ಬೆಂಗಳೂರು:ನತದೃಷ್ಟ ಮಗು ಹುಟ್ಟುವಾಗಲೇ ಯಾರಿಗೂ ಬೇಡವಾಗಿತ್ತು. ಕಾರಣ ಮದುವೆಯಾಗುವ ಮುನ್ನವೇ ಹುಟ್ಟಿದ್ದಾಗಿತ್ತು. ಕೊನೆಗೆ ಮಕ್ಕಳಿಲ್ಲದವರ ಮಡಿಲು ಸೇರಿದರೂ ಅಂಗವಿಕಲತೆ ಅದಕ್ಕೆ ಶಾಪವಾಗಿತ್ತು. ಕೊನೆಗೆ ತನ್ನವರ ಕೈಯಿಂದಲೇ ಮಣ್ಣು ಸೇರಿದೆ.
ಇಂಥದ್ದೊಂದು ದಾರುಣ ಘಟನೆಗೆ ಸಾಕ್ಷಿಯಾಗಿರುವುದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ. ಇಲ್ಲಿನ ಮಹಿಳೆಗೆ ಮದುವೆಯಾಗುವ ಮುನ್ನವೇ ಮಗು ಹುಟ್ಟಿತ್ತು. ಲೋಕಾಪವಾದಕ್ಕೆ ಹೆದರಿ ಮಗುವನ್ನು ಏನು ಮಾಡಬೇಕು ಎಂದು ಚಿಂತೆಯಲ್ಲಿದ್ದರು.
ಇದನ್ನೂ ಓದಿ;ಕಬಿನಿ ಕಾಡಿನಲ್ಲಿ ಕಾಣಿಸಿಕೊಂಡಿದೆ ಕರಿ ಚಿರತೆ…! ಅತ್ಯಪರೂಪದ ವಿದ್ಯಮಾನ
ಕೊನೆಗೆ ಮಗುವಿಗೆ ನಕಲಿ ದಾಖಲೆ ಸೃಷ್ಟಿಸಿ ಹುಬ್ಬಳ್ಳಿಯ ಸುವರ್ಣಲತಾ ಎಂಬುವರಿಗೆ ದತ್ತು ನೀಡಿದ್ದರು. ಬದಲಿಗೆ ಎರಡು ಲಕ್ಷ ರೂ. ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದಾಗಿ ಮೂರು ವರ್ಷಗಳ ಬಳಿಕ ಮಗುವಿಗೆ ಅಂಗವೈಕಲ್ಯವಿರುವುದು ದತ್ತು ಪಡೆದ ಪೋಷಕರಿಗೆ ಗೊತ್ತಾಗಿದೆ. ಹೀಗಾಗಿ ಮಗುವನ್ನು ತಮಗೆ ನೀಡಿದವರಿಗೆ ಮರಳಿಸಿದ್ದಾರೆ. ಕೊಟ್ಟ ದುಡ್ಡನ್ನು ಹಿಂಪಡೆದಿದ್ದಾರೆ.
ಇದನ್ನೂ ಓದಿ;ಅಮಿತಾಬ್​ ಬಚ್ಚನ್​ ಮನೆಯ 43 ವರ್ಷಗಳ ಇತಿಹಾಸ ನೆಲಸಮ…!
ಮಗುವನ್ನು ಚಿಕ್ಕೋಡಿಯ ವೈದ್ಯ ಮಾರುತಿ ಮುಸಾಳೆ ಮಗುವಿನ ತಾತ ರಾಮು ಚೌಗಲೆ ಎಂಬುವರು ಕೊಂದು, ಅಂತ್ಯ ಸಮಸ್ಕಾರ ನೆರವೇರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಶೋಧ ನಡೆಸಿದ್ದಾರೆ.
ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 4 =
Remember me
