ಕಲಬುರ್ಗಿ:ಇದು ಸಣ್ಣ, ಪ್ರಗತಿಪರ ರೈತನ ಯಶೋಗಾಥೆ! ಹತ್ತಾರು ಎಕರೆ ಜಮೀನಿದ್ದರೂ ಅತಿಯಾದ ಮಳೆ, ಬರದಿಂದ ಹಾಳು ಎಂದು ಗೋಳಾಡುವ ಈ ದಿನಗಳಲ್ಲಿ ಒಂದು ಎಕರೆ ಜಮೀನಿನಲ್ಲಿ ವಾರ್ಷಿಕ 5 ಲಕ್ಷ ರೂ.ಗೂ ಅಧಿಕ ಆದಾಯ ಪಡೆಯುತ್ತಿರುವ ರೈತರೊಬ್ಬರು ಇದೀಗ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದು, ಇಲ್ಲ ಎನ್ನುವುದಕ್ಕಿಂತ ಇದ್ದುದರಲ್ಲಿ ಹೇಗೆ ಅದಾಯ ಗಳಿಸಬಹುದು ಎಂಬುದಕ್ಕೆ ನಿದರ್ಶನವೂ ಆಗಿದ್ದಾರೆ.
ಇದನ್ನೂ ಓದಿ:ಮಂಡ್ಯ ಜೆಡಿಎಸ್‌ಗೆ ಎಚ್‌ಡಿಕೆಯೇ ದಿಕ್ಕು: ಎಂಪಿ ಚುನಾವಣೆಯಲ್ಲಿ ಮಾಜಿ ಸಿಎಂ ಸ್ಪರ್ಧೆ?
ಆಳಂದ ತಾಲೂಕು ಸಂಗೋಳಗಿ(ಸಿ) ಗ್ರಾಮದ ವೆಂಕಟರಾವ್ ಬಿರಾಜದಾರ್ ಎಂಬುವರಿಗೆ ಇರುವುದು ಒಂದೇ ಎಕರೆ ಜಮೀನು. ಇದ್ದುದರಲ್ಲಿ ಸಂತೃಪ್ತಿ ಕಂಡು ಒಂದಕ್ಕೆ ಎರಡು ಹೇಗೆ ಮಾಡಬಹುದೆಂದು ಯೋಚಿಸಿ ಕೃಷಿಯಲ್ಲಿ ಮುಂದಡಿ ಇಡುತ್ತಿದ್ದಾರೆ. ಒಂದು ಎಕರೆಯಲ್ಲಿ 20 ಗುಂಟೆ ಅಂಧ್ರದ ಬಾಲನಗರ ತಳಿಯ 125 ಸೀತಾಫಲ ಬೆಳೆದಿದ್ದಾರೆ. ಬದು (ವೇಸ್ಟ್ ಜಾಗ)ವಿನಲ್ಲಿ ಕರಿಬೇವು, ಆಕಳಿಗೆ ಮೇವು, ತೊಂಡಲಕಾಯಿ, ನುಗ್ಗಿ, ತೆಂಗು ಬೆಳೆದಿದ್ದಾರೆ.
ಮೂರು ತೆಂಗಿನ ಗಿಡ, ಐದು ಲಿಂಬೆ, ಎರಡು ಪೇರು, ಮೂರು ದಾಳಿಂಬೆ, ಆರು ನುಗ್ಗೆ, ಎರಡು ನೀರಲಹಣ್ಣು, ಏಳು ಚಿಕ್ಕು, 80 ಬಾರಿ ಹಣ್ಣಿನ ಗಿಡ ಹಾಕಿದ್ದಾರೆ. ಇದರ ಮಧ್ಯೆ ಮೆಂತೆ, ಪಾಲಕ್‌, ಕೊತ್ತಂಬರಿ, ಪುದಿನ, ಬಜ್ಜಿ ಪಲ್ಲೆ, ಚಿಲಕಿ ಪಲ್ಲೆ, ಮೂಲಂಗಿ, ತಪ್ಪಲು ಉಳ್ಳಾಗಡ್ಡಿ ಬೆಳೆದಿದ್ದಾರೆ.
ಇದನ್ನೂ ಓದಿ:ಮೂರು ಲೋಕಕ್ಕೂ ಖರ್ಗೆ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಿ; ಸಿಟಿ ರವಿ ವ್ಯಂಗ್ಯ
“ಇರುವ ಒಂದು ಎಕರೆ ಜಮೀನು, ವರ್ಷವಿಡೀ ಒದ್ದಾಡಿದರೂ ಏನೂ ಲಾಭ ಸಿಗಲ್ಲ. ಬದುಕುವುದೇ ಕಷ್ಟ. ಹೀಗಾಗಿ ಮಲ್ಟಿಪಲ್ ಕೃಷಿ ಮೂಲಕ ಏನಾದರೂ ಸಾಧನೆ ಮಾಡಬಹುದು ಎಂದು ಯೋಚಿಸಿ, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ದುಡಿಯುತ್ತಿದ್ದೇನೆ. ಪ್ರತಿವರ್ಷ ಎಲ್ಲ ಖರ್ಚು ಹೋಗಿ 4-5 ಲಕ್ಷ ರೂ. ಆದಾಯ ಬರುತ್ತಿದೆ” ಎಂದು ಸಂಗೋಳಗಿಯ ಪ್ರಗತಿಪರ ರೈತರಾದ ವೆಂಕಟರಾನ್ ಬಿರಾಜದಾರ್ ಹೇಳಿದ್ದಾರೆ.‌ಹಂತ-ಹಂತ ಆದಾಯ:ಹಂತ ಹಂತವಾಗಿ ಅದಾಯ ಬರುವಂತೆ ಯೋಜನೆ ಮಾಡಿಕೊಂಡಿದ್ದಾರೆ. ನಿತ್ಯದ ಆದಾಯಕ್ಕೆ ತರಕಾರಿ ಮಾರಾಟ, ಕುರಿ ವ್ಯವಹಾರದಿಂದ ತಿಂಗಳ ಆದಾಯ, ಹಣ್ಣು ಹಂಪಲು ಮಾರಾಟ ವಾರ್ಷಿಕ ಆದಾಯ ತಂದುಕೊಡುತ್ತಿವೆ. ಈ ಎಲ್ಲ ಒಟ್ಟಿಗೆ ಲೆಕ್ಕ ಹಾಕಿದರೆ ಸುಮಾರು 5 ಲಕ್ಷ ರೂ.ಗೂ (ಖರ್ಚು ವೆಚ್ಚ ತೆಗೆದು) ಅಧಿಕ ಗಳಿಸುತ್ತಿದ್ದಾರೆ. ಸೆಲ್ಫ್ ಸಸ್ಟೇನೆಬಲ್ ಮಾದರಿಯಲ್ಲಿ ಸಣ್ಣ ವ್ಯವಸಾಯ ಮಾಡುತ್ತಿರುವುದು ವಿಶೇಷ. 2019ರಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಪ್ರಶಸ್ತಿ ನೀಡಿ ಗೌರವಿಸಿದೆ.
SA vs IND: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಇಶಾನ್ ಕಿಶಾನ್ ಕೂಡ ಔಟ್! ಕಾರಣ ಹೀಗಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − two =
Remember me
