ಬೆಂಗಳೂರು:ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವಂಥದ್ದು ಬಿದಿರು ಕೃಷಿ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಬಿದಿರು ಕೃಷಿ, ಮೌಲ್ಯವರ್ಧನೆ, ಮಾರುಕಟ್ಟೆ ಕುರಿತ ಕಾರ್ಯಾಗಾರ ಆಯೋಜಿಸಿ ರೈತರಿಗೆ ಅರಿವು ಮೂಡಿಸಲಾಗುವುದು ಎಂದು ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ತಿಳಿಸಿದ್ದಾರೆ.ಕೃಷಿ ಸಂಸ್ಥೆ, ಕೃಷಿ ಜಲಾನಯನ ಅಭಿವೃದ್ಧಿ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು ಬಿದಿರು ಸೊಸೈಟಿ ಸಹಯೊಗದೊಂದಿಗೆ ಶೇಷಾದ್ರಿ ರಸ್ತೆಯ ಕೃಷಿ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಣ್ಣ ಪ್ರಮಾಣದ ರೈತರಿಗೆ ಬಿದಿರು ಒಳ್ಳೆಯ ಲಾಭ ತರುತ್ತದೆ. ವೇಗವಾಗಿ ಬೆಳೆಯುವುದರ ಜತೆಗೆ ಪರಿಸರ, ಆರ್ಥಿಕ ಮತ್ತು ಜೀವನ ಭದ್ರತೆ ಒದಗಿಸಲು ಸಹಕಾರಿಯಾಗಲಿದೆ. ಪೀಠೋಪಕರಣಗಳ ತಯಾರಿಕೆ ಸೇರಿ ನಾನಾ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. ಪೇಪರ್​ ತಯಾರಿಕೆ, ಜವಳಿ ಉದ್ಯಮ, ಆಹಾರೋದ್ಯಮ ಮತ್ತು ಇಂಧನ ತಯಾರಿಕೆಯಲ್ಲಿ ಬಿದಿರನ್ನು ಬಳಸಲಾಗುತ್ತಿದೆ ಎಂದರು. ಬಿದಿರು ಸೊಸೈಟಿಯು ಬಿದಿರು ಕೃಷಿಯ ಕುರಿತು ಹೆಚ್ಚಿನ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ನೆರವು ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಸಚಿವರು, ಅಧಿಕಾರಿಗಳು ಹಾಗೂ ಸೊಸೈಟಿ ಮುಖ್ಯಸ್ಥರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸೋಣ ಎಂದು ಸಚಿವರು ಭರವಸೆ ನೀಡಿದರು.ಇದೇ ವೇಳೆ ನಾನಾ ತಜ್ಞರು ರೈತರಿಗೆ ಬಿದಿರು ಕೃಷಿ ಹೇಗೆ ಲಾಭದಾಯಕ ಎಂಬುದನ್ನು ನಾನಾ ತಜ್ಞರು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷೆ ಸಿ.ಎನ್​. ನಂದಿನಿ ಕುಮಾರಿ, ಕೃಷಿ ಆಯುಕ್ತ ವೈ.ಎಸ್​. ಪಾಟೀಲ್​ ಮತ್ತಿತರರಿದ್ದರು.
ರಾಕೇಶ್​ ಶೆಟ್ಟಿ ವಿರುದ್ಧ 21 ಕ್ರಿಮಿನಲ್​ ಕೇಸ್​: ಗೂಂಡಾ ಕಾಯ್ದೆಯಡಿ ಬಂಧಿಸಲು ಗಿರೀಶ ಮಟ್ಟಣ್ಣವರ್​ ಆಗ್ರಹ
ಗಮನ ಸೆಳೆದ ಬಿದಿರು ಪೆಲೆಟ್ಸ್​:ಬಿದಿರು ಪುಡಿ, ಕಟ್ಟಿಗೆ ಪುಡಿಗಳನ್ನು ಬಳಸಿ ತಯಾರಿಸಿದ ಪರಿಸರಸ್ನೇಹಿ ಬಿದಿರು ಪೆಲೆಟ್ಸ್​ಗಳು ಬಂದಿವೆ. ಇವು ಹೋಟೆಲ್​ಗಳಲ್ಲಿ ಅಡುಗೆ ತಯಾರಿಕೆ, ಕೈಗಾರಿಕೆಗಳ ಬಳಕೆಗೆ ಅತ್ಯಂತ ಉಪಯುಕ್ತವಾದ ಉರುವಲಾಗಿದೆ. ಇವು ಕೃಷಿ ವಿವಿ ಆವರಣದಲ್ಲಿ ನೋಡುಗರ ಗಮನಸೆಳೆದವು. ಜತೆಗೆ ಬಿದಿರಿನ ಓಲೆ&ಜುಮುಕಿ, ನೆಕ್ಲೆಸ್​ಗಳು, ಹ್ಯಾಂಗಿಂಗ್ಸ್​, ಅಲಂಕಾರಿಕ ಲ್ಯಾಂಪ್​ಗಳು, ಸಂಗೀತ ಪರಿಕರಗಳು, ಗಾಂಧೀಜಿ ಸೇರಿ ನಾನಾ ಗಣ್ಯ ವ್ಯಕ್ತಿಗಳ ಬಿದಿರಿನ ಕಲಾಕೃತಿಗಳು ವಿಶೇಷವಾಗಿದ್ದವು. ಬಿದಿರು ಕುರ್ಚಿ, ಟೇಬಲ್​ಗಳು ಮತ್ತಿತರ ಅಲಂಕಾರಿಕ ವಸ್ತುಗಳು ಪ್ರದರ್ಶನದಲ್ಲಿದ್ದವು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 1 =
Remember me
