ಶಿವಶಂಕರ್ ಎಂ. ಹೆಬ್ಬಳ್ಳ ಮೈಸೂರು
ಲಾಕ್​ಡೌನ್ ಅವಧಿಯಲ್ಲಿ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಿ ಬರಲು ಎದುರಾಗುತ್ತಿರುವ ಅಡಚಣೆ ತಪ್ಪಿಸಲು ಕೃಷಿ ಇಲಾಖೆಯಿಂದ ನೀಡುತ್ತಿರುವ ಗ್ರೀನ್​ಪಾಸ್ ಪಡೆಯಲು ರೈತರೇ ನಿರಾಸಕ್ತಿ ತೋರುತ್ತಿದ್ದಾರೆ. ಇಲಾಖೆ ಎಷ್ಟೇ ಪ್ರಚಾರ ಮಾಡುತ್ತಿದ್ದರೂ ರೈತರು ಅತ್ತ ಸುಳಿಯುತ್ತಿಲ್ಲ.
ಲಾಕ್​ಡೌನ್ ನಿಯಮ ಬಿಗಿಯಾಗಿದ್ದು, ಅನವಶ್ಯಕವಾಗಿ ಓಡಾಡುವವರಿಗೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಈ ಮಧ್ಯೆ ರೈತರು ಹೊಲಗದ್ದೆಗಳಿಗೆ ತೆರಳಲು ಪರದಾಡುತ್ತಿದ್ದು ಅವರಿಗೂ ಪೊಲೀಸರು ಲಾಠಿ ರುಚಿ ತೋರುತ್ತಿದ್ದಾರೆ. ಇದೆಲ್ಲವನ್ನು ತಡೆಯಲು ಹಾಗೂ ರೈತರ ಹಿತದೃಷ್ಟಿಯಿಂದ ಕೃಷಿ ಇಲಾಖೆ ಎಲ್ಲ ಜಿಲ್ಲೆಗಳಲ್ಲಿ ರೈತರಿಗೆ ಹಾಗೂ ಕೃಷಿ ಪರಿಕರಗಳ ಮಾರಾಟಗಾರರಿಗೆ ಗ್ರೀನ್​ಪಾಸ್ ವಿತರಣೆಗೆ ಕ್ರಮ ಕೈಗೊಂಡಿದೆ. ಆದರೆ ರೈತರು ಕೃಷಿ ಇಲಾಖೆಯತ್ತ ಸುಳಿಯುತ್ತಿಲ್ಲ. ಪೊಲೀಸರನ್ನು ತಪ್ಪಿಸಿ ಹೋಗುವುದು, ಕಳ್ಳದಾರಿ ಹಿಡಿದು ತಮ್ಮ ಹೊಲಗದ್ದೆಗಳಿಗೆ ತೆರಳುತ್ತಿದ್ದಾರೆ. ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿಗೆ ಕೊಂಡೊಯ್ದು ಮಾರಲು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಅವಕಾಶ ನೀಡಿದ್ದಾರೆ. ಆದರೆ ತಮ್ಮ ಕ್ಷೇತ್ರದಿಂದ ಅಥವಾ ದೂರದಲ್ಲಿರುವ ಹೊಲಗದ್ದೆಗಳಿಗೆ ತೆರಳಲು ಮುಖ್ಯ ರಸ್ತೆಗಳಲ್ಲಿ ತೆರಳಲು ಕಷ್ಟ. ಇದರಿಂದ ರೈತರು ಜಮೀನುಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ಇತ್ತೀಚೆಗೆ ನಡೆದ ಸಭೆಯಲ್ಲಿ ರೈತ ಮುಖಂಡರು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಒತ್ತಾಯಿಸಿದ್ದರು. ಇದನ್ನು ಮನಗಂಡ ಸಚಿವರು ಗ್ರೀನ್ ಪಾಸ್ ವಿತರಣೆಗೆ ಸಭೆಯಲ್ಲೇ ಆದೇಶ ಮಾಡಿದ್ದರು.
