ಹಾವೇರಿ:ರೈತರ ಬೆಳೆ ಸಾಲ ಮನ್ನಾಕ್ಕೆ ಸಂಬಂಧಿಸಿ ಅರ್ಹತಾ ಪತ್ರಗಳನ್ನು ಪರಿಶೀಲಿಸಲಾಗುತ್ತಿದೆ. ಅರ್ಹ ರೈತರಿಗೆ ಸಾಲ ಮನ್ನಾ ಪ್ರಯೋಜನ ಸಿಗದೇ ಇದ್ದಲ್ಲಿ, ದಾಖಲೆ ಕೊಟ್ಟರೆ 24 ತಾಸಿನಲ್ಲಿ ಸರಿಪಡಿಸಲಾಗುವುದು.
ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು. ಹಿರೇಕೆರೂರ ತಾಲೂಕಿನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿ, ಹಣಕಾಸಿನ ಇತಿಮಿತಿಯಲ್ಲೇ ರಾಜ್ಯದ ರೈತರಿಗೆ ಅನುಕೂಲವಾಗುವಂತೆ ಬಜೆಟ್​ನಲ್ಲಿ ಯೋಜನೆ ರೂಪಿಸಲಾಗಿದೆ. ರೈತ ನೆಮ್ಮದಿಯಿಂದ ಬದುಕಬೇಕೆಂದು ನಮ್ಮ ಸಂಕಲ್ಪ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದರು.
ಸಹಕಾರಿ ಸಂಘಗಳ ಸದಸ್ಯರಿಗೆ ‘ಯಶಸ್ವಿನಿ’ ಯೋಜನೆ ಮರು ಜಾರಿ ಮಾಡುವ ಸಂಬಂಧ ಸಿಎಂ ಅವರೊಂದಿಗೆ ರ್ಚಚಿಸಲಾಗುವುದು. ಬಜೆಟ್ ಭಾಷಣದಲ್ಲಿ ಈ ಅಂಶ ತಪ್ಪಿಹೋಗಿದೆ.
| ಎಸ್.ಟಿ. ಸೋಮಶೇಖರ್ ಸಚಿವ
ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತೊಂದು ಸುತ್ತಿನ ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದು, ಪಕ್ಷದ ವರಿಷ್ಠರ ಜತೆ ರ್ಚಚಿಸಿ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ.
| ಅಶ್ವತ್ಥ್ ನಾರಾಯಣ್ ಡಿಸಿಎಂ (ಬೆಂಗಳೂರಲ್ಲಿ)
ಬೆಳಗಾವಿ ಜಿಲ್ಲೆ ವಿಭಜನೆ ವಿಷಯ ಸಿಎಂ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಆದರೆ, ವಿಭಜನೆಗೆ ಮೊದಲು ತಾಲೂಕುಗಳ ವಿಂಗಡಣೆ ಆಗಬೇಕು. ನಂತರವಷ್ಟೇ ಜಿಲ್ಲೆ ವಿಭಜನೆ ಬೇಕೋ, ಬೇಡವೋ ಎನ್ನುವುದನ್ನು ಅಂತಿಮಗೊಳಿಸಬೇಕಿದೆ.
| ರಮೇಶ್ ಜಾರಕಿಹೊಳಿ ಸಚಿವ (ಬೆಳಗಾವಿಯಲ್ಲಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
