ಮೈಸೂರು:ನೀವು ತಿನ್ತಿರೋದು ರೈತರ ಅನ್ನ, ಹಸಿರು ಟವಲ್ ಹಾಕಿ ಮರ್ಯಾದೆ ಕಳೆಯುತೀರಾ? ಛೀ.. ಥೂ… ಜವಾಬ್ದಾರಿ ಇಲ್ಲ ಅಂದರೆ ತೊಲಗಿ… ಎಂದು ರೈತ ಮುಖಂಡರೊಬ್ಬರು ಕೃಷಿ ಸಚಿವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಲದರ್ಶಿನಿಯ ಅತಿಥಿಗೃಹದಲ್ಲಿದ್ದ ಕೃಷಿ ಸಚಿವ ಬಿ.ಸಿ‌. ಪಾಟೀಲ್​ಗೆ ಮಂಗಳವಾರ ರೈತರ ಪ್ರತಿಭಟನೆ ಬಿಸಿ ತಟ್ಟಿದೆ. ಜ್ಯೋತಿ ಭತ್ತ ಖರೀದಿಸುವಂತೆ ಮನವಿ ಸಲ್ಲಿಸಿದ ರೈತ ಮುಖಂಡರು, ಭತ್ತ ಖರೀದಿ ಕೇಂದ್ರ ತೆರೆಯದಿದ್ದರೆ ಘೇರಾವ್ ಹಾಕುವುದಾಗಿ ಸಚಿವರಿಗೆ ಎಚ್ಚರಿಸಿದರು.ಇದನ್ನೂ ಓದಿರಿಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
ಸಚಿವರ ಮುಂದೆ ಥೂ… ಛೀ… ಎಂದ ರೈತ ಮುಖಂಡ ಬಸವರಾಜು, ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆ ಅಂತ ಸರ್ಕಾರಕ್ಕೆ ಗೊತ್ತಿಲ್ಲ. ಜಿಲ್ಲಾಡಳಿತವನ್ನು ಕೇಳಿದರೆ ಸರ್ಕಾರ ಆದೇಶ ಮಾಡಬೇಕು ಅಂತಾರೆ. ಇದು ಅಕ್ಷಮ್ಯ ಅಪರಾಧ. ಜವಾಬ್ದಾರಿ ಇಲ್ಲ ಅಂದರೆ ತೊಲಗಿ ಎಂದು ಕಿಡಿಕಾರಿದರು.
ಈ ಬಗ್ಗೆ ಸಮಜಾಯಿಷಿ ನೀಡಲು ಮುಂದಾದ ಸಚಿವ ಬಿ.ಸಿ. ಪಾಟೀಲ್, ಹೀಗೆಲ್ಲ ಮಾತಾಡಬಾರದು ಎಂದರು. ಆಗ ಮತ್ತಷ್ಟು ಆಕ್ರೋಶಗೊಂಡ ಬಸವರಾಜು, ನಿಮ್ಮ ಮುಂದೆ ಕೈ ಮುಗಿದು ನಿಂತುಕೊಳ್ಳಬೇಕಾ? ನೀವೇನೂ ಆಕಾಶದಿಂದ ಬಂದಿದ್ದೀರಾ? ನೀವು ತಿಂತಾ ಇರೋದು ರೈತರ ಅನ್ನ, ನೀವು ಮಜಾ ಮಾಡ್ತಾ ಇರೋದು ರೈತರ ಅನ್ನ. ಹಸಿರು ಟವಲ್ ಹಾಕಿಕೊಂಡು ಮಾನ ಮರ್ಯಾದೆ ಕಳೆಯುತ್ತೀರಾ. ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಬೈದು ಅಲ್ಲಿಂದ ಹೊರಟರು.
ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಯಡಿಯೂರಪ್ಪನ ಬಂಡವಾಳ ನನ್ನ ಕೈಯಲ್ಲಿದೆ, ನನ್ನ ತಂಟೆಗೆ ಬಂದರೆ ಹುಷಾರ್​! ಸಿಎಂಗೆ ಎಚ್​ಡಿಕೆ ವಾರ್ನಿಂಗ್​

ಈ ಒಂದು ನಿರ್ಧಾರವೇ ದುರಂತ ಸಾವಿಗೆ ಕಾರಣವಾಯ್ತಾ? ಮೃತರ ಸಂಬಂಧಿ ಗೋಳಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + nineteen =
Remember me
