ಕಲಬುರಗಿ:ಕಲ್ಲಂಗಡಿ ಹಣ್ಣಿನ ಸೀಸನ್​ ಆರಂಭವಾಗಿದೆ. ಈ ವರ್ಷ ಕೆಂಪು ಕಲ್ಲಂಗಡಿಯ ಹಾಗೆಯೇ ಹಳದಿ ಕಲ್ಲಂಗಡಿ ಕೂಡ ಹೆಚ್ಚಾಗಿ ಮಾರುಕಟ್ಟೆಗೆ ಬರಲಾರಂಭಿಸಿದೆ. ಕೃಷಿಯಲ್ಲಿ ವೈವಿಧ್ಯತೆ ಕಂಡುಕೊಂಡರೆ ಮಾತ್ರವೇ ಲಾಭ ಸಾಧ್ಯ ಎನ್ನುತ್ತಾರೆ ಕಲಬುರಗಿಯ ಪದವೀಧರ ಕೃಷಿಕ ಬಸವರಾಜ್​ ಪಾಟೀಲ್​.
ಬಸವರಾಜ್​ ಪಾಟೀಲ್​ ಕಲಬುರಗಿಯ ಕೊರಳ್ಳಿ ಗ್ರಾಮದವರು. ವಿದ್ಯಾಭ್ಯಾಸದಲ್ಲಿ ಪದವಿ ಪಡೆದಿರುವ ಇವರು ಯಾವುದೇ ಕಂಪನಿಯಲ್ಲಿ ತಿಂಗಳ ಸಂಬಳಕ್ಕೆ ಸೇರದೆಯೇ ಕೃಷಿಯತ್ತ ಮುಖ ಮಾಡಿದರು. ಮಾಮೂಲಿ ಕೃಷಿಗಿಂತ ಬೇರೆ ರೀತಿಯ ಕೃಷಿ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಅರಿತು ಹಳದಿ ಕಲ್ಲಂಗಡಿ ಬೆಳೆಯುವ ಯೋಜನೆ ಹಾಕಿಕೊಂಡರು.
ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿ ಹಳದಿ ಕಲ್ಲಂಗಡಿ ಗಿಡವನ್ನು ವೈಜ್ಞಾನಿಕವಾಗಿ ಬೆಳೆಸಿದ್ದಾರೆ. ಕಲ್ಲಂಗಡಿ ಸೀಸನ್​ ಆರಂಭವಾಗಿ ಕೆಲವೇ ದಿನಗಳಲ್ಲಿ ಅವರಿಗೆ ಒಂದು ಲಕ್ಷ ರೂಪಾಯಿ ವ್ಯಾಪಾರವಾಗಿದೆಯಂತೆ. ಬಂಡವಾಳಕ್ಕಿಂತ ಹೆಚ್ಚಿನ ಲಾಭ ಬಂದೇ ಬರುತ್ತದೆ ಎನ್ನುವ ನಂಬಿಕೆ ಬಸವರಾಜ್​ ಕುಟುಂಬದಲ್ಲಿ ಮೂಡಿದೆ. ಸ್ಥಳೀಯ ಮಾರುಕಟ್ಟೆ ಹಾಗೂ ಬಿಗ್​ ಬಜಾರ್​ನಲ್ಲಿ ಈ ಹಳದಿ ಕಲ್ಲಂಗಡಿಯನ್ನು ಮಾರಾಟ ಮಾಡುತ್ತಿದ್ದಾರೆ ಬಸವರಾಜ್​. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ


ಕಾರ್ಟೂನ್​ನಲ್ಲಿ ಕಾಣಿಸಿಕೊಳ್ಳುವ ಮಹಿಳಾ ಪಾತ್ರಕ್ಕೂ ಹಿಜಾಬ್​ ಕಡ್ಡಾಯ!

ಬಿಎಂಸಿಯ ಮಾಸ್ಕ್​ ಕಲೆಕ್ಷನ್​ 30 ಕೋಟಿ ರೂಪಾಯಿ! ಒಂದೇ ದಿನದಲ್ಲಿ 46 ಲಕ್ಷ ರೂ. ಕಲೆಕ್ಷನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
