕೇಸ್​ಗಳು ಪಾಸ್ ಕೊಡಿಸಿ, ಊಟ ತಂದು ಕೊಡಿ, ಮನೆಗೆ ಹೋಗಲು ವ್ಯವಸ್ಥೆ ಮಾಡಿ ಎಂಬುದಕ್ಕೆ ಸೀಮಿತವಾಗಿವೆ.
ಹಳೇ ಚಾಳಿ ಶುರು:ವಿವಾಹಿತ ಮಹಿಳೆಯೊಬ್ಬರು ಈ ಹಿಂದೆ ಪತಿಯ ದೈಹಿಕ ಕಿರುಕುಳದಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ಕಿರುಕುಳ ನಿಲ್ಲಿಸಿದ್ದ ಪತಿರಾಯ ಲಾಕ್​ಡೌನ್ ಸಂದರ್ಭದಲ್ಲಿ ಹಳೇ ಚಾಳಿ ಮುಂದುವರಿಸಿದ್ದಾನೆ. ಆತನ ಕಿರುಕುಳ ತಾಳಲಾರದೆ ಮಹಿಳೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ಸ್ಥಳೀಯ ಠಾಣೆಗೆ ಮಾಹಿತಿ ಕೊಟ್ಟು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ.
ಕೇಸ್ ನಂ.3:ಮನೆಯಿಂದಲೇ ಕೆಲಸ ಮಾಡುತ್ತಿರುವ ಪ್ರತಿಷ್ಠಿತ ಸಂಸ್ಥೆಯ ಸಾಫ್ಟ್​ವೇರ್ ಇಂಜಿನಿಯರ್ ಇತ್ತೀಚೆಗೆ ಪತ್ನಿಗೆ ದೈಹಿಕ ಹಿಂಸೆ ನೀಡುತ್ತಿದ್ದ. ಲಾಕ್​ಡೌನ್ ಹಿನ್ನೆಲೆಯಲ್ಲಿ ತವರು ಮನೆಗೂ ಹೋಗಲಾಗದೆ ಆಕೆ ಹಿಂಸೆ ಸಹಿಸಿಕೊಂಡಿದ್ದಾರೆ. ದಯವಿಟ್ಟು ಸಹಾಯ ಮಾಡಿ ಎಂದು ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆಪ್ತ ಸಮಾಲೋಚಕರು ಸ್ಥಳೀಯ ಪೊಲೀಸರ ಮೊಬೈಲ್ ನಂಬರ್ ನೀಡಿ, ದೂರು ನೀಡುವಂತೆ ಸೂಚಿಸಿದ್ದಾರೆ.
ಕೇಸ್ ನಂ.4:ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪತಿ ನನ್ನೊಂದಿಗೆ ಅನ್ಯೋನ್ಯವಾಗಿದ್ದರು. ಲಾಕ್​ಡೌನ್ ಬಳಿಕ ಕಳೆದ ಒಂದು ವಾರದಿಂದ ಸುಮ್ಮನೆ ಜಗಳ ಮಾಡುತ್ತಾ ದೈಹಿಕವಾಗಿ ಹಿಂಸಿಸುತ್ತಿದ್ದಾರೆ. ದಯವಿಟ್ಟು ಪತಿಗೆ ಬುದ್ದಿಮಾತು ಹೇಳಿ ಎಂದು ಪತ್ನಿ ಮನವಿ ಮಾಡಿಕೊಂಡಿದ್ದಳು. ಸಹಾಯವಾಣಿ ಸಿಬ್ಬಂದಿ ಪತಿಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಕೇಸ್ ನಂ.5:ಲಾಕ್​ಡೌನ್ ಬಳಿಕ ಬಾಡಿಗೆದಾರರು ಮನೆಯ ಬಾಡಿಗೆ ನೀಡಿಲ್ಲ ಎಂದು ಬೆಂಗಳೂರಿನ ವ್ಯಕ್ತಿಯೊಬ್ಬರು ಸಹಾಯವಾಣಿ ಮೊರೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಾಡಿಗೆ ಕೇಳುವುದು ಸರಿಯಲ್ಲ ಎಂದು ಆಪ್ತ ಸಮಾಲೋಚಕರು ಬುದ್ಧಿಮಾತು ಹೇಳಿದ್ದಾರೆ
ನಮ್ಮ 100ಕ್ಕೂ ಬರ್ತವೆ:‘ನಮ್ಮ 100’ ಸಹಾಯವಾಣಿಗೂ ಪ್ರತಿದಿನ ಸರಾಸರಿ 50 ರಿಂದ 60 ಕರೆಗಳು ಬರುತ್ತಿವೆ. ಇದರಲ್ಲಿ ಅಂಗಡಿ ಮುಂದೆ ಜನಜಂಗುಳಿ ಇದೆ. ಕ್ವಾರೆಂಟೈನ್​ನಲ್ಲಿರುವವರು ಹೊರ ಬರುವುದು, ಕೌಟುಂಬಿಕ ಸಮಸ್ಯೆಗಳಂತಹ ಕರೆಗಳೇ ಹೆಚ್ಚಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
6 ತಿಂಗಳ ಗರ್ಭಿಣಿ ಅಳಲು:ಖಾಸಗಿ ಕಂಪನಿಯ 39 ವರ್ಷದ ಮಹಿಳಾ ಉದ್ಯೋಗಿ ಕೆಲ ವರ್ಷದ ಹಿಂದೆ ಅನ್ಯ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಸದ್ಯ ಆಕೆ 6 ತಿಂಗಳ ಗರ್ಭಿಣಿ. ಲಾಕ್​ಡೌನ್​ನಿಂದಾಗಿ ಪತಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾನೆ. ಪ್ರತಿದಿನ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದು, ಮನೆಯಿಂದ ಹೊರಹೋಗಲೂ ಆಗದೇ ಒದ್ದಾಡುತ್ತಿದ್ದೇನೆ. ಹೇಗಾದರು ಮಾಡಿ ನನ್ನನ್ನು ಕಾಪಾಡಿ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.

ಕರೆ ಮಾಡುವ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕೌಟುಂಬಿಕ ದೌರ್ಜನ್ಯ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.| ರಾಣಿ ಶೆಟ್ಟಿಪರಿಹಾರ್ ಕೌಟುಂಬಿಕ ಸಲಹಾ ಕೇಂದ್ರದ ಉಸ್ತುವಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − two =
Remember me
