ಬೆಂಗಳೂರು:ಭೂಮಿ ವಿವರ ನೀಡುವ ಪಹಣಿಗೆ ಬೆಳೆ ವಿವರ ನಮೂದಿಸುವಲ್ಲಿ ಗ್ರಾಮಲೆಕ್ಕಿಗರು (ವಿಎ) ಮಾಡಿದ ಎಡವಟ್ಟಿನಿಂದಾಗಿ ರೈತರ ಬೆಳೆಯ ಬೆಂಬಲ ಬೆಲೆಗೆ ಕತ್ತರಿ ಬಿದ್ದಿದೆ. ಅನ್ನದಾತರ ಕಷ್ಟಕ್ಕೆ ಸ್ಪಂದಿಸಬೇಕಿದ್ದ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಆನ್​ಲೈನ್​ನಲ್ಲಿ ದೂರು ನೀಡುವಂತೆ ಹೇಳಿ ಜಾರಿಕೊಳ್ಳುತ್ತಿದ್ದಾರೆ.
ಇ-ಆಡಳಿತಕ್ಕೆ ಒತ್ತು ಕೊಡುವ ಸಲುವಾಗಿ ಬೆಳೆ ವಿವರ, ಸಮೀಕ್ಷೆ ನಡೆಸುವವರ ವಿವರಗಳು ರೈತರಿಗೆ ಅಂಗೈನಲ್ಲೇ ಸಿಗುವಂತೆ ಮಾಡುವ ಉದ್ದೇಶದಿಂದ ಸರ್ಕಾರ ‘ಬೆಳೆ ದರ್ಶಕ್’ ಮೊಬೈಲ್ ಆಪ್ ಪರಿಚಯಿಸಿದೆ. ಗ್ರಾಮಲೆಕ್ಕಿಗರು, ತರಬೇತಿ ಪಡೆದ ಖಾಸಗಿ ವ್ಯಕ್ತಿಗಳು ಹಳ್ಳಿಗಳಿಗೆ ತೆರಳಿ ಆಯಾ ಸರ್ವೆ ನಂಬರ್ ಜಮೀನಿಗೆ ಮಾಲೀಕನ ಹೆಸರು, ಬೆಳೆ ವಿವರ ಜತೆಗೆ ಫೋಟೋವನ್ನು ಆಪ್​ಗೆ ಅಪ್​ಲೋಡ್ ಮಾಡಬೇಕು. ಈ ಮಾಹಿತಿ ಕಂದಾಯ, ಕೃಷಿ ಇಲಾಖೆಯಲ್ಲಿ ಲಭ್ಯ ಇರಲಿದೆ. ‘ಬೆಳೆ ದರ್ಶಕ್’ನಲ್ಲಿ ನಮೂದಿಸಿರುವ ಮಾಹಿತಿಯೇ ಬೆಂಬಲ ಬೆಲೆಗೆ ಮಾರಾಟ ಮಾಡುವುದಕ್ಕೆ ಆಧಾರ. ಆದರೆ, ಬೆಳೆ ಮಾರಾಟಕ್ಕಾಗಿ ರೈತರು ಕೃಷಿ ಇಲಾಖೆಯ ರೈತಮಿತ್ರ ಕೇಂದ್ರಗಳಿಗೆ ತೆರಳಿದಾಗ ಇವರು ಬೆಳೆಯದ ಬೆಳೆ ವಿವರಗಳನ್ನು ಉಲ್ಲೇಖಿಸಿರುವುದು ಬಯಲಾಗಿದೆ. ಹೀಗಾಗಿ ಕೃಷಿ ಇಲಾಖೆಯವರು ಪಹಣಿ, ಬೆಳೆಗೆ ಹೊಂದಾಣಿಕೆ ಆಗದ ಕಾರಣಕ್ಕೆ ಬೆಳೆ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ರೈತರು ಬೆಳೆಗೆ ಬೆಂಬಲ ಬೆಲೆ ಸಿಗದೆ ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.
