ಬೆಂಗಳೂರು:ಟೋಲ್​ಪ್ಲಾಜಾಗಳಲ್ಲಿ ವಾಹನ ದಟ್ಟಣೆ ನಿವಾರಿಸುವ ಸಲುವಾಗಿ ಫೆ.15ರ ಮಧ್ಯರಾತ್ರಿಯಿಂದಲೇ ಫಾಸ್ಟ್‌ಟ್ಯಾಗ್‌ ಬಳಕೆ ಕಡ್ಡಾಯವಾಗಿದ್ದು, ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನ ಸವಾರರಿಂದ ಡಬಲ್‌ ಶುಲ್ಕ ವಸೂಲಿ ಮಾಡುತ್ತಿದ್ದ ಟೋಲ್​ ಸಿಬ್ಬಂದಿ ಜತೆ ಹಲವೆಡೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ನೆಲಮಂಗಲ, ದೇವನಹಳ್ಳಿ, ಉಡುಪಿ, ತುಮಕೂರು, ಕೋಲಾರದಲ್ಲೂ ಟೋಲ್​ ಗಲಾಟೆಯಾಗಿದೆ. ಎಲ್ಲೆಲ್ಲಿ ಏನಾಯ್ತು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಇಂದಿನಿಂದ ಪಾಸ್ಟ್ಯಾಗ್ ಕಡ್ಡಾಯ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ವಾಹನವನ್ನು ರಸ್ತೆಗಿಳಿಸಿದ ಸವಾರರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಕುಮಟಾ ಟೋಲ್​ನಲ್ಲಿ ದುಪ್ಪಟ್ಟು ಶಲ್ಕು ತೆತ್ತು ಮುಂದೆ ಸಾಗಿದರು. ಕೆಲವರು ಟೋಲ್​ನಲ್ಲೇ ಫಾಸ್ಟ್‌ಟ್ಯಾಗ್‌ ರಿಚಾರ್ಜ್ ಮಾಡಿ ಮುಂದೆ ಸಾಗುತ್ತಿದ್ದರು. ಬಹುತೇಕ ವಾಹನಗಳು ಸಾಲುಗಟ್ಟಿ ನಿಂತಿದ್ದವು.ಇದನ್ನೂ ಓದಿರಿಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ
ಕೋಲಾರದಲ್ಲೂ ಫಾಸ್ಟ್​ಟ್ಯಾಗ್​ ಇಲ್ಲದ ವಾಹನ ಸವಾರರು ಟೋಲ್ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೆ ಇಳಿದರು. ಬೇರೆ ದಾರಿ ಇಲ್ಲದೆ ದುಪ್ಪಟ್ಟು ಹಣ ಪಾವತಿಸಿ ತೆರಳಿದರು. ಮುಳಬಾಗಿಲು ತಾಲೂಕಿನ ಹನುಮನಹಳ್ಳಿ ಬಳಿಯ ಲ್ಯಾಂಕೋ ಟೋಲ್ ಬಳಿಯೂ ಇದೇ ಪರಿಸ್ಥಿತಿ ಇತ್ತು.
ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ಇರೋ ಟೋಲ್ ಗೇಟ್​ನಲ್ಲಿ ಇಂದು ಫಾಸ್ಟ್​ಟ್ಯಾಗ್ ಇಲ್ಲದ ವಾಹನಗಳಿಗೆ ಡಬಲ್ ಶುಲ್ಕ ವಸೂಲಿ ಮಾಡಿಲ್ಲ. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ಯಥಾರೀತಿ ಶುಲ್ಕ ವಿಧಿಸುತ್ತಿದ್ದ ದೃಶ್ಯ ಕಂಡು ಬಂತು. ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನ ಸವಾರರಿಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸಿಬ್ಬಂದಿಗಳು ತಿಳಿಹೇಳಿದರು.
ಎರಡು ತಿಂಗಳ ಹಿಂದೆ 2 ಕೋಟಿಯಷ್ಟಿದ್ದ ಫಾಸ್ಟ್‌ಟ್ಯಾಗ್‌ ಬಳಕೆದಾರರ ಸಂಖ್ಯೆ ಇದೀಗ, 2.54 ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ ಶೇ.80 ಜನರು ಫಾಸ್ಟ್‌ಟ್ಯಾಗ್‌ ಬಳಕೆ ಮಾಡುತ್ತಿದ್ದು, ಇನ್ನೂ ಶೇ.20 ವಾಹನ ಮಾಲೀಕರು ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಅಳವಡಿಸಿಕೊಳ್ಳಬೇಕಿದೆ.
ಪತ್ನಿಯ ಕುಟುಂಬಸ್ಥರಿಂದಲೇ ಗಂಡನ ಹತ್ಯೆ! ಪ್ರೀತಿಯ ಗಂಡನ ಬರ್ತ್​ ಡೇ ಸಂಭ್ರಮದಲ್ಲಿದ್ದವಳಿಗೆ ಆಘಾತ…

ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
