ಬೆಂಗಳೂರು:ಹಿಂದಿನ ಸರ್ಕಾರ ಎಪಿಎಂಸಿ ಕಾಯ್ದೆ ತಂದಿದೆ. ಇದರಿಂದಾಗಿ ರೈತರ ಆದಾಯಕ್ಕೆ ಸ್ವಲ್ಪ ಪೆಟ್ಟು ಬಿದ್ದಿದ್ದು, ಕಳೆದ ಮೂರು ವರ್ಷದಲ್ಲಿ ರೈತರಿಗೆ ಸಮಸ್ಯೆಯಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸಚಿವರು, ಸಿಎಂ ಬಿಲ್​ ಬಗ್ಗೆ ಸಾಕಷ್ಟು ಸಭೆಗಳನ್ನ ನಡೆಸಿದ್ದರು. ನಾವು ಇವತ್ತು ಮತ್ತೊಮ್ಮೆ ಸಭೆ ನಡೆಸಿದ್ದೇವೆ. ಬರುವ ಅಧಿವೇಶನದಲ್ಲಿ ಮತ್ತೊಂದು ಬಿಲ್ ಮಂಡನೆ ಮಾಡುತ್ತೇವೆ. ಕರ್ನಾಟಕ ಎಪಿಎಂಸಿ ಬಿಲ್ ದೇಶದಲ್ಲೇ ಉತ್ತಮವಾಗಿತ್ತು. ಪ್ರಸ್ತುತ ತಂದಿರುವ ಬಿಲ್​ನಲ್ಲಿ ಕೆಲ ಬದಲಾವಣೆ ಮಾಡಬೇಕಾಗಿದ್ದು, ಇದಕ್ಕೆ ಕೆಲವುಗಳನ್ನು ಸೇರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಗ್ಯಾರಂಟಿ ಯೋಜನೆಯನ್ನು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು: ತಮ್ಮದೇ ಸರ್ಕಾರದ ಬಗ್ಗೆ ಕಿಡಿ ಕಾರಿದ ಶಾಮನೂರು ಶಿವಶಂಕರಪ್ಪ
ಶಿವಾನಂದ ಪಾಟೀಲ್ ಹಿಂದಿನ ಸರ್ಕಾರದವರು ಎಲ್ಲಿ ಬೇಕೋ ಅಲ್ಲಿ ಉತ್ಪನ್ನಗಳನ್ನು ಮಾರುವುದಕ್ಕೆ ಅವಕಾಶ ಕೊಟ್ಟಿದ್ದರು. ಆದರೆ ಇದರಿಂದ ರೈತರಿಗೂ ‌ಲಾಭ ಆಗಲಿಲ್ಲ. ಹಮಾಲಿಗಳಿಗೂ ಸಂಕಷ್ಟ ಆಗಿದೆ. ರೈತರ ಆದಾಯ ದ್ವಿಗುಣಗೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.
ದಲ್ಲಾಳಿಗಳನ್ನು ನಾವು ನಿಯಂತ್ರಿಸುತ್ತೇವೆ.ಅದಕ್ಕೆ ನಾವು ನಮ್ಮ‌ ಬಿಲ್ ತರುತ್ತೇವೆ. ಪ್ರಸ್ತುತ ಬಿಲ್​ನಿಂದ ಯಾವುದೇ ಲಾಭವಿಲ್ಲ, ಸಮಸ್ಯೆಯೇ ಹೆಚ್ಚು ಇದೆ. ಈಗ ಯಾವ ಅಳತೆ, ತೂಕ ಇದೆ ಹೇಳಿ? ಹೊಲದಲ್ಲೇ ಎಲ್ಲವನ್ನ ಬಾಚಿಕೊಂಡು ಹೋಗುತ್ತಾರೆ. ಅದಕ್ಕೆ ತಾನೇ ನಾವು ಮೊದಲಿನ ಬಿಲ್ ತರೋದು ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
