ಹಾವೇರಿ:ಬರಗಾಲದಿಂದಾಗಿ ಬರಿದಾಗಿರುವ ವರದಾ ನದಿಗೆ ತಮ್ಮ ತೋಟದ ಬೋರ್‌ವೆಲ್ ನೀರನ್ನು ಹರಿಸುವ ಮೂಲಕ ತಾಲೂಕಿನ ಸಂಗೂರ ಗ್ರಾಮದ ರೈತ ಭುವನೇಶ್ವರ ಶಿಡ್ಲಾಪುರ ಅವರು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಳೆಯ ಕೊರತೆಯಿಂದಾಗಿ ವರದೆಯ ಒಡಲು ಬತ್ತಿ ತಿಂಗಳುಗಳ ಮೇಲಾಗಿದೆ. ಸಂಗೂರ ಗ್ರಾಮದಲ್ಲಿ ನಿರ್ಮಿಸಿದ್ದ ಬ್ಯಾರೇಜ್ ಬಳಿಯೂ ನೀರು ಖಾಲಿಯಾಗಿತ್ತು. ಇದರಿಂದ ದನ ಕರುಗಳಿಗೆ, ಪ್ರಾಣಿ ಪಕ್ಷಿಗಳು ಕಂಗಾಲಾಗಿದ್ದವು. ಇದನ್ನು ಮನಗಂಡ ಭುವನೇಶ್ವರ ಅವರು ಇತ್ತೀಚೆಗೆ ತಮ್ಮ ತೋಟದಲ್ಲಿ ಕೊಳವೆಬಾವಿ ಕೊರೆಸಿ, ಮೋಟಾರ್ ಅಳವಡಿಸಿದ್ದಾರೆ.
ಒಂದು ವಾರದಿಂದ ನಿತ್ಯವೂ ವರದೆಗೆ ಆರು ತಾಸುಗಳ ಕಾಲ ನೀರು ಹರಿಸುತ್ತಿದ್ದಾರೆ. ನದಿ ದಂಡೆಯಲ್ಲಿ ನಮ್ಮ ತೋಟವಿದೆ. ಮಳೆಗಾಲದಲ್ಲಿ ನದಿಯಲ್ಲಿ ನೀರು ಇರುವ ಸಂದರ್ಭದಲ್ಲಿ ನದಿಯ ನೀರನ್ನು ತೋಟಕ್ಕೆ ಬಳಸುತ್ತೇವೆ. ಬರಗಾಲ ಇರುವ ಕಾರಣ ನದಿಯಲ್ಲಿ ನೀರು ಇಲ್ಲದಾಗಿದೆ. ಹಾಗಾಗಿ, ನನ್ನಿಂದ ಇದೊಂದು ಅಳಿಲು ಸೇವೆ ಎಂದು ಮಾಡುತ್ತಿದ್ದೇನೆ.
ಹಗಲು ಎರಡು ತಾಸು, ರಾತ್ರಿ ಮೂರು ತಾಸು ಕರೆಂಟ್ ಬರುತ್ತದೆ. ಅದು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಬೋರ್‌ವೆಲ್‌ನಿಂದ ಬೆಳೆ ರಕ್ಷಿಸಿಕೊಳ್ಳುತ್ತಿರುವ ರೈತರಿಗೆ ಸಮಸ್ಯೆಯಾಗಿದೆ. ಸರ್ಕಾರ ರೈತರ ಪಂಪಸೆಟ್‌ಗಳಿಗೆ ನಿಯಮದ ಪ್ರಕಾರ ಏಳು ತಾಸು ವಿದ್ಯುತ್ ಒದಗಿಸಬೇಕು ಎಂದು ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ.
ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
