| ಪಾ.ಶ್ರೀ. ಅನಂತರಾಮ್ ಕೋಲಾರ
ಜಿಲ್ಲೆಯ ಮದ್ದೇರಿ ಗ್ರಾಮದ ಎಸ್.ಮುರಳೀಧರ್ ಮತ್ತು ಕಮಲಾ ದಂಪತಿ ಮಳೆ ಮತ್ತು ಬಚ್ಚಲು ನೀರನ್ನೇ ಬಳಸಿ ರೇಷ್ಮೆ, ಮೇವು, ಮಾವು, ಹೂವು ಹಾಗೂ ಮನೆಗೆ ಬೇಕಾಗುವಷ್ಟು ತರಕಾರಿ ಬೆಳೆದು ಕೃಷಿಯ ಖುಷಿ ಅನುಭವಿಸುತ್ತಿದ್ದಾರೆ. 10 ಎಕರೆಗೆ ನೀರುಣಿಸುತ್ತಿದ್ದ ಕೊಳವೆಬಾವಿ ಬತ್ತಿದ ವೇಳೆ ಧೃತಿಗೆಡದ ದಂಪತಿ ಮಳೆ ನೀರು ಸಂಗ್ರಹಿಸಿ ವರ್ಷವಿಡೀ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಮುಖ್ಯವಾಗಿ ಮಳೆಕೊಯ್ಲು ಪದ್ಧತಿ ಮೂಲಕ ಬೈವೋಲ್ಟಿನ್ ರೇಷ್ಮೆ ಉತ್ಪಾದನೆಯಲ್ಲಿ ಸಾಧನೆಗೈದಿದ್ದಾರೆ.
ಮರಗಡ್ಡೆ ಪದ್ಧತಿ: ರೇಷ್ಮೆ ಕೃಷಿಗೆ 2 ಎಕರೆಯಲ್ಲಿ ಮರಗಡ್ಡೆ ಪದ್ಧತಿ ಅನುಸರಿ ಸುತ್ತಿದ್ದಾರೆ. 10 ಅಡಿಗೆ ಒಂದು ಗಿಡ ನೆಟ್ಟು ಒಟ್ಟು 200 ಮರ ಬೆಳೆಸಿದ್ದಾರೆ. ರೇಷ್ಮೆ ಇಲಾಖೆ ನೀಡಿರುವ ನಾರು ಬಳಸಿಕೊಂಡಿದ್ದಾರೆ, ನರೇಗಾ ಯೋಜನೆಯಡಿ ಜೆಸಿಬಿಯಲ್ಲಿ ಗುಂಡಿ ಮಾಡಿ ಸಾವಯವ ಗೊಬ್ಬರ ಹಾಕಿ ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದಾರೆ.
ಹಿಪ್ಪು ನೇರಳೆಯನ್ನು ತಮ್ಮದೇ ಗೂಡಿನ ಮನೆಗೆ ಬಳಸಿಕೊಂಡು ವರ್ಷಕ್ಕೆ ಎರಡು ಸಲ ಬೈವೋಲ್ಟಿನ್ ತಳಿಯ ರೇಷ್ಮೆ ಉತ್ಪಾದಿಸಿ ವರ್ಷಕ್ಕೆ ಖರ್ಚು ಕಳೆದು ಕನಿಷ್ಠ 2 ಲಕ್ಷ ರೂ. ಲಾಭ ಗಳಿಸುತ್ತಿದ್ದಾರೆ.
ಬಚ್ಚಲು ನೀರಿನಿಂದ ಮೇವು:ಮಳೆ ನೀರು ಸಂಗ್ರಹಿಸಲು 16 ಲಕ್ಷ ಲೀಟರ್ ಸಾಮರ್ಥ್ಯದ ಕೃಷಿ ಹೊಂಡ ನಿರ್ವಿುಸಿದ್ದಾರೆ. ಮಳೆ ನೀರು ವ್ಯರ್ಥವಾಗದಂತೆ ಮಳೆ ಕೊಯ್ಲು ಅನುಷ್ಠಾನಗೊಳಿಸಿದ್ದಾರೆ. ಒಂದು ಹದ ಮಳೆಯಾದರೆ ವರ್ಷವಿಡೀ ಕೃಷಿಗೆ ಬಳಕೆ ಮಾಡಿಕೊಳ್ಳಬಹುದು ಎಂಬುದು ಮುರಳೀಧರ್ ಲೆಕ್ಕಾಚಾರ. ಜತೆಗೆ ಪ್ರತಿದಿನ ಮನೆಯಲ್ಲಿ ಉತ್ಪಾದನೆಯಾಗುವ ಹಸು-ಎಮ್ಮೆ, ಗಂಜಲ, ಸಗಣಿ, ಕುರಿ-ಮೇಕೆ, ಕೋಳಿ ಹೆಕ್ಕ, ಬಚ್ಚಲು ನೀರು ಬಳಸಿ ಮೇವು, ಜೋಳ ಬೆಳೆಯುತ್ತಿದ್ದಾರೆ.
ಕೃಷಿ ವಿಜ್ಞಾನಿಗಳು, ರೈತರ ಭೇಟಿ:ಮುರಳೀಧರ್ ತೋಟಕ್ಕೆ ರಾಜ್ಯವಲ್ಲದೆ ಹೊರ ರಾಜ್ಯದ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು ಭೇಟಿ ನೀಡುತ್ತಿದ್ದಾರೆ. ಮಳೆ ನೀರಿನಲ್ಲಿ ಕೃಷಿ ಮಾಡಿ ಸಾಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೇಷ್ಮೆ ಬೆಳೆಗಾರರು ಮದ್ದೇರಿ ರೈತನ ಬದ್ಧತೆಯಿಂದ ಪ್ರೇರಿತರಾಗಿ ತಾವೂ ಸಾಧಿಸುವ ಸಂಕಲ್ಪ ತೊಟ್ಟಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twelve + eight =
Remember me
