| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರೈತರ ಅಭ್ಯುದಯಕ್ಕೆ ವಿವಿಧ ಯೋಜನೆ ರೂಪಿಸುವ ಜತೆಜತೆಗೆ ಇಡೀ ಕೃಷಿ ವಲಯವನ್ನು ಸದೃಢ ಹಾಗೂ ಸ್ವಾವಲಂಬಿಯಾಗಿಸುವ ಉದ್ದೇಶದಿಂದ ಮಹತ್ವದ ಸುಧಾರಣೆಗಳತ್ತ ಸರ್ಕಾರ ಹೆಜ್ಜೆಯನ್ನಿಡಲು ತೀರ್ವನಿಸಿದೆ. ಅಷ್ಟೇ ಅಲ್ಲ, ರೈತರ ಮಕ್ಕಳಿಗಾಗಿ ರೂಪಿಸಿರುವ ವಿದ್ಯಾನಿಧಿ ಯೋಜನೆಯನ್ನು ವಿದೇಶಿ ವ್ಯಾಸಂಗಕ್ಕೂ ವಿಸ್ತರಿಸಲು ಸರ್ಕಾರ ಮುಂದಾಗಿದೆ.
ಪ್ರಸ್ತುತ ರೈತರ ಮಕ್ಕಳಿಗೆ ವಿದೇಶದಲ್ಲಿ ವ್ಯಾಸಂಗ ಮರೀಚಿಕೆಯೇ ಆಗಿದೆ. ಪ್ರತಿಭೆ ಇದ್ದರೂ ವಿದೇಶದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಹಣಕಾಸಿನ ಸಮಸ್ಯೆ ಅಡ್ಡಿಯಾಗಿದೆ. ಇನ್ನು ರೈತರ ಮಕ್ಕಳ ಸಲುವಾಗಿ ರೂಪಿಸಿರುವ ವಿದ್ಯಾನಿಧಿ ಯೋಜನೆ ಕೇವಲ ಕಾಲೇಜು ಶಿಕ್ಷಣ ಹಂತಕ್ಕೆ ಸೀಮಿತವಾಗಿದೆ. ಮಾಸಿಕ 2 ಸಾವಿರ ರೂ. ಮಾತ್ರ ನೀಡಲಾಗುತ್ತದೆ. ಇದರಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಾರ್ಷಿಕ 100 ರೈತ ಮಕ್ಕಳಿಗಾದರೂ ವಿದೇಶದಲ್ಲಿ ಯಾವುದೇ ರೀತಿಯ ಶಿಕ್ಷಣ ಪಡೆಯಲು ಬೇಕಾದ ಸಂಪೂರ್ಣ ವೆಚ್ಚವನ್ನು ಭರಿಸುವ ಬಗ್ಗೆ ಚಿಂತನೆ ನಡೆಸಿದೆ. ಉನ್ನತ ಶಿಕ್ಷಣ, ಸಂಶೋಧನೆ ಹೀಗೆ ಯಾವುದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರೂ ನೆರವು ನೀಡಲಾಗುತ್ತದೆ. ಈ ಯೋಜನೆಗೆ ವಾರ್ಷಿಕ 100 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಮುಂದಿನ ಬಜೆಟ್​ನಲ್ಲಿ ಈ ಯೋಜನೆ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.
ಸಾಂಪ್ರದಾಯಿಕ ಬಿತ್ತನೆ ಬೀಜ:ರಾಜ್ಯದಲ್ಲಿ ಈಗ ಬಿತ್ತನೆ ಬೀಜಕ್ಕೆ ಖಾಸಗಿ ಕಂಪನಿಗಳ ಮೇಲೆ ಅವಲಂಬನೆಯೇ ಹೆಚ್ಚಾಗಿದೆ. ಆ ಕಂಪನಿಗಳು ಸರ್ಕಾರದ ಸಬ್ಸಿಡಿಯನ್ನು ನುಂಗುವುದರ ಜತೆಗೆ ರೈತರಿಗೆ ಆಗುವ ನಷ್ಟಕ್ಕೆ ಉತ್ತರದಾಯಿಗಳಾಗಿರುವುದಿಲ್ಲ. ಔಷಧ ಮಾಫಿಯಾದ ರೀತಿಯಲ್ಲಿಯೇ ಬೀಜ ಮಾಫಿಯಾ ಸದ್ದಿಲ್ಲದೇ ಬೀಡು ಬಿಟ್ಟಿದೆ. ರಾಜ್ಯಕ್ಕೆ ಪ್ರತಿವರ್ಷ ಅಂದಾಜು 24 ಲಕ್ಷ ಟನ್ ಬಿತ್ತನೆ ಬೀಜ ಬೇಕು. ಅದರಲ್ಲಿ 3 ಲಕ್ಷ ಬೀಜ ನಿಗಮ ಉತ್ಪಾದನೆ ಮಾಡಿದರೆ, 5 ಲಕ್ಷ ಟನ್ ಸಬ್ಸಿಡಿಯಿಂದ ಬರುತ್ತದೆ. ಉಳಿದ 16 ಲಕ್ಷ ಟನ್ ಖಾಸಗಿ ಕಂಪನಿಗಳ ಮೇಲೆ ಅವಲಂಬಿಸಿರುತ್ತೇವೆ. ಸರ್ಕಾರದಿಂದಲೇ ಪ್ರಮಾಣೀಕೃತ ಬೀಜ ಸರಬರಾಜು ಮಾಡದಿರುವುದೇ ಕುಲಾಂತರಿ ಬೀಜಗಳ ಹಾವಳಿಗೆ ಕಾರಣವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯದ ಸಂಸ್ಥೆಗಳೇ ಬಿತ್ತನೆ ಬೀಜ ಉತ್ಪಾದನೆ ಮಾಡುತ್ತಿರುವಾಗ ಕೃಷಿ ವಿವಿಗಳು, ಇಲಾಖೆಗೆ ಸೇರಿದ ಸಾವಿರಾರು ಎಕರೆ ಫಾರಂಗಳಲ್ಲಿ ಖುದ್ದಾಗಿ ಉತ್ತಮ ಬಿತ್ತನೆ ಬೀಜ ಉತ್ಪಾದನೆ ಏಕೆ ಸಾಧ್ಯವಿಲ್ಲವೆಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಸರ್ಕಾರ ಏನು ಮಾಡಲಿದೆ?: ನಾಗಮಂಗಲ ತಾಲೂಕಿನಲ್ಲಿ 780 ಎಕರೆ, ದಾವಣಗೆರೆ ಜಿಲ್ಲೆಯ ಕತ್ತಲಗೆರೆಯಲ್ಲಿ 300 ಎಕರೆ ಹೀಗೆ ಬಹುತೇಕ ತಾಲೂಕುಗಳಲ್ಲಿ ಇಲಾಖೆಯ ಭೂಮಿ ಪಾಳು ಬಿದ್ದಿದೆ. ವಾರ್ಷಿಕ 2 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುವ ಮೂಲಕ ವಿಶ್ವವಿದ್ಯಾಲಯಗಳ ಸಂಶೋಧನೆಯನ್ನು ಬಳಸಿಕೊಂಡು 16 ಲಕ್ಷ ಟನ್ ಬಿತ್ತನೆ ಬೀಜವನ್ನು ಉತ್ಪಾದನೆ ಮಾಡಿ ರೈತರಿಗೆ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ಪಂಚ ವಾರ್ಷಿಕ ಯೋಜನೆಯನ್ನು ರೂಪಿಸಲಾಗುತ್ತದೆ. ಒಂದೇ ವರ್ಷಕ್ಕೆ 16 ಲಕ್ಷ ಟನ್ ಉತ್ಪಾದನೆ ಆಗುವುದಿಲ್ಲ. ಪ್ರತಿ ವರ್ಷ ಇಂತಿಷ್ಟು ಎಂಬಂತೆ ಉತ್ಪಾದನೆ ಮಾಡಲಾಗುತ್ತದೆ. ಆ ಮೂಲಕ ಖಾಸಗಿ ಲಾಬಿಯನ್ನು ಮಟ್ಟ ಹಾಕುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಯೋಜನೆಗಳು
2. ಬಿತ್ತನೆ ಬೀಜದಲ್ಲಿ ಕುಲಾಂತರಿ ಬೀಜಕ್ಕೆ ಕಡಿವಾಣ ಹಾಕಿ ಉತ್ತಮ ಬೀಜ ನೀಡುವುದು
3. ಮಣ್ಣಿನ ಸತ್ವ ಹೆಚ್ಚಿಸುವ ಮೂಲಕ ಸಾವಯವ ಮಣ್ಣು ಮಾಡುವುದು
ನಮ್ಮ ಸರ್ಕಾರ ರೈತರ ಆದಾಯ ವೃದ್ದಿಗೆ ಗಮನ ಹರಿಸುವುದರೊಂದಿಗೆ ಸಮಗ್ರ-ಸಮೃದ್ಧಿ ಕೃಷಿಗೆ ಉತ್ತೇಜನ ನೀಡಲಿದೆ. ಮಣ್ಣಿನ ಸಂರಕ್ಷಣೆಗೆ ಸಾವಯವ ಕೃಷಿ, ರಾಸಾಯನಿಕ ಮುಕ್ತ ಆಹಾರ ಉತ್ಪಾದನೆಗೆ ಸಿರಿಧಾನ್ಯಗಳಿಗೆ ಪ್ರೋತ್ಸಾಹ, ಬೀಜೋತ್ಪಾದನೆಯಲ್ಲಿ ಸ್ವಾವಲಂಬಿತನ, ಅತಿಯಾದ ನೀರಿನ ಅವಲಂಬನೆ ತಪ್ಪಿಸಿ ಹವಾಮಾನಕ್ಕೆ ಅನುಗುಣವಾದ ಕೃಷಿ ಪದ್ಧತಿ ರೂಢಿಸುವತ್ತ ಗಮನ ಹರಿಸಿದೆ.
| ಎನ್. ಚಲುವರಾಯಸ್ವಾಮಿ ಕೃಷಿ ಸಚಿವ
BBKS10: ಸಂಗೀತಾ ಫ್ಯಾನ್ಸ್​ಗೆ ಪವಿ ಕೊಟ್ಟ ಕೌಂಟರ್ ಇದು!​ ಇಲ್ಲಿದೆ ನೋಡಿ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
