ಬೆಂಗಳೂರು:ಸ್ಯಾಂಡಲ್‌ವುಡ್‌ ನಟ ದರ್ಶನ್ ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಬೇಸಿಗೆ ಶುರುವಾಗಿದೆ. ಬೇಸಿಗೆಯಲ್ಲಿ ಮೂಖ ಪ್ರಾಣಿಗಳಿಗೆ ಕುಡಿಯಲು ನೀರು ಸಿಗೋದೇ ಇಲ್ಲ. ನೀರು ಇಡಿ ಎಂದು ಮನವಿ ಮಾಡಿದ್ದರು. ಡಿ ಬಾಸ್​​ ಮನವಿ ಮಾಡುತ್ತಿದ್ದಂತೆ ಫ್ಯಾನ್ಸ್​​ ಕೂಡಾ ದರ್ಶನ್ ಹೇಳಿರೋ ಮಾತನ್ನ ಪಾಲಿಸುತ್ತಿದ್ದಾರೆ.
ದರ್ಶನ್ ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ, ಬೇಸಿಗೆಯಲ್ಲಿ ನೀರು ಕಡಿಮೆ ಆಗುತ್ತದೆ. ಜನರಿಗೂ ಕುಡಿಯಲು ನೀರು ಇರೋದಿಲ್ಲ. ಆದರೆ ನೀರು ಬೇಕು ಅಂತ ಮನುಷ್ಯರು ಬಾಯಿ ಬಿಟ್ಟು ಕೇಳಬಹುದು. ಆದರೆ ಪ್ರಾಣಿಗಳ ಸ್ಥಿತಿ ಏನು ಹೇಳಿ? ಅದಕ್ಕೇನೆ ಈ ಒಂದು ಮನವಿ ಅಂತಲೇ ದರ್ಶನ್ ಕೇಳಿಕೊಂಡಿದ್ದರು. ಈ ಕಾರಣಕ್ಕೇನೆ ಬೇಸಿಗೆ ಬಂದ್ರೆ ಪ್ರಾಣಿ-ಪಕ್ಷಿಗಳು ಕುಡಿಯಲು ನೀರು ಸಿಗದೇ ಪರದಾಡುತ್ತವೆ. ಆ ಕಾರಣಕ್ಕೇನೆ ಮನೆ ಮುಂದೆ ಮತ್ತು ಮನೆ ಮೇಲೆ ಕುಡಿಯಲು ನೀರು ಇಡಿ ಅಂತಲೇ ದರ್ಶನ್ ಕೇಳಿಕೊಂಡಿದ್ದಾರೆ.
ಬಾಸ್ ಹೇಳವ್ರೆ ಅಂದ್ರೆ ಮಾಡಲೇಬೇಕು ❤️🙏🏻#BossOfSandalwood#Dboss#DevilTheHero@dasadarshan👑pic.twitter.com/I2rXEXLmGt
— ಆಪದ್ಬಾಂಧವ (@DbossD56)March 16, 2024

ದರ್ಶನ್ ಹೇಳಿರೋ ಮಾತನ್ನ ಪಾಲಿಸುತ್ತಿರುವ ಫ್ಯಾನ್ಸ್​ ಬೇಸಿಗೆಯಲ್ಲಿ ಮೂಖ ಪ್ರಾಣಿಗಳಿಗೆ ಕುಡಿಯಲು ನೀರು ಸಿಗೋದೇ ಇಲ್ಲ. ಆ ಒಂದು ವ್ಯವಸ್ಥೆಯನ್ನ ದರ್ಶನ್ ಅಭಿಮಾನಿಗಳು ಮಾಡುತ್ತಿದ್ದಾರೆ.
ದರ್ಶನ್ ಫ್ಯಾನ್ಸ್ ಮನೆ ಮೇಲೆ-ಬೀದಿ ಬದಿಯಲ್ಲಿ, ಮರ-ಗಿಡಗಳ ಬಳಿ ಹೀಗೆ ಕುಡಿಯೋ ನೀರು ಇಡುವ ವ್ಯವಸ್ಥೆ ಮಾಡಿದ್ದಾರೆ. ಮನೆಗಳಲ್ಲಿ ಸಿಗೋ ತೆಂಗಿನ ಚಿಪ್ಪಿಗೆ ಬಿಳಿ ಬಣ್ಣ ಹಚ್ಚಿ ಅವುಗಳನ್ನ ನೀರಿನ ಬಟ್ಟಲು ರೀತಿ ತಯಾರು ಮಾಡಿದ್ದಾರೆ. ಅವುಗಳನ್ನ ಮರಗಳಿಗೆ ಕಟ್ಟಿ ನೀರು ಹಾಕಿದ್ದಾರೆ. ರಸ್ತೆ ಪಕ್ಕದಲ್ಲಿ ಹೂವಿನ ಪಾಟ್ ಇಟ್ಟು ನೀರು ಹಾಕಿದ್ದಾರೆ. ಈ ರೀತಿ ಎಲ್ಲ ಕಡೆಗೆ ನೀರು ಇಡೋದ್ರಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿದಂತೆ  ಮಾಡಿದ್ದಾರೆ. ಈ ವಿಡಿಯೋ ಶೇರ್ ಆಗಿದೆ.
ಪ್ರಾಣಿಗಳ ಬಗ್ಗೆ ದರ್ಶನ್ ತುಂಬಾನೆ ಕಾಳಜಿ ಹೊಂದಿದ್ದಾರೆ. ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿ ಎಲ್ಲ ರೀತಿಯ ಪ್ರಾಣಿ-ಪಕ್ಷಿಗಳನ್ನ ಸಾಕಿಕೊಂಡಿದ್ದಾರೆ.
58ನೇ ವಯಸ್ಸಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಪಂಜಾಬಿ ಗಾಯಕನ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 2 =
Remember me
