ಬೆಂಗಳೂರು:ಪತಿಯಾದವನು ಪತ್ನಿಗೆ ಉನ್ನತ ವ್ಯಾಸಂಗ ಮಾಡು ಎನ್ನುವುದು, ಮಗು ಹೊಂದುವ ಕುರಿತು ಮಾತನಾಡುವುದನ್ನು ‘ಕ್ರೌರ್ಯ’ ಎನ್ನಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇದೇ ಕಾರಣಗಳನ್ನು ಮುಂದಿಟ್ಟುಕೊಂಡು ಮಹಿಳೆಯೊಬ್ಬರು ಪತಿ ಹಾಗೂ ಅತ್ತೆ ವಿರುದ್ಧ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಪಡಿಸಿದೆ.
ವರದಕ್ಷಿಣೆ ಕಿರುಕುಳ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದು ಕೋರಿ ಬೆಂಗಳೂರಿನ ವೈದ್ಯ ಮತ್ತವರ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಹೇಳಿದ್ದೇನು?:ವಿದ್ಯಾವಂತರಾಗಿರುವ ದಂಪತಿ ಮದುವೆಗೂ ಮೊದಲೇ ಭವಿಷ್ಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಆದ್ದರಿಂದ, ಪತ್ನಿಗೆ ಶಿಕ್ಷಣ ಮುಂದುವರಿಸು, ಕೆಲಸಕ್ಕೆ ಸೇರಿಕೋ ಎಂದು ಪತಿ ಹೇಳಿರುವುದು ಕೌರ್ಯವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮೂರು ವರ್ಷ ಮಗು ಹೊಂದುವುದು ಬೇಡ. ಆನಂತರ ಮಗು ಮಾಡಿಕೊಳ್ಳೋಣವೆಂದು ಪತಿ ಹೇಳಿದ್ದರು. ಆದರೆ, ಪತಿಯ ಕುಟುಂಬದವರು ಮಗುವಿನ ವಿಚಾರಕ್ಕೆ ನನ್ನನ್ನು ಪೀಡಿಸುತ್ತಿದ್ದರು. ಕುಟುಂಬದ ದೃಷ್ಟಿಯಿಂದ ಯೋಜನೆ ಹಾಕಿಕೊಂಡು ಯಾವಾಗ ಮಗು ಹೊಂದಬೇಕು ಎಂದು ಪತ್ನಿಯೊಂದಿಗೆ ಮಾತನಾಡಿರುವುದು ಕಿರುಕುಳ ಅಥವಾ ಕ್ರೌರ್ಯ ಎನ್ನಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ತನಗೆ ತಮಿಳು ಭಾಷೆ ಕಲಿಯುವಂತೆ ಒತ್ತಾಯಿಸುತ್ತಿದ್ದರು, ಆತನ ಸಹೋದರರ ಜತೆ ಶಟಲ್ ಹಾಗೂ ಕಾರ್ಡ್ಸ್ ಆಡುವಂತೆ ಹೇಳುತ್ತಿದ್ದರು ಎಂದು ಪತ್ನಿ ಆರೋಪಿಸಿದ್ದಾರೆ. ಆದರೆ, ಕುಟುಂಬದಲ್ಲಿ ಪರಿಣಾಮಕಾರಿ ಸಂವಹನಕ್ಕೆ ಎಲ್ಲರಿಗೂ ತಿಳಿದಿರುವ ತಮಿಳು ಭಾಷೆ ಕಲಿ ಎಂದು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
ಪ್ರಕರಣವೇನು?:ಮದುವೆಯ ಬಳಿಕ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. ಪತಿ ವಿದ್ಯಾಭ್ಯಾಸ ಮುಂದುವರಿಸಿ ಸೂಕ್ತ ಉದ್ಯೋಗ ಹುಡುಕಿಕೋ, ಅದರಿಂದ ಕುಟುಂಬ ನಿರ್ವಹಣೆಗೆ ಸಹಾಯವಾಗಲಿದೆ ಎಂದು ಒತ್ತಾಯಿಸುತ್ತಿದ್ದರು. ಜತೆಗೆ, ಮಗು ಮಾಡಿಕೊಳ್ಳುವ ವಿಚಾರವಾಗಿ ಮಾತನಾಡುತ್ತಿದ್ದ ಪತಿ, ತಮಿಳು ಭಾಷೆ ಕಲಿಯುವಂತೆ ಬಲವಂತ ಮಾಡುತ್ತಿದ್ದರು ಎಂದು ಆರೋಪಿಸಿದ್ದ ಪತ್ನಿ ಪತಿ ಮತ್ತವರ ತಾಯಿಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಸೆಷನ್ಸ್ ನ್ಯಾಯಾಲಯವೂ ಇದನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೊಚ್ಚಿ:ಪತ್ನಿಯನ್ನು ಇತರೆ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮವಾಗಿದೆ. ಪತಿಯ ಅಂತಹ ವರ್ತನೆಯನ್ನು ಪತ್ನಿಯು ಸಹಿಸಿಕೊಳ್ಳಬೇಕಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಮಾನಸಿಕ ಕ್ರೌರ್ಯದ ನೆಲೆಗಟ್ಟಿನಲ್ಲಿ ಮಹಿಳೆಯೊಬ್ಬರು ಕೌಟುಂಬಿಕ ನ್ಯಾಯಾಲಯಕ್ಕೆ 13 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿ ವಿಚ್ಛೇದನ ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ಪತಿ ಮೇಲ್ಮನವಿ ಸಲ್ಲಿಸಿದ್ದರು.
