ಶಿವಮೊಗ್ಗ:ಸಾವು ಎಲ್ಲಿ ಹೇಗೆ ಯಾವ ರೀತಿಯಲ್ಲಿ ಬಂದೆರಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದಕ್ಕೆ ಇದೀಗ ಈ ಪ್ರಕರಣ ಇನ್ನೊಂದು ಉದಾಹರಣೆ ಎಂದರೂ ತಪ್ಪೇನಲ್ಲ. ಇಲ್ಲೊಬ್ಬರ ರೈತ ಜಮೀನಿಗೆ ಕೆಲಸಕ್ಕೆಂದು ಹೋಗಿದ್ದು, ಜೀವಂತವಾಗಿ ಮರಳದಂಥ ಘಟನೆ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಬಿಳಗೋಡು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ದೊಡ್ಡಬಿಳಗೋಡು ಗ್ರಾಮದ ಜಿ.ಕೆ. ಗಣಪತಿ (75) ಎಂಬವರು ಸಾವಿಗೀಡಾದ ರೈತ.
ಇಂದು ಇವರು ಕೃಷಿ ಕೆಲಸಕ್ಕಾಗಿ ಜಮೀನಿಗೆ ಹೋದಾಗ ಜಾರಿ ಬಿದ್ದಿದ್ದಾರೆ. ಕಾಲು ಜಾರಿದವರು ಭಾರಿ ಮಳೆಯಿಂದಾಗಿ ನೀರು ತುಂಬಿದ್ದ ಬಾವಿಗೇ ಬಿದ್ದಿದ್ದಾರೆ. ಆದರೆ ಬಾವಿ ನೀರು ತುಂಬಿದ್ದರಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.
ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಸುಸ್ತಾಗಿ ಅಲ್ಲೇ ಮಲಗಿದ ಅಜ್ಜಿ!

ತಂದೆಯನ್ನೇ ಗುಂಡಿಟ್ಟು ಕೊಲ್ಲಿಸಿದ ಮಗಳು; ಅಪ್ಪ ಗಿಫ್ಟ್ ಕೊಟ್ಟಿದ್ದ ವಜ್ರದುಂಗುರವನ್ನೇ ಸುಪಾರಿಯಾಗಿ ನೀಡಿದ್ದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
