ಮೈಸೂರು:ಮೈಸೂರಿನ ಜನರಿಗೆ ಹುಲಿ ಕಾಟ ಹೆಚ್ಚಾಗಿದ್ದು, ದನ ಮೇಕೆ, ಮನುಷ್ಯರ ಮೇಲೆ ಹುಲಿ ದಾಳಿ ನಡೆಯುತ್ತಿದೆ. ಇದೀಗ ದನ ಮೇಯಿಸಲು ಹೋಗಿದ್ದ ರೈತನೊಬ್ಬ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ನಡೆದಿದೆ.
ಬಾಲಾಜಿ ನಾಯಕ್ (42) ಮೃತ. ಹುಲಿ ದಾಳಿಗೆ ಬಲಿಯಾಗಿದ್ದಾರೆ. ಹುಲಿಗಾಗಿ ಅರಣ್ಯ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದೆ.
ನಡೆದಿದ್ದೇನು?:ಬಾಲಾಜಿ ನಾಯಕ್ ನಿನ್ನೆ ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ನಿನ್ನೆ ದನ ಮೇಯಿಸಲು ತೆರಳಿದ್ದನು. ಈ ವೇಳೆ ಹುಲಿ ದನಗಳ ಮೇಲೆ ದಾಳಿ ಮಾಡಿತ್ತು. ಆಗ ದನಗಳು ಹುಲಿಗೆ ಸಿಗದೆ ಓಡಿದವು. ದನಗಳು ಸಿಗದ ಹಿನ್ನೆಲೆ ಬಾಲಾಜಿ ಮೇಲೆ ಹುಲಿ ದಾಳಿ ನಡೆಸಿದೆ. ಅಕ್ಕ ಪಕ್ಕದ ಜಮೀನಿಲ್ಲಿದ್ದವರು ಕೂಗಾಡಿದ್ದಾರೆ. ಶಬ್ದ ಕೇಳಿ ಮೃತದೇಹ ಬಿಟ್ಟು ಹುಲಿ ಓಡಿ ಹೋಗಿತ್ತು.
ಹುಲಿಯು ಬಾಲಾಜಿ ನಾಯಕ್​ನ ದೇಹದ ಕೆಲ ಭಾಗವನ್ನು ತಿಂದು ಹಾಕಿದೆ. ಹುಲಿ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ತಹಶೀಲ್ದಾರ್ ಪರಶಿವಮೂರ್ತಿ, ಪಿಎಸ್‌ಐ ನಂದೀಶ್‌ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮತ್ತೆ ಅದೇ ಸ್ಥಳಕ್ಕೆ ಹುಲಿ ಬರುವ ಸಾಧ್ಯತೆ ಹಿನ್ನೆಲೆ ಅರಣ್ಯ ಇಲಾಖೆ ಅಲರ್ಟ್ ಆಗಿದೆ. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ. 30 ಕ್ಕು ಹೆಚ್ಚು ಕ್ಯಾಮರಾ ಟ್ರಾಪ್ ಗಳನ್ಜು ಅಳವಡಿಸಿ ಹುಲಿ ಜಾಡು ಹಿಡಿಯಲು ಮುಂದಾಗಿದ್ದಾರೆ. ಮೈಸೂರು ಅರಣ್ಯ ಅಧಿಕಾರಿಗಳಿಗೆ ಹುಲಿ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಜಿಲ್ಲೆಯ ನಂಜನಗೂಡು ತಾಲೂಕಿನ‌ ಮಹದೇವನಗರದಲ್ಲಿ ಜಾನುವಾರು ಮೇಲೆ ದಾಳಿ ಮಾಡಿ ರಕ್ಷಣೆಗೆ ಹೋದ ವೀರಭದ್ರ ಬೋವಿ ಎಂಬ ರೈತನ ಮೇಲೆ ಹುಲಿ ದಾಳಿ ನಡೆಸಿತ್ತು.
ಬಸ್ ಡ್ರೈವ್ ಮಾಡುವಾಗಲೇ ಚಾಲಕ ಹೃದಯಾಘಾತದಿಂದ ಸಾವು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + fourteen =
Remember me
