ಬೆಂಗಳೂರು:ಯುವಕರಲ್ಲಿ ಫ್ಯಾನ್ಸಿ ನಂಬರ್ ಟ್ರೆಂಡ್ ಹೆಚ್ಚುತ್ತಿದೆ. ಹೊಸ ಹೊಸ ವಾಹನ ಖರೀದಿಸುವವರು ಹುಬ್ಬೇರಿಸುವಷ್ಟು ದುಡ್ಡು ಕೊಟ್ಟು ಫ್ಯಾನ್ಸಿ ನಂಬರ್‌ಗಳನ್ನು ಪಡೆದುಕೊಳ್ಳುತ್ತಾರೆ. ಸಾರಿಗೆ ಇಲಾಖೆಯಿಂದ ಬೆಂಗಳೂರಿನ ಯಶವಂತಪುರ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ಕೆಎ-04/ಎನ್‌ಡಿ ಮುಂಗಡ ನೋಂದಣಿ ಶ್ರೇಣಿ ಪ್ರಾರಂಭಿಸಲು ಆಕರ್ಷಕ ನೋಂದಣಿ ಸಂಖ್ಯೆಗಳ ಸಾರ್ವಜನಿಕ ಬಹಿರಂಗ ಹರಾಜಿನಲ್ಲಿ ಒಟ್ಟು 21.55 ಲಕ್ಷ ರೂ. ರಾಜಸ್ವ ಸಂಗ್ರಹಿಸಲಾಗಿದೆ!ಈ ಬಹಿರಂಗ ಹರಾಜಿನಲ್ಲಿ 13 ನೋಂದಣಿ ಸಂಖ್ಯೆಗಳನ್ನು ಹರಾಜು ಮಾಡಲಾಗಿದ್ದು, ಪ್ರತಿ ನೋಂದಣಿ ಸಂಖ್ಯೆಗೆ ಅರ್ಜಿ ಶುಲ್ಕ ರೂ. 75 ಸಾವಿರ ರೂ. ಸೇರಿದಂತೆ ಕೆಎ-04/ಎನ್‌ಡಿ-0001 ಸಂಖ್ಯೆಗೆ 6,75,000 ರೂ., ಕೆಎ-04/ಎನ್‌ಡಿ 9999 ಸಂಖ್ಯೆಗೆ 3 ಲಕ್ಷ ರೂ., ಕೆಎ-04/ಎನ್‌ಡಿ-0005 ಸಂಖ್ಯೆಗೆ 1.90 ಲಕ್ಷ ರೂ., ಕೆಎ-04/ಎನ್‌ಡಿ0009 ಸಂಖ್ಯೆಗೆ 1.35 ಲಕ್ಷ ರೂ., ಕೆಎ-04/ಎನ್‌ಡಿ/ 1234 ಸಂಖ್ಯೆಗೆ 1.05 ಲಕ್ಷ ರೂ., ಕೆಎ-04/ಎನ್‌ಡಿ-1111ಸಂಖ್ಯೆಗೆ 95,500 ರೂ., ಕೆಎ-04/ಎನ್‌ಡಿ/0006 ಸಂಖ್ಯೆಗೆ 1 ಲಕ್ಷ ರೂ., ಕೆಎ-04/ಎನ್‌ಡಿ/6666 ಸಂಖ್ಯೆಗೆ 1 ಲಕ್ಷ ರೂ., ಕೆಎ-04/ಎನ್‌ಡಿ/0007 ಸಂಖ್ಯೆಗೆ 1.05 ಲಕ್ಷ ರೂ., ಕೆಎ04/ಎನ್‌ಡಿ/8888 ಸಂಖ್ಯೆಗೆ 1 ಲಕ್ಷ ರೂ., ಕೆಎ-04/ಎನ್‌ಡಿ/4888 ಸಂಖ್ಯೆಗೆ 85 ಸಾವಿರ ರೂ., ಕೆಎ-04/ಎನ್‌ಡಿ/4599 ಸಂಖ್ಯೆಗೆ 85 ಸಾವಿರ ರೂ., ಮತ್ತು ಕೆಎ-04/ಎನ್‌ಡಿ/0777 ಸಂಖ್ಯೆಗೆ 80 ಸಾವಿರ ರೂ.ಗಳ ಬಿಡ್ ಮೊತ್ತಕ್ಕೆ ಹರಾಜು ಮಾಡಲಾಗಿದೆ ಎಂದು ಸಾರಿಗೆ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 7 =
Remember me
