ಬೆಂಗಳೂರು: ರೈತ ಶಕ್ತಿಶಾಲಿ ಆಗಬೇಕೆಂಬ ಉದ್ದೇಶದಿಂದ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಾಯ್ದೆಯ 79 ಎ ಮತ್ತು ಬಿ ಬಗ್ಗೆ ಚರ್ಚೆ ಯಾಗುತ್ತಿದ್ದು, ವಿಧಾನಮಂಡಲದಲ್ಲಿ ಸಮರ್ಥ ಉತ್ತರ ಕೊಟ್ಟಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಈ ಕಾಯ್ದೆ ತಿದ್ದುಪಡಿಗೆ ಸಂಪುಟ ಉಪ ಸಮಿತಿ ರಚಿಸಿ ವರದಿ ಸಲ್ಲಿಸಿ ತಿದ್ದುಪಡಿಗೆ ಶಿಫಾರಸು ಮಾಡಿತ್ತು. ಹಿಂದೆ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಅವರೇ 79 ಎ ಮತ್ತು ಬಿ ಅವ್ಯವಹಾರಕ್ಕೆ ದಾರಿ ಮಾಡಿಕೊಡುತ್ತಿದೆ. ಇದನ್ನು ತೆಗೆಯಬೇಕು ಎಂದು ವಿಧಾನಸಭೆಯಲ್ಲೇ ಎರಡು ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಕಳೆದ ವಿಧಾನಸಭೆಯಲ್ಲಿ ಸ್ಪೀಕರ್​ಗೆ ಪತ್ರ ಕೊಟ್ಟು, ಈ ಕಾಯ್ದೆ ತೆಗೆಯಬೇಕೆಂದು ಕೋರಿದ್ದಾರೆ. ಅಲ್ಲದೆ, ಇಡೀ ಜಗತ್ತು ಇಂದು ಗ್ಲೊಬಲೈಸೇಷನ್, ಮಾಡರ್ನೆಸೇಷನ್ ಆಗುತ್ತಿದೆ. ನಾವು ಹೊಸ ದಿಕ್ಕಿನಲ್ಲಿ ಹೋಗಬೇಕು. ಮಾರಕ ಕಾಯ್ದೆ ತೆಗೆಯಿರಿ ಎಂದೂ ಹೇಳಿದ್ದಾರೆ ಎಂದರು.ಇದನ್ನೂ ಓದಿ:3 ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದರಿಂದ ಅಂಕಿತ; ಕೇಂದ್ರಕ್ಕೆ ಮತ್ತೊಂದು ಜಯ
5 ಜನ ಇರುವ ಕುಟುಂಬಕ್ಕೆ 54 ಎಕರೆ ಖರೀದಿಗೆ ಅವಕಾಶ ಕೊಡಲಾಗಿದೆ. ಆಣೆಕಟ್ಟು, ನದಿ ಪಾತ್ರಗಳ ಜಮೀನು ಯಾವುದೇ ಕಾರಣಕ್ಕೂ ಕೃಷಿ ಅಲ್ಲದೆ, ಬೇರೆ ಕಾರ್ಯಗಳಿಗೆ ಉಪಯೋಗ ಮಾಡದಂತೆ ಕಾಯ್ದೆ ಮಾಡಿದ್ದೇವೆ. ಪರಿಶಿಷ್ಟ ಜಾತಿ, ಪಂಗಡದ ಜಮೀನನ್ನು 79 ಎ ಹಾಗೂ ಬಿ ವ್ಯಾಪ್ತಿಯಿಂದ ಹೊರಗಿಟ್ಟಿದ್ದೇವೆ. ನಾವು ಅದನ್ನೂ ಕಾಯ್ದೆ ರೂಪದಲ್ಲಿ ತಂದಿದ್ದೇವೆ. ಇದರಿಂದ ಯಾವುದೇ ರೈತರಿಗೆ ತೊಂದರೆ ಆಗುವುದಿಲ್ಲ. ಗುಜರಾತ್ ಕೃಷಿ ರಪ್ತು ಪ್ರಮಾಣ ಶೇ.17 ಇದೆ. ನಮ್ಮ ರಾಜ್ಯದಲ್ಲಿ ಶೇ.5.17 ಅಷ್ಟೇ. ನಮ್ಮ ರೈತರ ಉತ್ಪನ್ನಗಳೂ ಬೇರೆ ಬೇರೆ ರಾಜ್ಯ, ದೇಶ, ವಿದೇಶಗಳಿಗೆ ಹೋಗಬೇಕು. ಉತ್ತಮ ಬೆಲೆ ಸಿಗಬೇಕು ಎಂಬುದು ಸರ್ಕಾರದ ಆಶಯ ಎಂದರು.
ಬೆಂಗಳೂರಿಗೆ ಎನ್ಐಎ ವಿಭಾಗೀಯ ಕಚೇರಿ ಶೀಘ್ರ: ಸುಳಿವು ನೀಡಿದ್ರು ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 13 =
Remember me