ಪಾಸ್ ವಿತರಣೆಗೆ ಆದೇಶಿಸಿ ಒಂದು ತಿಂಗಳು ಕಳೆಯುತ್ತಿದ್ದರೂ ರೈತರು ಗ್ರೀನ್​ಪಾಸ್ ಪಡೆಯಲು ಆಸಕ್ತಿ ತೋರುತ್ತಿಲ್ಲ. ಅಲ್ಲದೆ ಯಾವುದೇ ಸಂದರ್ಭದಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಕೃಷಿ ಚಟುವಟಿಕೆ ಶುರುವಾದರೆ ರೈತರು ಜಮೀನುಗಳಿಗೆ ಓಡಾಡಲೇಬೇಕಿದೆ. ಮಾಹಿತಿ ಕೊರತೆಯೋ ಅಥವಾ ಪಾಸ್ ಪಡೆಯುವ ರಗಳೆಯೇ ಬೇಡ ಎನ್ನುವ ಮನೋಭಾವವೋ ತಿಳಿಯುತ್ತಿಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿಗಳು. ರೈತರಿಗೆ ಮಾಹಿತಿ ನೀಡಲು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳ ಸೂಚನಾ ಫಲಕ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರಗಳು ಸೇರಿ ಎಲ್ಲ ಕಡೆ ಗ್ರೀನ್ ಪಾಸ್ ಬಗ್ಗೆ ಮಾಹಿತಿ ತಿಳಿಸಲಾಗುತ್ತಿದೆ. ಅಲ್ಲದೆ ಪಾಸ್ ಪಡೆಯುವ ವಿಧಾನ ತಿಳಿಸಿದ್ದು, ರೈತರು ಇತ್ತ ಮುಖ ಮಾಡುತ್ತಿಲ್ಲ. ಬೆಳಗಾವಿ, ಬೀದರ್, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಸೇರಿ ಎಲ್ಲ ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ರೈತರು ಪಾಸ್ ಪಡೆದಿದ್ದಾರೆ. ಆದರೆ ರಸಗೊಬ್ಬರ, ಬಿತ್ತನೆ ಬೀಜ ಮಾರಾಟಗಾರರು, ಕೃಷಿಯಂತ್ರಧಾರೆ ಕೇಂದ್ರಗಳು ಸೇರಿ ಇತರ ಅವಶ್ಯಕ ಕೃಷಿ ಪರಿಕರಗಳ ಮಾರಾಟಗಾರರು ಮಾತ್ರ ಗ್ರೀನ್​ಪಾಸ್ ಸದ್ಬಳಕೆ ಮಾಡಿಕೊಂಡಿದ್ದಾರೆ. ಬೆಳಗ್ಗೆ 6ರಿಂದ 11ಗಂಟೆವರೆಗೆ ಮಳಿಗೆ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಪಾಸ್ ಪಡೆಯುವ ವಿಧಾನ
ದೂರದ ಊರುಗಳಿಗೆ ತೆರಳಲು ತೊಂದರೆ ಆಗುತ್ತಿರುವ ರೈತರು ಜಮೀನಿನ ಆರ್​ಟಿಸಿ, ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ, ವಾಸಿಸುತ್ತಿರುವ ವಿಳಾಸ, ಪಾಸ್​ಫೋರ್ಟ್ ಅಳತೆಯ ಫೋಟೋ ತಮ್ಮ ಹತ್ತಿರದ ಜಂಟಿ ಕೃಷಿ ನಿರ್ದೇಶಕರು, ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ದಾಖಲೆ ಪರಿಶೀಲಿಸಿ ಸ್ಥಳದಲ್ಲೇ ಗ್ರೀನ್​ಪಾಸ್ ವಿತರಿಸಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಪ್ರಚಾರ ಕೈಗೊಂಡಿದ್ದು, ರೈತರು ಕೃಷಿ ಇಲಾಖೆ ಅಧಿಕಾರಿಗಳನ್ನು ಸಂರ್ಪಸಬಹುದು.
ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ- ಒಂದು ದಿನದಲ್ಲಿ 10 ಪ್ರಕರಣ: 418ಕ್ಕೇರಿದ ಸೋಂಕಿತರ ಸಂಖ್ಯೆ: ನಿಮ್ಮ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
