ಬೀದರ್​:ಲಾಕ್​ಡೌನ್​ ನಿರ್ಬಂಧವನ್ನೂ ಮೀರಿ ವಿನಾಕಾರಣ ವಾಹನಗಳ ಸಮೇತ ರಸ್ತೆಗಿಳಿಯುವವರು ಒಂದೆಡೆಯಾದರೆ, ಎಮರ್ಜೆನ್ಸಿ ಇದ್ದರೂ ಒಂದೇ ಒಂದು ವಾಹನ ಸಿಗದೆ ಪರದಾಡುವವರು ಮತ್ತೊಂದೆಡೆ. ಇಂಥದ್ದೊಂದು ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಗಳನ್ನು ತಳ್ಳುವ ಗಾಡಿಯಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಂತಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಇಂಥದ್ದೊಂದು ಸನ್ನಿವೇಶ ಕಂಡುಬಂದಿದೆ. ವ್ಯಕ್ತಿಯೊಬ್ಬರ ಮಗಳು ಬಿದ್ದು ಕಾಲಿಗೆ ಗಾಯವಾಗಿದ್ದು ನಡೆಯಲಾರದ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ವಾಹನಗಳಿಗೆ ಹುಡುಕಾಡಿದರೂ ಒಂದೂ ಸಿಗದೆ ಕಡೆಗೆ ತಳ್ಳುಗಾಡಿಯ ಮೊರೆ ಹೋಗಿದ್ದಾರೆ.
ಮಗಳನ್ನು ತಳ್ಳುವ ಗಾಡಿ ಮೇಲೆ ಕೂರಿಸಿಕೊಂಡು ಈ ವ್ಯಕ್ತಿ ಬಸವಕಲ್ಯಾಣದ ತ್ರಿಪುರಾಂತದಿಂದ ಬಸವಕಲ್ಯಾಣ ತಾಲೂಕು ಆಸ್ಪತ್ರೆವರೆಗೆ ತಳ್ಳಿಕೊಂಡು ಬಂದಿದ್ದಾರೆ. ಲಾಕ್​ಡೌನ್​ನಿಂದಾಗಿ ಒಂದೂ ವಾಹನ ಸಿಗದ ಕಾರಣ ಮನೆಯಿಂದ ಇಲ್ಲಿಯವರೆಗೂ ಗಾಡಿ ತಳ್ಳಿಕೊಂಡೇ ಬರಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ವೈದ್ಯರ ಏಪ್ರನ್ ಧರಿಸಿ ತರಕಾರಿ ತರಲು ದ್ವಿಚಕ್ರ ವಾಹನದಲ್ಲಿ ಹೋದ; ಆಮೇಲಾಗಿದ್ದು ನಗೆಪಾಟಲು!

ಪೊಲೀಸರ ಕಟ್ಟುಕಟ್ಟಿನ ಕ್ರಮವೇ ಸಾವು ತಂದಿತಾ?; ಎದೆನೋವಿದ್ದ ಮಹಿಳೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 11 =
Remember me
