ಬಾಗಲಕೋಟೆ:ಡಿ.16 ರಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎಚ್​​ಡಿಕೆ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಯೊಬ್ಬ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ‌ ಮಾಡಿದ್ದಾರೆ. ಈ ಕುರಿತಾಗದ ವಿಡಿಯೋ ಶೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ ರಾಜು ಶೆಲ್ಲಿಕೇರಿ, ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ.  ಎಚ್.ಡಿಕೆ ಅವರ ಅಪ್ಪಟ ಅಭಿಮಾನಿಯಾಗಿರುವ ರಾಜು 15 ವರ್ಷಗಳ ಹಿಂದೆ ಎದೆಯ ಮೇಲೆ ಎಚ್​​ಡಿಕೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಮಧ್ಯರಾತ್ರಿ 12ಗಂಟೆಗೆ ಎಚ್.ಡಿ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಿಸಲಾಗಿದೆ. ಎದೆಯ ಮೇಲೆ ಹಾಕಿಸಿಕೊಂಡಿದ್ದ ಎಚ್​​ಡಿಕೆ ಹಚ್ಚೆಗೆ ಎಳೆನೀರು ಅಭಿಷೇಕ ಮಾಡಿ, ಕೇಕ್ ತಿನ್ನಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
ನನ್ನ ಜನ್ಮದಿನವಾದ ಡಿಸೆಂಬರ್ 16ರಂದು, ಅಂದರೆ; ನಾಳೆ ನಾನು ಬೆಂಗಳೂರು ನಗರದಲ್ಲಿ ಲಭ್ಯವಿರುವುದಿಲ್ಲ. ಕಾರ್ಯಕರ್ತರಾದಿಯಾಗಿ ನನ್ನ ಮೇಲೆ ಪ್ರೀತಿ, ವಾತ್ಸಲ್ಯ ಇರಿಸಿರುವ ಪ್ರತಿಯೊಬ್ಬರೂ ನನ್ನ ವೈಯಕ್ತಿಕ ಭೇಟಿಗೆ ಪ್ರಯತ್ನಿಸದೇ ತಾವು ಇದ್ದಲ್ಲಿಂದಲೇ ಶುಭ ಕೋರಬೇಕಾಗಿ ನಿಮ್ಮೆಲ್ಲರಲ್ಲೂ ವಿನಂತಿ ಮಾಡಿಕೊಳ್ಳುತ್ತೇನೆ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)December 15, 2023

ರಾಜು ಶೆಲ್ಲಿಕೇರಿ ವಿದ್ಯಾಗಿರಿಯ ಜ್ಯೋತಿ ಕಾಲನಿ ಬಳಿ ಪಾನ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. 15 ವರ್ಷಗಳಿಂದ ಎಚ್.ಡಿಕೆ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸ್ತಾ ಬಂದಿರುವ ಅಭಿಮಾನಿ, ಈ ಬಾರಿ ಎದೆಯ‌ ಮೇಲಿನ ಅಚ್ಚೆಗೆ ಎಳೆನೀರು ಅಭಿಷೇಕ, ಸಿಹಿ (ಕೇಕ್) ಹಂಚಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 − four =
Remember me
