ಹಾವೇರಿ:ಬ್ಯಾಂಕ್​ನವರ ಧೋರಣೆಯಿಂದ ರೈತನೊಬ್ಬ ಪ್ರಾಣ ಕಳೆದುಕೊಂಡಿದ್ದು, ಸಂಬಂಧಿಕರು ಬ್ಯಾಂಕ್ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಲು ಮುಂದಾದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಬೇಕಾದ ಪರಿಸ್ಥಿತಿಯೂ ಉಂಟಾಗಿತ್ತು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದರ್ಶನ್ ಮುದ್ದಪ್ಪನವರ (30) ಪ್ರಾಣ ಕಳೆದುಕೊಂಡ ರೈತ. ಒನ್​ ಟೈಮ್​ ಸೆಟ್ಲ್​ಮೆಂಟ್​ ಮಾಡದ ಬ್ಯಾಂಕ್ ಧೋರಣೆಯಿಂದ ಸಾಲ ಹೆಚ್ಚಾದ ಪರಿಣಾಮವಾಗಿ ಈ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ತಂದೆಯ ಹೆಸರಲ್ಲಿ 4 ಲಕ್ಷ ರೂ. ಸಾಲ ಹಾಗೂ ಕೈಗಡವಾಗಿ 2 ಲಕ್ಷ ರೂ. ಸಾಲ ಹೊಂದಿದ್ದ. ಆದರೆ ಬ್ಯಾಂಕ್​ನವರು ಒನ್​ ಟೈಮ್ ಸೆಟ್ಲ್​ಮೆಂಟ್ ಮಾಡದ್ದಕ್ಕೆ ಬಡ್ಡಿ ಹೆಚ್ಚಾಗಿದೆ. ರೈತರಿಗೆ ಹೇಳದ ಒಟಿಎಸ್​ ಮೀಟಿಂಗ್ ಮಾಡಿದ್ದು, ಮತ್ತಷ್ಟು ಸಾಲ ಹೆಚ್ಚಾಗಲು ಕಾರಣ ಎಂದು ಆರೋಪಿಸಿರುವ ಸಂಬಂಧಿಕರು, ಯೂನಿಯನ್​ ಬ್ಯಾಂಕ್ ಶಾಖೆ ಎದುರು ಶವ ಇರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಆದರೆ ಶವದೊಂದಿಗೆ ಬ್ಯಾಂಕ್​ನತ್ತ ತೆರಳಲು ಸಂಬಂಧಿಕರು ಮತ್ತು ರೈತ ಮುಖಂಡರಿಗೆ ಪೊಲೀಸರು ಬಿಡದ್ದರಿಂದ ಪೊಲೀಸರು ಮತ್ತು ಅವರ ಮಧ್ಯ ನೂಕಾಟ ಉಂಟಾಗಿತ್ತು. ಇದರಿಂದ ಅಲ್ಲಿ ಒಂದಷ್ಟು ಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಪೊಲೀಸರು ಅವರನ್ನೆಲ್ಲ ವ್ಯಾನ್​ಗೆ ತುಂಬಿಸಿಕೊಂಡು ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಎಸ್​ಪಿ, ಎಎಸ್​​ಪಿ, ಇಬ್ಬರು ಡಿವೈಎಸ್​ಪಿ ಮತ್ತು ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತೆ ದೃಷ್ಟಿಯಿಂದ ಹಲಗೇರಿ ಠಾಣೆ ವ್ಯಾಪ್ತಿಯ ಈ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​ ವಹಿಸಲಾಗಿದೆ.
ಸ್ನಾನಕ್ಕೆಂದು ತೆರಳಿದಾಗಲೇ ಕುಸಿದ ಮನೆ; ಆ ಸಮಯದಲ್ಲಿ ಏಕಾಂಗಿಯಾಗಿದ್ದ ಮಹಿಳೆ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 13 =
Remember me
