ಬೆಂಗಳೂರು:ದಾಂಪತ್ಯ ಕಲಹ ತಾರಕಕ್ಕೇರಿದ ಪರಿಣಾಮ ಸೆಕ್ಯೂರಿಟಿ ಗಾರ್ಡ್ ಒಬ್ಬ ತನ್ನ ಪತ್ನಿಗೆ ಗುಂಡಿಟ್ಟು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಬೆಳಗ್ಗೆ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ.
ಮೃತಳನ್ನು ಸುಮಿತ್ರಾ ಎಂದು ಗುರುತಿಸಲಾಗಿದೆ. ಆಕೆಯ ಪತಿ ಎಟಿಎಂ ಸೆಕ್ಯೂರಿಟಿ ಗಾರ್ಡ್ ಕಾಳಪ್ಪ ಆರೋಪಿ. ಆತ್ಮಹತ್ಯೆಗೆ ಯತ್ನಿಸಿದ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಎಲ್ಲರಿಗೂ ವಿವಾಹವಾಗಿದೆ. ಎಟಿಎಂ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕಾಳಪ್ಪ ಸಿಂಗಲ್ ಬ್ಯಾರಲ್ ಗನ್​ ಮನೆಗೆ ತಂದಿಟ್ಟುಕೊಳ್ಳುತ್ತಿದ್ದ. ಕಳೆದ ಐದು ವರ್ಷಗಳಿಂದ ಬಸವೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು.
ಇದನ್ನೂ ಓದಿ:ಬಿಹಾರಕ್ಕೆ ಹೊಸ ಸರ್ಕಾರ: ನಿತೀಶ್ ಸಿಎಂ, ತಾರಕಿಶೋರ್, ರೇಣುದೇವಿ ಡಿಸಿಎಂ
ನಿನ್ನೆ ಸಂಜೆ ಕೂಡ ದಂಪತಿ ನಡುವೆ ಜಗಳವಾಗಿದ್ದು, ಸುಮಿತ್ರಾ ಮಗಳ ಮನೆಗೆ ಹೋಗಿದ್ದರು. ಬೆಳಗ್ಗೆ ತಿಂಡಿ ಏನಾದರೂ ಮಾಡಿ ತಿಂದರೋ ಇಲ್ಲವೋ ಎಂದು ನೋಡಲು ಬಂದಿದ್ದ ಸುಮಿತ್ರಾ ಜತೆಗೆ ಮತ್ತೆ ಜಗಳವಾಗಿತ್ತು. ಜಗಳ ಅತಿರೇಕಕ್ಕೆ ಹೋದಾಗ ಸಿಂಗಲ್ ಬ್ಯಾರಲ್​ ಗನ್​​ನಿಂದಲೇ ಶೂಟ್ ಮಾಡಿದ್ದ. ಬಳಿಕ ತಾನೂ ಗುಂಡುಹೊಡೆದುಕೊಂಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಈಗ ತಾನೇ ಬಿಜೆಪಿಗೆ ಎಂಟ್ರಿ ಕೊಟ್ಟಿದ್ದೇವೆ… ಅದೆಲ್ಲಾ ಎಲ್ಲಿ ನಮಗೆ ಹೇಳ್ತಾರೆ ! : ಸಹಕಾರಿ ಸಚಿವ ಸೋಮಶೇಖರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seventeen =
Remember me