ಆಪ್​ನಲ್ಲಿ ದೂರು ಕೊಡಿ:ತಪ್ಪಾಗಿ ಬೆಳೆ ವಿವರ ನಮೂದಿಸಿರುವ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳನ್ನು ರೈತರು ಪ್ರಶ್ನಿಸಿದಾಗ ಬೆಳೆ ದರ್ಶಕ್ ಆಪ್​ನಲ್ಲಿ ದೂರು ನೀಡುವಂತೆ ಜಾರಿಕೆ ಉತ್ತರ ಕೊಡುತ್ತಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರು ದೂರು ಕೊಡುವಂತೆ ಹೇಳುವುದು ಎಷ್ಟು ಸರಿ ಹಾಗೂ ಎಲ್ಲ ರೈತರಿಗೂ ಆಂಡ್ರಾಯ್್ಡ ಮೊಬೈಲ್ ಬಳಕೆ ಮತ್ತು ಆಪ್​ನಲ್ಲಿ ದೂರು ಕೊಡುವಷ್ಟು ಜ್ಞಾನ ಇರಬೇಕಲ್ಲವೇ ಎಂಬುದು ರೈತರ ಪ್ರಶ್ನೆಯಾಗಿದೆ. ಒಂದು ವೇಳೆ ದೂರು ಕೊಟ್ಟರೂ ಮತ್ತೆ ಮೇಲ್ವಿಚಾರಕರು ದೂರುಕೊಟ್ಟ ರೈತನ ಜಮೀನಿಗೆ ಬಂದು ಪರಿಶೀಲನೆ ನಡೆಸಿ ವರದಿ ನೀಡುವಷ್ಟರಲ್ಲಿ ವರ್ಷವೇ ಬೇಕಾಗುತ್ತದೆ. ಈ ಬಾರಿ ಬೆಂಬಲ ಬೆಲೆಗೆ ಮಾರಾಟ ಅಸಾಧ್ಯ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ.
ಆಪ್​ನಲ್ಲಿ ಅಪ್ಲೋಡ್ ಆಗೋದು ಹೀಗೆ..
ಬೆಳೆ ದರ್ಶಕ್ ಬಂದಮೇಲೆ ಗ್ರಾಮಲೆಕ್ಕಿಗರು ಮತ್ತು ಖಾಸಗಿ ವ್ಯಕ್ತಿಗಳಿಗೆ ಜವಾಬ್ದಾರಿ ನೀಡಲಾಗಿದೆ. ವಿಸಿಗಳು ಗ್ರಾಮದ ಯುವಕನಿಗೆ ಯೂಸರ್ ಐಡಿ, ಪಾಸ್​ವರ್ಡ್ ಕೊಟ್ಟು ಕಚೇರಿಯಲ್ಲೇ ಕಾಲ ಕಳೆದಿದ್ದಾರೆ. ಹತ್ತಿರ ಜಮೀನಿಗೆ ತೆರಳಿ ವಿವಿಧ ಆಯಾಮಗಳಲ್ಲಿ ಫೋಟೋ ತೆಗೆದು ಎಲ್ಲ ಸರ್ವೆ ನಂಬರ್​ಗೆ ಒಂದೇ ಬೆಳೆ ಪೋಟೋ ಅಪ್​ಲೋಡ್ ಮಾಡಿ ಬೆಳೆ ವಿವರ ತಪ್ಪಾಗಿ ನಮೂದಿಸಿದ ಪರಿಣಾಮ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ನಮ್ಮ ಜಮೀನಿಗೆ ಅಧಿಕಾರಿಗಳು ಬಂದು ಹೋಗಿರುವುದೇ ನಮಗೆ ಗೊತ್ತಿಲ್ಲ. ನಮ್ಮ ಬೆಳೆಯ ವಿವರವನ್ನು ಸರ್ಕಾರಕ್ಕೆ ತಪ್ಪಾಗಿ ಕಳುಹಿಸಲಾಗಿದೆ. ಕೃಷಿ ಇಲಾಖೆಗೆ ಬೆಂಬಲ ಬೆಲೆಗೆ ರಾಗಿ ಮಾರಾಟಕ್ಕೆ ಹೋದಾಗ ಗೊತ್ತಾಯಿತು. ಅಧಿಕಾರಿ ಮಾಡಿದ ತಪ್ಪಿಗೆ ರೈತರಿಗೆ ಯಾಕೆ ಶಿಕ್ಷೆ?
| ಶಿವಕುಮಾರ್ ಕೆಂಗೇರಿ ಹೋಬಳಿ ರೈತ
ಸ್ಮಾರ್ಟ್​ಫೋನ್​ನಲ್ಲಿ ಸಚಿತ್ರ ಮಾಹಿತಿ ಲಭ್ಯ
ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ ‘ಬೆಳೆ ದರ್ಶಕ್’ ಆಪ್ ಪರಿಚಯಿಸಿದ್ದು, ರೈತರು ಸ್ಮಾರ್ಟ್ ಫೋನ್​ನಲ್ಲಿ ತಮ್ಮ ಹೊಲದ ಸಮೀಕ್ಷೆ ನಡೆಸಿದ ಸಚಿತ್ರ ವರದಿಯನ್ನು ನೋಡಬಹುದು. ಎರಡು ಪರದೆಯುಳ್ಳ ಆಂಡ್ರಾಯ್ಡ್ ಅಪ್ಲಿಕೇಷನ್ ಇದಾಗಿದ್ದು, ಬೆಳೆ ಸಮೀಕ್ಷೆ ವರ್ಷ, ಋತುಮಾನ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ನಂಬರ್ ವಿವರ ಇರುತ್ತದೆ.
| ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
