ಬೆಂಗಳೂರು:ಐತಿಹಾಸಿಕ ಸ್ಥಳ, ದೇವಸ್ಥಾನ ಭೇಟಿಗೆ ಸೀಮಿತವಾಗಿದ್ದ ಮಕ್ಕಳ ಪ್ರವಾಸ ‘ಕೃಷಿ ಪ್ರವಾಸ’ವಾಗಿ ಮಾರ್ಪಾಟುಗೊಳ್ಳಲಿದೆ. ಮಕ್ಕಳಿಗೆ ಆಹಾರ ಉತ್ಪನ್ನಗಳ ಬಗ್ಗೆ ಅರಿವು ಇಲ್ಲದಿರುವುದರಿಂದ ಬಾಲ್ಯಾವಸ್ಥೆಯಲ್ಲೇ ಕೃಷಿ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕೃಷಿ ವಿವಿ ಸಹಯೋಗದೊಂದಿಗೆ ‘ಕೃಷಿ ಪ್ರವಾಸ’ ಯೋಜನೆ ರೂಪಿಸಲು ಚಿಂತಿಸಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಬಗ್ಗೆಯೂ ಆಲೋಚಿಸಿದೆ. ವಾರಕ್ಕೊಮ್ಮೆ ಕೃಷಿ ವಿವಿಗೆ ತೆರಳಿ ಅಲ್ಲಿ ಬೆಳೆದಿರುವ ಬೆಳೆಯ ತಳಿ, ಬೆಳೆಯುವ ವಿಧಾನದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ನಗರ ಪ್ರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಕೃಷಿ ಬಗ್ಗೆ ಎಳ್ಳಷ್ಟು ಅರಿವು ಇಲ್ಲದಿರುವುದರಿಂದ ಆಹಾರ ಉತ್ಪನ್ನಗಳ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬಳಿ ಪ್ರಸ್ತಾಪಿಸಿದ್ದಾರೆ.
ಮುಂದಿನ ವರ್ಷದಿಂದಲೇ ಇದನ್ನು ಜಾರಿ ಮಾಡುವ ಬಗ್ಗೆ ಆಲೋಚಿಸುತ್ತೇನೆ ಎಂದು ತಿಳಿಸುವ ಮೂಲಕ ಫೇಸ್​ಬುಕ್​ನಲ್ಲಿ ಸಾರ್ವಜನಿಕ ಅಭಿಪ್ರಾಯ ಕೇಳಿದ್ದಾರೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಆರಂಭ

ಆರ್​ಟಿಇ ಅಡಿ ಎಲ್​.ಕೆ.ಜಿ ಹಾಗೂ 1ನೇ ತರಗತಿಗೆ ಪ್ರವೇಶ ಬಯಸುವ ಮಗುವಿನ ವಯೋಮಿತಿ ನಿಗದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + fourteen =
Remember me
