ಮಡಿವಾಳ:ಮೊದಲಿನಿಂದಲೂ ಮಾಲೂರು ತಾಲೂಕಿನ ಹೂವು ಹಾಗೂ ತರಕಾರಿ ಬೆಳೆಗೆ ಪ್ರಸಿದ್ಧವಾಗಿದ್ದು, ಇಲ್ಲಿನ ಸೇವಂತಿ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದ್ರೆ, ಈ ಬಾರಿ ಬೆಲೆ ಹಾಗೂ ಬೇಡಿಕೆಯಲ್ಲಿ ಭಾರಿ ಕುಸಿತಗೊಂಡ ಕಾರಣ ಬೆಳೆ ಬೆಳೆದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ಇದನ್ನೂ ಓದಿ:ಶುಚಿ ಕಿಟ್ ಗುಣಮಟ್ಟಕ್ಕೆ ಸಿಎಂ ತೀವ್ರ ಅಸಮಾಧಾನ, ಹೊಸ ಟೆಂಡರ್‌ಗೆ ಅನುಮತಿ
ತಾವು ಹಾಕಿದ ಬಂಡವಾಳ ವಾಪಸ್ ಬಾರದ ಹಿನ್ನಲೆ ಕೆಲ ರೈತರು ತಮ್ಮ ಜಮೀನಿನಲ್ಲಿ ಸೇವಂತಿಗೆಯನ್ನು ಕಿತ್ತು ಹಾಕುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಅಂತಹದ್ದೇ ಮತ್ತೊಂದು ಘಟನೆ ತಾಲೂಕಿನ ಚೊಕ್ಕಂಡಹಳ್ಳಿಯಲ್ಲಿ ಶನಿವಾರ (ಸೆ.30) ನಡೆದಿದೆ.
ಚೊಕ್ಕಂಡಹಳ್ಳಿಯ ರೈತ ನಾಗೇಶ್ ತಮ್ಮ 5 ಎಕರೆ ಜಮೀನಿನಲ್ಲಿ ಬೆಳೆದ ಸೇವಂತಿ ಹೂವಿಗೆ ಬೇಡಿಕೆ ಹಾಗೂ ಬೆಲೆ ಸಿಗದ ಕಾರಣದಿಂದಾಗಿ ಮನನೊಂದು ಟ್ರ್ಯಾಕ್ಟರ್ ರೂಟರ್ ಹೊಡೆದು ನಾಶ ಮಾಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸೇವಂತಿ ಬೆಳೆದಿದ್ದರು.
ಇದನ್ನೂ ಓದಿ:ಕಾವೇರಿ ಸಮಸ್ಯೆ ಬಗೆಹರಿಸಲು ಸೌತ್ ಆಫ್ರಿಕಾ ಕಾನೂನನ್ನು ಇಲ್ಲಿ ತರಬೇಕು: ವೀರಪ್ಪ ಮೊಯ್ಲಿ
ಹೂವು ಬಿಡಿಸಿ ವಾರುಕಟ್ಟೆಗೆ ಹಾಕಿದರೂ ಕೂಲಿಕಾರರಿಗೆ ಕೂಲಿ ಕೊಡಲೂ ಹಣ ಸಿಗುವುದಿಲ್ಲ ಎಂಬ ಸಂಗತಿ ಅರಿತ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಒಟಿಟಿಗೆ ಪ್ರವೇಶಿಸಿತು ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್​ ಶೆಟ್ಟಿ ಮಿಸ್ಟರ್​ ಪೋಲಿಶೆಟ್ಟಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