‘2009ರಲ್ಲಿ ವಿವಾಹವಾದ ನಾವು ಒಂದು ತಿಂಗಳಷ್ಟೇ ಜತೆಗಿದ್ದೆವು. ದೈಹಿಕವಾಗಿ ಆಕರ್ಷಕವಾಗಿಲ್ಲವೆಂದು ಪತಿ ಸದಾ ಹೀಯಾಳಿಸುತ್ತಿದ್ದರು. ನಾನೊಂಥರ ಅಸಹ್ಯಕರ ವಸ್ತುವಾಗಿದ್ದೆ. ಇತರೆ ಮಹಿಳಾ ಸ್ನೇಹಿತೆಯರಂತೆ ಆಕರ್ಷಕವಾಗಿಲ್ಲವೆಂದು ನಿಂದಿಸುತ್ತಿದ್ದರು’ ಎಂದು ಮಹಿಳೆ ಅರ್ಜಿಯಲ್ಲಿ ಹೇಳಿದ್ದರು. ಪತಿಯ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್, ‘ಸಾಮಾಜಿಕ ಪರಿಕಲ್ಪನೆಗಳು ಮತ್ತು ಜೀವನಮಟ್ಟಗಳ ಪ್ರಗತಿಗೆ ಅನುಗುಣವಾಗಿ ಕ್ರೌರ್ಯದ ಸಮಗ್ರ ವ್ಯಾಖ್ಯಾನ ನೀಡುವುದು ಕಷ್ಟ. ನಿರಂತರವಾಗಿ ಕೆಟ್ಟದಾಗಿ ನಡೆಸಿಕೊಳ್ಳುವುದು, ಉದಾಸೀನತೆ ಮುಂತಾದ ಅಂಶಗಳು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತವೆ. ದೈಹಿಕ ಕ್ರೌರ್ಯದಲ್ಲಿದ್ದಂತೆ ಮಾನಸಿಕ ಕ್ರೌರ್ಯದಲ್ಲಿ ನೇರ ಸಾಕ್ಷ್ಯಗಳಿರುವುದಿಲ್ಲ. ಮಾನಸಿಕ ಕ್ರೌರ್ಯವು ಮೌಖಿಕ ನಿಂದನೆ, ಕೊಳಕು ಭಾಷೆ ಮೂಲಕ ಅವಮಾನಿಸುವುದನ್ನು ಒಳಗೊಂಡಿದೆ. ಇದು ಇತರ ವ್ಯಕ್ತಿಯ ಶಾಂತಿಯ ಭಂಗಕ್ಕೆ ಕಾರಣವಾಗುತ್ತದೆ’ ಎಂದು ಹೇಳಿದೆ.
ಅಜಿತ್ ದೋವಲ್​ಗೆ ಭದ್ರತಾ ವೈಫಲ್ಯ, ಎನ್​ಎಸ್​​ಎ ಸೆಕ್ಯುರಿಟಿಯಿಂದ ಮೂವರು ಕಮಾಂಡೋಗಳ ಎತ್ತಂಗಡಿ..

ಗ್ರಾಮ ಒನ್​ಗೆ ಇನ್ನಷ್ಟು ಸೇವೆಗಳ ಸೇರ್ಪಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
