ಬಾಗಲಕೋಟೆ:ಕೆಲವರು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಸಲುವಾಗಿ ವಿಶೇಷ ಅಥವಾ ವಿಚಿತ್ರವಾಗಿ ಪ್ರತಿಭಟನೆ ಮಾಡುತ್ತಾರೆ. ಇನ್ನು ಕೆಲವೆಡೆ ಪ್ರತಿಭಟನೆಯಲ್ಲಿ ಕೆಲವರು ವಿಚಿತ್ರವಾಗಿ ವರ್ತಿಸುತ್ತಾರೆ. ಅಂಥದ್ದೇ ಒಂದು ಪ್ರಕರಣ ಇಂದು ನಡೆದಿದ್ದು, ಕೆಲವರಿಗೆ ತಲೆನೋವಾಗಿ ಪರಿಣಮಿಸಿದ್ದರೆ, ಇನ್ನು ಕೆಲವರಿಗೆ ಮನರಂಜನೆಯಾಗಿ ಕಂಡುಬಂದಿತ್ತು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಬಳಿ ಇರುವ ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ನಡೆದ ಪ್ರತಿಭಟನೆ ವೇಳೆ ಇಂಥದ್ದೊಂದು ಪ್ರಸಂಗ ನಡೆದಿದೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡದ್ದರಿಂದ ಇಲ್ಲಿ ರೈತರು ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆ ವೇಳೆ ಒಬ್ಬ ರೈತ ಕಾರ್ಖಾನೆ ಎದುರಿರುವ ಮರವೊಂದನ್ನು ಏರಿ ಹೈಡ್ರಾಮಾ ಮಾಡಿದ್ದಾನೆ. ಮರವನ್ನೇರಿ ಬಾಯಿ ಬಡಿದುಕೊಂಡಿದ್ದಲ್ಲದೆ ಕೆಳಗೆ ಬೀಳುವುದಾಗಿ ಹೆದರಿಸಿದ್ದಾನೆ. ಈತನಿಂದಾಗಿ ಇತರ ಪ್ರತಿಭಟನಾಕಾರರಿಗೆ ಒಂದಷ್ಟು ಆತಂಕವಾಯಿತಾದರೂ ಕೊನೆಗೂ ಇತರ ರೈತರ ಮನವೊಲಿಕೆ ಬಳಿಕ ಈತ ಕೆಳಗೆ ಇಳಿದಿದ್ದಾನೆ.

ಹೋಟೆಲ್ ಕಾರ್ಮಿಕನಿಗೆ 55 ಕೋಟಿ ರೂಪಾಯಿ ಜಾಕ್​ಪಾಟ್​!
ರಾತ್ರಿ ಮನೆಯಲ್ಲಿದ್ದ ವಿವಾಹಿತೆ, ಬೆಳಗ್ಗೆ ಪಕ್ಕದ ತೋಟದಲ್ಲಿ ಶವವಾಗಿ ಪತ್ತೆ!; ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದ ಆತನೇ ಆರೋಪಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
