ಬೆಂಗಳೂರು:ಕರೊನಾ ಸಂಕಷ್ಟದ ನಡುವೆ ಜೀವನವೇ ನೆಗೆಟೆವಿಟಿ ಆಗರ ಎನ್ನುವಂತಾಗಿಬಿಟ್ಟಿದೆ. ಎಲ್ಲಿ ಕೇಳಿದರೂ ಸಾವು ನೋವಿನ ಸುದ್ದಿಯೇ. ಹೀಗಿರುವಾಗ ಧನಾತ್ಮಕ ಭಾವನೆಯನ್ನು ನಮ್ಮೊಳಗೆ ನಾವೇ ತುಂಬಿಕೊಳ್ಳುವ ಅವಶ್ಯಕತೆ ಇದೆ. ಅದಕ್ಕೆಂದು ಈ ಸಣ್ಣ ಕುಟುಂಬದ ಪರಿಚಯ ನಿಮಗಾಗಿ.
ಮೇಲಿರುವ ಫೋಟೋದಲ್ಲಿ ಹೆಚ್ಚು ವಯಸ್ಸಾದವರಂತೆ ಕಾಣುತ್ತಿದ್ದಾರಲ್ಲಾ, ಅವರ ಹೆಸರು ಸುಭದ್ರಮ್ಮ. ಅವರಿಗೆ ಈಗ 94 ವರ್ಷ. ಅಲ್ಲೇ ಮೇಲೆ ಕುಳಿತಿರುವುದು ಅವರ ಮಗಳ ಸರೋಜಮ್ಮ. ಸರೋಜಮ್ಮನಿಗೆ ಈಗ 74 ವರ್ಷ ವಯಸ್ಸು. ಅಲ್ಲಿ ಮಗುವನ್ನು ಎತ್ತಿಕೊಂಡು ಕುಳಿತಿರುವುದು ಸರೋಜಮ್ಮನ ಮಗಳು ವಿಜಯ ಶಂಕರ. ಅವರ ವಯಸ್ಸು 52 ವರ್ಷ. ಫೋಟೋದಲ್ಲಿರುವ ಇನ್ನೊಬ್ಬರು ಮೀನಾಕ್ಷಿ ಪವನ್ ಜೋಯಸ್. ಅವರದ್ದು 26ರ ಹರೆಯ. ಮೀನಾಕ್ಷಿ ಅವರ ಮಗ ವೇದಾಂಗ ಜೋಯಿಸ್​ ಅಜ್ಜಿಯ ಮಡಿಲಲ್ಲಿದ್ದಾನೆ. ವೇದಾಂಗ ಜನಿಸಿ 10 ತಿಂಗಳಾಗಿದೆ.
ಈ ಫೋಟೋದಲ್ಲಿ ವೇದಾಂಗನಿಗೆ ಅಜ್ಜಿ ವಿಜಯ ಶಂಕರ ಮತ್ತು ವಿಜಯರ ಅಜ್ಜಿ ಸುಭದ್ರಮ್ಮನೂ ಇದ್ದಾರೆ. ಒಟ್ಟು ಐದು ತಲೆಮಾರಿರುವ ಈ ಫೋಟೋ ನೋಡಿದರೆ ಕುಟುಂಬದ ಮೌಲ್ಯ ನಿಮಗೆ ಅರ್ಥವಾಗಬಹುದು. 1920ರ ದಶಕದಲ್ಲಿ ಹುಟ್ಟಿದ ಮಗುವಿನ ಜತೆಗೆ 2020ರ ದಶಕದಲ್ಲಿ ಹುಟ್ಟಿದ ಮಗು ಇಲ್ಲಿದೆ.
ನಾಯಿಯನ್ನು ನಾಯಿ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದು ಹಲ್ಲೆ ಮಾಡಿದ ಮಾಲೀಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
