ಚಾಮರಾಜನಗರ:‘ನೀವು ಅನುಮತಿ ಕೊಡಿ, ನನ್ನ ಹಣದಲ್ಲೇ ಕೆರೆ ಏರಿ ಒಡೆಸುತ್ತೇನೆ’ ಎಂಬುದಾಗಿ ರೈತರೊಬ್ಬರು ಹೇಳಿರುವುದು ಗಮನ ಸೆಳೆದಿದೆ. ಅಂದಹಾಗೆ ಸಾರ್ವಜನಿಕ ಹಿತಾಸಕ್ತಿಯಿಂದ ಅವರು ಕಾಡಾ ಅಧ್ಯಕ್ಷರಿಗೆ ಈ ಮಾತನ್ನು ಹೇಳಿದ್ದಾರೆ.
ಚಾಮರಾಜನಗರದಲ್ಲಿ ಕಾಡಾ ಅಧ್ಯಕ್ಷ ನಿಜಗುಣ ರಾಜು ಅವರ ಮುಂದೆ ಆಕ್ರೋಶ ವ್ಯಕ್ತಪಡಿಸಿದ ರೈತ, ಈ ಹೇಳಿಕೆ ನೀಡಿದ್ದಾರೆ. ಕೆರೆ ಏರಿ ತುಂಬಿ ಜಮೀನುಗಳಿಗೆ ನೀರು ತುಂಬಿದ್ದು, ಮುಂದೆ ಅಪಾಯ ಆಗಲಿರುವ ಸಾಧ್ಯತೆಯಲ್ಲಿ ಈ ರೈತ ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಮಾಡಲು ಕೆರೆ ಏರಿ ಎತ್ತರ ಮಾಡಿದ್ದಾರೆ. ಹೀಗೆ ಕೆರೆ ಏರಿ ಎತ್ತರಿಸಿರುವುದರಿಂದ ನೂರಾರು ಎಕರೆ ಪ್ರದೇಶದಲ್ಲಿ ನೀರು ನಿಂತಿದೆ. ಇದರ ಕುರಿತು ಈ ಹಿಂದೆ ಸಚಿವರು-ಶಾಸಕರಿಗೂ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಈ ರೈತ ಸಮಸ್ಯೆ ಕುರಿತು ಹೇಳಿಕೊಂಡಿದ್ದಾರೆ.
ದಯವಿಟ್ಟು ಕೆರೆ ಏರಿ ಒಡೆದು ಹಾಕಿ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡ ಈ ರೈತ, ಒಂದುವೇಳೆ ನೀವು ಮಾಡಿಸುವುದಿಲ್ಲ ಎಂದಾದಲ್ಲಿ ನನಗೆ ಅನುಮತಿ ಕೊಡಿ, ನಾನೇ ಹಣ ಖರ್ಚು ಮಾಡಿ ಕೆರೆ ಏರಿ ಒಡೆಸುತ್ತೇನೆ ಎಂಬುದಾಗಿ ಹೇಳಿದ್ದಾರೆ.
ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 9 =
Remember me
