ಹಾವೇರಿ:ರಾತ್ರೋರಾತ್ರಿ ಅಡಿಕೆ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು 52 ಅಡಕೆ ಮರಗಳನ್ನು ಮನಸೋ ಇಚ್ಛೆ ಕತ್ತರಿಸಿ ಹಾಕಿ ವಿಕೃತಿ ಮೆರೆದಿದ್ದಾರೆ. ಬೆಳಗ್ಗೆ ತೋಟಕ್ಕೆ ಬಂದ ರೈತನಿಗೆ ಆಘಾತ ಕಾದಿತ್ತು. ತನ್ನ ಮಕ್ಕಳಂತೆ ಪೋಷಿಸಿ ಬೆಳೆಸಿದ್ದ ಅಡಿಕೆ ಮರಗಳು ತುಂಡು ತುಂಡಾಗಿ ಬಿದ್ದಿದ್ದನ್ನು ನೋಡಿ ಕಂಗಾಲಾದ ರೈತ, ಸಂಕಟ ತಾಳಲಾರದೆ ಚೀರಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಇಂತಹ ಅಮಾನವೀಯ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ. ರೈತ ಅಡಿವೆಪ್ಪ ಆಲದಕಟ್ಟಿ ಎಂಬುವವರು ತನ್ನ ಜಮೀನಿನಲ್ಲಿ ಮೂರು ವರ್ಷದ ಹಿಂದೆ ಸಾಲ ಮಾಡಿ ಅಡಕೆ ಸಸಿಗಳನ್ನು ನೆಟ್ಟಿದ್ದರು. ಅಂದಿನಿಂದ ಕಷ್ಟಪಟ್ಟು ಗಿಡಗಳನ್ನು ಬೆಳೆಸಿದ್ದರು. ಇನ್ನೆರಡು ವರ್ಷದಲ್ಲಿ ಅಡಿಕೆ ಫಸಲು ಬರುತ್ತೆ. ಇರೋ ಕೈಸಾಲವನ್ನೂ ತೀರಿಸಿಕೊಳ್ಳಬಹುದು. ಆರ್ಥಿಕ ಸಮಸ್ಯೆ ಬಗೆಹರಿಯುತ್ತೆ ಎಂದು ಮನದಲ್ಲೇ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ದೀಪಾವಳಿ ಹಬ್ಬದ ರಾತ್ರಿಯೇ ದುಷ್ಕರ್ಮಿಗಳು ಅಡಕೆ ತೋಟಕ್ಕೆ ನುಗ್ಗಿ ಅಟ್ಟಹಾಸ ಮೆರೆದಿದ್ದಾರೆ.
ರೈತ ಅಡಿವೆಪ್ಪ ಆಲದಕಟ್ಟಿ ಅವರು ಎಂದಿನಂತೆ ತೋಟದ ಕೆಲಸ ಮುಗಿಸಿ ಬುಧವಾರ ಸಂಜೆ ಮನೆಗೆ ಹಿಂತಿರುಗಿದ್ದರು. ಊರೆಲ್ಲಾ ದೀಪಾವಳಿ ಹಬ್ಬದ ಸಡಗರದಲ್ಲಿತ್ತು. ರೈತನ ಮನೆಯಲ್ಲೂ ಹಬ್ಬ ಆಚರಿಸಲಾಗಿತ್ತು. ಇತ್ತ ಅದೇ ವೇಳೆಯಲ್ಲಿ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು 52 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಮರುದಿನ ಬೆಳಗ್ಗೆ ರೈತ ಅಡಿವೆಪ್ಪ ಆಲದಕಟ್ಟಿ ತೋಟಕ್ಕೆ ಬಂದಾಗ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ಗಿಡಗಳನ್ನು ಹಿಡಿದು ರೈತ ರೋದಿಸುತ್ತಿದ್ದ ಮನಕಲಕುವಂತಿತ್ತು. ‘ನಾನೇನು ಮಾಡಬೇಕು. ನನ್ನ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡಿದ್ದಾರೆ. ಸಾಲ ಮಾಡಿ ಅಡಿಕೆ ತೋಟ ಮಾಡಿದ್ದೆ… ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಿ’ ಎಂದು ಗೋಳಾಡಿದ್ದಾರೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
