|ಕೆ.ಎನ್.ರಾಘವೇಂದ್ರಮಂಡ್ಯ
ತೆರಿಗೆ ಪಾವತಿಸದ ಹಾಗೂ ಕೆಲ ಗ್ರಾಮಲೆಕ್ಕಿಗರ ವೈಯಕ್ತಿಕ ದ್ವೇಷದಿಂದಾಗಿ ರಾಜ್ಯದಲ್ಲಿ ಶೇ.40 ಜಮೀನನ್ನು ‘ಬೀಳು’ ಎಂದು ದಾಖಲೆಯಲ್ಲಿ ನಮೂದಿಸಿರುವ ಪರಿಣಾಮ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತೆರಿಗೆ ಪಾವತಿಸಲು ಮಾಲೀಕರು ಸಿದ್ಧವಿದ್ದರೂ ಸರ್ಕಾರವೇ ನಿರಾಸಕ್ತಿ ತೋರಿಸುತ್ತಿದೆ. ಕೆಲ ವರ್ಷಗಳ ಹಿಂದೆ ಮಾಡಿರುವ ತಪ್ಪಿನಿಂದಾಗಿ ಹಾಲಿ ಜಮೀನಿನ ಅನುಭವದಲ್ಲಿರುವ ರೈತರು ತೊಂದರೆಗೆ ಸಿಲುಕುವಂತಾಗಿದೆ. ಅಂದರೆ, ಆರ್​ಟಿಸಿಯಲ್ಲಿ ‘ಬೀಳು’ ಎಂದು ನಮೂದಾಗಿರುವುದರಿಂದ ಯಾವುದೇ ಸೌಲಭ್ಯ ಮಾಲೀಕರಿಗೆ ಸಿಗುತ್ತಿಲ್ಲ. ಖಾತೆ ಬದಲಾವಣೆಯೂ ಸಾಧ್ಯವಾಗುತ್ತಿಲ್ಲ.
ಸಂಕಷ್ಟದಲ್ಲಿ ರೈತರು:ಆರ್​ಟಿಸಿಯಲ್ಲಿ ‘ಬೀಳು’ ಎಂದು ನಮೂದಾಗಿರುವ ಬಗ್ಗೆ ರೈತರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ತಂದೆ, ತಾಯಿ ಮೃತಪಟ್ಟ ನಂತರ ಖಾತೆ ಬದಲಾವಣೆ ಮಾಡಿಕೊಳ್ಳಲು ಮುಂದಾದಾಗ ಸಮಸ್ಯೆ ಗೊತ್ತಾಗಿದೆ. ಇತ್ತ ‘ಬೀಳು’ ಎನ್ನುವುದನ್ನು ತೆಗೆಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೇಗಿದೆ ಎಂದರೆ, ಜಮೀನನ ಅನುಭವದಲ್ಲಿ ಮಾಲೀಕರೇ ಇದ್ದು, ಕೃಷಿ ಮಾಡುತ್ತಿದ್ದಾರೆ. ಆದರೆ, ದಾಖಲೆ ಮಾತ್ರ ಸರ್ಕಾರದ ಹೆಸರಿನಲ್ಲಿ ಇರುವಂತಾಗಿದೆ. ಇನ್ನು ಬಹುತೇಕ ಗ್ರಾಮೀಣ ಭಾಗದಲ್ಲಿ ರಸ್ತೆ ಪಕ್ಕದಲ್ಲಿರುವ ಹೊಲ, ಗದ್ದೆಗಳಲ್ಲಿಯೇ ವಾಣಿಜ್ಯ ಮಳಿಗೆ ಕಟ್ಟಿಸುತ್ತಿದ್ದಾರೆ. ಇವರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಅತ್ತ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಕಷ್ಟವೆಂದರೆ ಬೇರೆಯವರಿಗೆ ಮಾರಾಟ ಮಾಡಲೂ ಆಗುತ್ತಿಲ್ಲ. ಹಿಂದಿನ ತಲೆಮಾರಿನವರು ಆರ್ಥಿಕ ಸಮಸ್ಯೆಯಿಂದಾಗಿ ತೆರಿಗೆ ಪಾವತಿಸಿಲ್ಲ. ಕೆಲವೆಡೆ ಗ್ರಾಮಲೆಕ್ಕಿಗರು ವೈಯಕ್ತಿಕ ದ್ವೇಷದಿಂದಾಗಿ ಆರ್​ಟಿಸಿಯಲ್ಲಿ ‘ಬೀಳು’ ಎಂದು ದಾಖಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಮಸ್ಯೆ ಬಗೆಹರಿಯಬೇಕಾದರೆ ಸರ್ಕಾರದ ಮಟ್ಟದಲ್ಲಿಯೇ ಅಧಿಕೃತ ಆದೇಶವಾಗಬೇಕಿದೆ. ಬಹುತೇಕ ಜಮೀನಿನ ಮಾಲೀಕರು ಈವರೆಗೆ ಪಾವತಿಸಬೇಕಿರುವ ತೆರಿಗೆಯನ್ನು ಸರ್ಕಾರಕ್ಕೆ ಕೊಡಲು ಸಿದ್ಧವಿದ್ದಾರೆ. ಆದರೆ ಇದಕ್ಕೆ ಸರ್ಕಾರವೇ ಸಿದ್ಧವಿಲ್ಲ ಎನ್ನುವಂತಾಗಿದೆ. ಪರಿಣಾಮ, ಬೊಕ್ಕಸಕ್ಕೆ ನಷ್ಟವಾಗುತ್ತಿದೆ.
ಸದನದಲ್ಲಿ ಚರ್ಚೆ ಇಂದು?:ಇತ್ತೀಚೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾರ್ಯನಿಮಿತ್ತ ಮದ್ದೂರು ತಾಲೂಕು ಕೌಡ್ಲೆ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಗ್ರಾಮದ ಹಿರಿಯರಾದ ಕೆಂಪರಾಜು, ಸ್ವಾಮಿ, ಇನ್ನಿತರರು, ಆರ್​ಟಿಸಿಯಲ್ಲಿ ‘ಬೀಳು’ ಎಂದು ನಮೂದಾಗುತ್ತಿರುವುದರಿಂದ ಅಗಿರುವ ಸಮಸ್ಯೆಗಳನ್ನು ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ನಾಗಮಂಗಲ ಶಾಸಕ ಸುರೇಶಗೌಡ ಹಾಗೂ ಎಂಎಲ್​ಸಿ ಕೆ.ಟಿ.ಶ್ರೀಕಂಠೇಗೌಡ ಸದನದಲ್ಲಿ ಚರ್ಚೆ ಮಾಡಲು ಅವಕಾಶ ಪಡೆದಿದ್ದಾರೆ. ರಾಜ್ಯದಲ್ಲಿ ಎಷ್ಟು ಹೆಕ್ಟೇರ್ ಸರ್ಕಾರಿ ಬೀಳು ಜಮೀನು ಇದೆ? ಆರ್​ಟಿಸಿಯಲ್ಲಿ ಬೀಳು ಎಂದು ನಮೂದಾಗುತ್ತಿರುವುದು ಗಮನಕ್ಕೆ ಬಂದಿದೆಯೇ? ಮಾಲೀಕರ ಹೆಸರಿಗೆ ದಾಖಲೆ ತಿದ್ದುಪಡಿ ಮಾಡಲು ಅಡೆತಡೆ ಏನು? ತೆರಿಗೆ ಪಾವತಿಸಲು ಅವಕಾಶ ಇಲ್ಲದಿರುವುದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟದ ಮೊತ್ತವೆಷ್ಟು ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಮಾ. 9ರಂದು ಸಂಬಂಧಪಟ್ಟ ಸಚಿವರು ಉತ್ತರ ನೀಡುವ ಸಾಧ್ಯತೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 14 =
Remember me
